ತಂಗಿ ರಿಷಿಕಾ ಅವರನ್ನ ನೆನೆದು ಕಣ್ಣೀರಿಟ್ಟ ಆದಿತ್ಯಾ ! ಅಷ್ಟಕ್ಕೂ ರಿಷಿಕಾ ಅವರಿಗೆ ಆಗಿರೋದೇನು ಗೊತ್ತಾ ?

Cinema
Advertisements

ಸ್ನೇಹಿತರೇ, ಸ್ಯಾಂಡಲ್ವುಡ್ ನ ಖ್ಯಾತ ಹಿರಿಯ ನಿರ್ದೇಶಕರಲ್ಲಿ ರಾಜೇಂದ್ರ ಸಿಂಗ್ ಬಾಬು ಕೂಡ ಒಬ್ಬರು. ಮುತ್ತಿನ ಹಾರ, ಅಂತ ದಂತಹ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರುವ ರಾಜೇಂದ್ರ ಸಿಂಗ್ ಬಾಬು ಅವರಿಗೆ ಇಬ್ಬರು ಮುದ್ದಿನ ಮಕ್ಕಳಿದ್ದಾರೆ. ಅವರೇ ನಟ ಆದಿತ್ಯಾ ಮತ್ತು ನಟಿ ರಿಷಿಕಾ ಸಿಂಗ್. ಇನ್ನು ತುಂಬಾ ಗ್ಯಾಪ್ ನ ಬಳಿಕ ಮತ್ತೆ ಸಿನಿಮಾ ರಂಗಕ್ಕೆ ಮರಳಿ ‘ಮುಂದುವರೆದ ಅಧ್ಯಾಯ’ ಎಂಬ ಚಿತ್ರ ಮಾಡಿರುವ ನಟ ಆದಿತ್ಯ ಮಾಧ್ಯಮವೊಂದರ ಸಂದರ್ಶನದ ವೇಳೆ ತನ್ನ ತಂಗಿ ಇರುವ ಪರಿಸ್ಥಿತಿಯನ್ನ ನೆನೆದು ಕಣ್ಣೀರು ಹಾಕಿದ್ದಾರೆ.

[widget id=”custom_html-4″]

Advertisements

ಹೌದು, ಸಿನಿಮಾ ಹಾಗೂ ಕಿರುತೆರೆಯ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ರಿಷಿಕಾ ಸಿಂಗ್ ಅವರ ಬಗ್ಗೆ ಇತ್ತೀಚಿಗೆ ಯಾವುದೇ ಸುದ್ದಿ ಇಲ್ಲ, ಕಳೆದ ಏಳೆಂಟು ತಿಂಗಳಿಂದ ರಿಷಿಕಾ ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಕೂಡ. ಇದಕ್ಕೆ ಕಾರಣವೂ ಇದೆ. ಇದು ಕಳೆದ ವರ್ಷ ಜುಲೈ ತಿಂಗಳಿನಲ್ಲಿ ನಡೆದ ಘ’ಟನೆ. ರಿಷಿಕಾ ಸಿಂಗ್ ಅವರು ಬರ್ತ್ ಡೇ ಪಾರ್ಟಿಗೆಂದು ಹೋಗಿ ಮನೆಗೆ ಮರಳಿ ಬರುವಾಗ ಅವರಿದ್ದ ಕಾರು ಅ’ಪಘಾತ ಉಂಟಾಗಿ ಅವರಿಗೆ ಫ್ರಾಕ್ಚರ್ ಆಗಿತ್ತು. ಆದರೆ ಈ ಘಟನೆ ನಡೆದು ೯ ತಿಂಗಳಾಗುತ್ತಾ ಬಂದಿದ್ದರೂ ಅವರು ಚೇತರಿಸಿಕೊಂಡಿಲ್ಲವಂತೆ. ಇನ್ನು ನಡೆದಾಡಲು ಕೂಡ ಸಾಧ್ಯವಾಗದೇ ವೀಲ್ ಚೇರ್ ನಲ್ಲಿಯೇ ದಿನ ಕಳೆಯುತ್ತಿದ್ದಾಳೆ ಎಂದು ಆದಿತ್ಯ ತನ್ನ ತಂಗಿಯ ಸ್ಥಿತಿಯ ಬಗ್ಗೆ ಮಾತನಾಡಿ ಕಣ್ಣೀರಿಟ್ಟಿದ್ದಾರೆ.

[widget id=”custom_html-4″]

ನನ್ನ ತಂಗಿ ಸಂಪೂರ್ಣವಾಗಿ ಗುಣಮುಖಳಾಗಿ ನಡೆಯುವಂತಾಗಲು ಇನ್ನು ಸಮಯ ಬೇಕಾಗಿದ್ದು, ಸ್ವಲ್ಪ ಸ್ವಲ್ಪವೇ ರಿಕವರಿ ಆಗುತ್ತಿದ್ದಾರೆ ಎಂದು ಆದಿತ್ಯ ಹೇಳಿದ್ದಾರೆ. ಮಾನಸಿಕವಾಗಿ ಗಟ್ಟಿಯಾಗಿರುವ ನನ್ನ ತಂಗಿ ಇನ್ನು ಕೆಲವೇ ದಿನಗಳಲ್ಲಿ ನಡೆದಾಡಲಿದ್ದಾಳೆ ಎಂದು ಮಾತನಾಡುತ್ತಾ ಭಾವುಕರಾಗಿದ್ದಾರೆ ಆದಿತ್ಯ. ಇನ್ನು ನಮ್ಮ ಕುಟುಂಬವೆಲ್ಲಾ ಬರ್ತ್ ಡೇ ಪಾರ್ಟಿಗೆ ಹೋಗಿ ಬರುವಾಗ ಆ ದಿನ ತುಂಬಾ ಮಳೆ ಬಿದ್ದಿದ್ದರಿಂದ ಸ್ಕಿಡ್ ಆಗಿ ಈ ದರ್ಘಟನೆ ನಡೆದಿದೆ. ಆ ದಿನ ರಿಷಿಕಾ ಸೀಟ್ ಬೆಲ್ಟ್ ಹಾಕಿಕೊಂಡಿದ್ರೆ ಅವಳಿಗೆ ಈ ರೀತಿ ಆಗುತ್ತಿರಲಿಲ್ಲ ಎಂದು ತಂಗಿ ರಿಷಿಕಾ ಬಗ್ಗೆ ನೆನೆದು ಕಣ್ಣೀರು ಹಾಕುತ್ತಾ ಭಾವುಕರಾಗಿ ಮಾತನಾಡಿದ್ದಾರೆ ನಟ ಆದಿತ್ಯ.