ಬಿಳಿ ಸಾಸಿವೆಯ ಈ ಸರಳ ತಂತ್ರದಿಂದ ಯಾವುದೇ ಕೆಲಸದಲ್ಲಿ ನಿಮಗೆ ಜಯ ಸಿಗುತ್ತದೆ !

Adhyatma

ಕೆಲವರು ಯಾವುದೇ ಕಾರ್ಯ ಮಾಡಲು ಮುಂದಾದರೂ ಒಂದಲ್ಲ ಒಂದು ವಿಘ್ನ ಎದುರಾಗುತ್ತದೆ. ಅವರು ಏನಾದರೂ ಚಿಕ್ಕ ಪುಟ್ಟ ಕೆಲಸ ಮಾಡಲು ಪ್ರಯತ್ನಿಸಿದರೂ ಅದು ನೆರವೇರುವುದಿಲ್ಲ. ಮುಟ್ಟಿದೆಲ್ಲ ಮಣ್ಣು ಎಂಬ ರೀತಿಯಾಗುತ್ತದೆ. ಶುಭ ಕಾರ್ಯಗಳಾದ ಮದುವೆ, ಗೃಹಪ್ರವೇಶ, ನಾಮ ಕಾರಣ, ಹೊಸ ವ್ಯಾಪಾರದ ಪ್ರಾರಂಭ ಇತ್ಯಾದಿ ಶುಭ ಕಾರ್ಯಗಳು ಯಾವುದೇ ಅಡೆ ತಡೆ ಇಲ್ಲದೆ ನಿರ್ವಿಘ್ನವಾಗಿ ನಡೆಯಲು ಮತ್ತು ಜಮೀನಿನ ವ್ಯಾಪಾರ, ಕೋರ್ಟ್ ವ್ಯಾಜ್ಯ, ವ್ಯವಹಾರಗಳು ಮುಂತಾದ ಕೆಲಸಗಳು ನಿಮ್ಮ ಪರವಾಗಿ ನಡೆದು ನೀವು ಜಯಶಾಲಿಯಾಗಲು ಇಲ್ಲಿ ಒಂದು ಅತ್ಯಂತ ಸರಳ ತಂತ್ರವಿದಿದೆ.

ಕೇವಲ ಎರಡು ವಸ್ತುಗಳಿಂದ ಈ ತಂತ್ರವನ್ನು ಮಾಡಬಹುದು. ಇದಕ್ಕಾಗಿ ಬಿಳಿ ಸಾಸಿವೆ, ಬಿಳಿ ಉಪ್ಪು ಶುದ್ಧವಾದ ಬಿಳಿ ವಸ್ತ್ರ ಬೇಕಾಗುವುದು. ನೀವು ಶುಭ ಕಾರ್ಯಗಳನ್ನು ಮಾಡುವ ಮೊದಲು ಅಥವಾ ಯಾವುದೋ ಒಂದು ಕೆಲಸದ ಮೇಲೆ ಹೊರಗೆ ಹೋಗುವ ಮುನ್ನ ಈ ತಂತ್ರವನ್ನು ಮಾಡಿ. ಬಿಳಿ ಸಾಸಿವೆ ಮತ್ತು ಬಿಳಿ ಉಪ್ಪನ್ನು ಬಿಳಿಯ ವಸ್ತ್ರದಲ್ಲಿ ಇರಿಸಿ ಗಂಟು ಕಟ್ಟಿ. ನಂತರ ಇದನ್ನು ತಲೆಯಿಂದ ಕಾಲಿನವರೆಗೆ ನೀವರಿಸಿ. ಹೀಗೆ ಮಾಡುವುದರಿಂದ ನಿಮಗೆ ನಿಮ್ಮ ಕೆಲಸದಲ್ಲಿ ಯಾವುದೇ ತೊಂದರೆ ಇಲ್ಲದೇ ಜಯ ಸಿಗುತ್ತದೆ.

ಬಿಳಿ ಸಾಸಿವೆಗೆ ತನ್ನದೇ ಆದ ಮಹತ್ವವಿದೆ. ಇದನ್ನು ಮೃತ್ಯುಂಜಯ ಹೋಮ, ದೇವಿಗೆ ಸಂಭಂದ ಪಟ್ಟ ಕೆಲ ಹೋಮಗಳಲ್ಲಿ ಬಳಸಲಾಗುತ್ತದೆ. ಬಿಳಿ ಸಾಸಿವೆಯಲ್ಲಿ ಶ್ವೇತ ಲಕ್ಷ್ಮೀ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಬಿಳಿ ಸಾಸಿವೆ ಅತೀಂದ್ರಿಯ ಶಕ್ತಿ ಹೊಂದಿರುತ್ತದೆ. ಈ ತಂತ್ರ ಸಾರದಿಂದ ಶುಭ ಫಲ ದೊರೆಯುತ್ತದೆ. ಬಿಳಿ ಸಾಸಿವೆಯಲ್ಲಿ ಇರುವ ಅತೀಂದ್ರಿಯ ಶಕ್ತಿ ಹಾಗೂ ಲಕ್ಷ್ಮಿಯ ಆಶೀರ್ವಾದ ನಿಮಗೆ ಜಯ ತಂದು ಕೊಡುತ್ತದೆ.