ಕನ್ನಡ ಚಿತ್ರರಂಗದ ಹಿರಿಯ ನಟ ರಾಮ್ ಕುಮಾರ್ ಅವರು ಕಟ್ಟಿಸಿದ ಸುಂದರವಾದ ಮನೆ ಹೇಗಿದೆ ಗೊತ್ತಾ?

Cinema
Advertisements

ನಮಸ್ತೆ ಸ್ನೇಹಿತರೆ, ರಾಮ್ ಕುಮಾರ್ ಎಂಬ ಹೆಸರು ಹೇಳಿದ ತಕ್ಷಣ ಪ್ರತಿಯೊಬ್ಬ ಕನ್ನಡಿಗನಿಗು ನೆನಪಾಗುವುದು ಅವರ ಸುಂದರವಾದ ಮುಖ, ನಿಷ್ಕಲ್ಮಶ ನಗು ಹಾಗು ಪ್ರೀತಿ ತುಂಬಿದ ನೋಟ ಎಂದರೆ ತಪ್ಪಾಗಲಾರದು ನಟ ರಾಮ್ ಕುಮಾರ್ ಇವರು 90ರ ದಶಕದಲ್ಲಿ ಚಾಕಲೇಟ್ ಹೀರೋ ಆಗಿ ಮಾಡಿ ಮಿಂಚಿದವರು. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಅಂತಾನೇ ಹೇಳಬಹುದು, ರಾಮ್ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಪ್ರಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ನಟ ಶೃಂಗಾರ ನಾಗಾರಾಜ್ ರವರ ಮಗ ಕೂಡ ಹೌದು. ರಾಮ್ ಕುಮಾರ್ ಅವರು ಚಿಕ್ಕ ವಯಸ್ಸಿನಲ್ಲಿಯೇ ನಟನೆಯ ಮೇಲೆ ತುಂಬಾ ಆಸಕ್ತಿ ಹೊಂದಿದ್ದರು ಇವರು ಆವೇಶ ಸಿನಿಮಾದ ಮೂಲಕ ರಾಮ್ ಕುಮಾರ್ ಅವರು ಚಿತ್ರರಂಗ ಪ್ರವೇಶಿಸಿದರು..

[widget id=”custom_html-4″]

Advertisements

ಮುತ್ತಿನ ಹಾರ, ಗೆಜ್ಜೆ ನಾದ, ಮಹಾ ಕ್ಷತ್ರಿಯ, ಕಾವ್ಯ, ತವರಿನ ತೊಟ್ಟಿಲು, ಹಬ್ಬ ಸ್ನೇಹ ಲೋಕ, ‌ಈಗೆ ಹಲವಾರು ಸಿನಿಮಾಗಳು ರಾಮ್ ಕುಮಾರ್ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತು. ಇನ್ನೂ ಡಾ.ರಾಜ್ ಕುಮಾರ್ ಅವರ ಮಗಳಾದ ಪೂರ್ಣಿಮಾ ಅವರನ್ನ ಮದುವೆಯಾಗಿರುವ ರಾಮ್ ಕುಮಾರ್ ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.. ಮಗಳು ಧನ್ಯ ರಾಮ್ ಕುಮಾರ್ ಹಾಗೂ ಮಗ ಧೀರನ್ ರಾಮ್ ಕುಮಾರ್ ಈಗಾಗಲೇ ರಾಮ್ ಕುಮಾರ್ ಅವರ ಮಕ್ಕಳು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.. ಇನ್ನೂ ನಟ ರಾಮ್ ಕುಮಾರ್ ಅವರ ಸುಂದರ ಮನೆ ಹೇಗಿದೆ ಎಂದು ಈ ಪೋಟೋದಲ್ಲಿ ನೋಡಬಹುದು..

[widget id=”custom_html-4″]

ರಾಮ್ ಕುಮಾರ್ ಅವರು 2013‌ರಲ್ಲಿ ಬಿಡುಗಡೆಯಾದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಸಿನಿಮಾದ ನಂತರ ಬೇರೆ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ ಅದರೆ ಇದೀಗ ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು ಎನ್ನುವ ಸಿನಿಮಾದಲ್ಲಿ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.. ಜೀವನದಲ್ಲಿ ಉತ್ತಮವಾದ ಸಿನಿಮಾ ಹಿನ್ನೆಲೆ ಹೊಂದಿರುವ ರಾಮ್ ಕುಮಾರ್ ಅವರ ಸರಳ ಹಾಗು ಸೌಜನ್ಯತೆ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತದೆ. ನಟ ರಾಮ್ ಕುಮಾರ್ ಅವರು ಮತ್ತೆ ಸಿನಿಮಾದಲ್ಲಿ ನಟಿಸಬೇಕಾ ನಿಮ್ಮ ಅನಿಸಿಕೆ ತಿಳಿಸಿ..