ಚಿತ್ರರಂಗದಿಂದ ದೂರ ಉಳಿದ ಮೇಲೆ ನಟಿ ಪ್ರೇಮಾ ಅವರು ಈಗ ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, 90ರ ದಶಕದಲ್ಲಿ ವಿಭಿನ್ನ ರೀತಿಯ ಪ್ರೇಮಾ‌ ಕಥಾ ಚಿತ್ರಗಳಿಗೆ ನಟಿ ಪ್ರೇಮಾ ಅವರು ಸೂಕ್ತ ನಟಿಯಾಗಿ ಆಯ್ಕೆಯಾಗಿದ್ದರು.. ನಟಿ ಪ್ರೇಮಾ ಅವರು ಕೊಡವ ಜನಾಂಗಕ್ಕೆ ಸೇರಿದ್ದು ನೆರವಂಡ ಮನೆತನದವರು. ಇವರು ಜನವರಿ ‌6/1977‌ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.. ನಂತರ ಬೆಂಗಳೂರಿನಲ್ಲಿ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯಾದ ಬಳಿಕ ಪಿಯುಸಿಯನ್ನು ಎಸ್ ಎಸ್ ಎಮ್ ಆರ್ ವಿ ಕಾಲೇಜಿನಲ್ಲಿ ಮುಗಿಸಿ ಉತ್ತೀರ್ಣರಾದರು. ಅನಂತರ 1995‌ರಲ್ಲಿ‌ ತೆರೆಕಂಡ ಸವ್ಯಸಾಚಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.. ಇನ್ನೂ ಪ್ರೇಮಾ ಅವರ ಮೊದಲ ಸಿನಿಮಾವಾದ ಸವ್ಯಸಾಚಿ ಸಿನಿಮಾಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಾಯಕ ನಟರಾಗಿ ಕಾಣಿಸಿಕೊಂಡರು..

ನಂತರ 1996ರಲ್ಲಿ‌ ಬಿಡುಗಡೆಯಾದ ಓಂ‌ ಸಿನಿಮಾದ ಮೂಲಕ ನಟಿ ಪ್ರೇಮ ಅವರು ತಮ್ಮ ಪ್ರತಿಭೆಯನ್ನು ಜಗತ್ತಿಗೆ ತೋರಿಸಿದರು.. ರೀಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದಲ್ಲಿ ತೆರೆಕಂಡ ಓಂ‌ ಸಿನಿಮಾ ಶಿವಕುಮಾರ್ ಹಾಗು ನಟಿ ಪ್ರೇಮಾ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ತಂದು ಕೊಟ್ಟಿತು.. ನಂತರ ನಮ್ಮೂರ ಮಂದಾರ ಹೂವೆ, ಕೌರವ, ಉಪೇಂದ್ರ, ಚಂದ್ರಮುಖಿ ಪ್ರಾಣಸಖಿ, ಯಜಮಾನ, ಇನ್ನೂ ಮುಂತಾದ ಸಿನಿಮಾಗಳು‌ ನಟಿ ಪ್ರೇಮಾ ಅವರಿಗೆ ಖ್ಯಾತಿ ತಂದು ಕೊಟ್ಟವು..

ನಟಿ‌ ಪ್ರೇಮಾ ಅವರು ಕನ್ನಡ ಸಿನಿಮಾ ಮಾತ್ರವಲ್ಲದೆ ತೆಲುಗು ಹಾಗು ಮಲೆಯಾಳಂ ಸಿನಿಮಾಗಳಲ್ಲಿ ಕೂಡ ಅದ್ಬುತ ನಟನೆ ಮಾಡಿದ್ದರು.. ಪ್ರೇಮಾ ಅವರು ಕೇವಲ ಸಿನಿಮಾ ರಂಗ ಮಾತ್ರವಲ್ಲದೆ ಸ್ಪೋರ್ಟ್ಸ್ ನಲ್ಲೂ ಕೂಡ ಮಿಂಚಿದವರು. ಹೌದು, ರಾಷ್ಟ್ರಮಟ್ಟದ ಹೈ ಜಂಪ್ ಮತ್ತು ವಾಲಿ ಬಾಲ್ ಆಟದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.. ಇನ್ನೂ ಬರ ಬರುತ್ತಾ ಸಿನಿಮಾಗಳಲ್ಲಿ ಇವರಿಗೆ ಅವಕಾಶಗಳು ಕಡಿಮೆ ಆಗುತ್ತಿದ್ದಂತೆ ಚಿತ್ರ ರಂಗದಿಂದ ನಟಿ ಪ್ರೇಮಾ ದೂರಉಳಿದ್ರು.. ಸ್ನೇಹಿತರೆ ‌ನಿಮ್ಮ ಪ್ರಾಕಾರ ನಟಿ ಪ್ರೇಮಾ ಅವರು ಮತ್ತೆ ಸಿನಿಮಾ ರಂಗಕ್ಕೆ ಬರಬೇಕಾ ನಿಮ್ಮ ಅನಿಸಿಕೆ ತಿಳಿಸಿ..