ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆದ ಗುಂಡಮ್ಮ ಖ್ಯಾತಿಯ ಗೀತಾಗೆ ಸಿಕ್ಕ ಸಂಭಾವನೆ ಕೇಳಿದ್ರೆ ಅಚ್ಚರಿಯಾಗುತ್ತೆ !

Advertisements

ಕನ್ನಡ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ 8ರ ಸೀಸನ್ ಮೂರನೇ ವಾರಕ್ಕೆ ತಲುಪಿದ್ದು ಧನುಶ್ರೀ ಮತ್ತು ನಿರ್ಮಲಾ ಚೆನ್ನಪ್ಪ ಬಳಿಕ ಮತ್ತೊಬ್ಬ ಸ್ಪರ್ಧಿ ಬಿಗ್ ಮನೆಯಿಂದ ಹೊರಬಂದಿದ್ದಾರೆ. ಹೌದು, ಮೊದಲನೇ ವಾರ ಟಿಕ್ ಟಾಕ್ ಸ್ಟಾರ್ ಧನುಶ್ರೀ ಅವರಿಗೆ ಬಿಗ್ ಬಾಸ್ ಮನೆಯಿಂದ ಗೇಟ್ ಪಾಸ್ ಸಿಕ್ಕರೆ, ಎರಡನೇ ವಾರದಲ್ಲಿ ನಿರ್ಮಾಲಾ ಚೆನ್ನಪ್ಪ ಎಲಿಮನೇಟ್ ಆಗಿದ್ದರು. ಈಗ ಬ್ರಹ್ಮಗಂಟು ಸೀರಿಯಲ್ ನ ಗುಂಡಮ್ಮ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಬಿಗ್ ಮನೆಯಿಂದ ಹೊರಬಂದಿದ್ದಾರೆ. ಹಾಗಾದ್ರೆ ಮೂರೂ ವಾರಗಳ ಕಾಲ ಬಿಗ್ ಮನೆಯ ಸ್ಪರ್ಧಿಯಾಗಿದ್ದ ಗೀತಾ ಅವರು ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ.!

[widget id=”custom_html-4″]

Advertisements

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಗಳನ್ನ ಚೆನ್ನಾಗಿಯೇ ಮಾಡಿದ್ದರೂ, ಮನರಂಜನೆ ವಿಚಾರದಲ್ಲಿ ತುಂಬಾನೇ ಡಲ್ ಆಗಿದ್ದ ನಟಿ ಗೀತಾ ಅವರಿಗೆ ಮೂರನೇ ವಾರಕ್ಕೆ ಗೇಟ್ ಪಾಸ್ ಸಿಕ್ಕಿದೆ. ಹೌದು, ಅಸಲಿಗೆ ವೀಕ್ಷಕರು ಬಿಗ್ ಬಾಸ್ ನೋಡುವುದೇ ಮನರಂಜನೆಗೋಸ್ಕರ. ಆದರೆ ಸೀರಿಯಲ್ ಮೂಲಕ ಖ್ಯಾತರಾಗಿದ್ದ ನಟಿ ಗೀತಾ ಮನರಂಜನೆ ಕೊಡುವುದರಲ್ಲಿ ಸೋತಿದ್ದಾರೆ. ಹಾಗಾಗಿಯೇ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಬಿದ್ದ ಓಟಿನ ಪ್ರಕಾರ ಗುಂಡಮ್ಮ ಗೀತಾರವರನ್ನ ಅವರ ಬಿಗ್ ಬಾಸ್ ಮನೆಯಿಂದ ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

[widget id=”custom_html-4″]

ಬ್ರಹ್ಮಗಂಟು ಸೀರಿಯಲ್ ಮೂಲಕ ಖ್ಯಾತರಾಗಿದ್ದ ನಟಿ ಗೀತಾ ಕನಿಷ್ಠ ಅಂದರೂ ಎಂಟತ್ತು ವಾರಗಳ ಉಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಬಿಗ್ ಮನೆಯಿಂದ ಹೊರಬಂದಿರುವ ಗೀತಾ ಸಂಭಾವನೆ ಕೇಳಿದ್ರೆ ನಿಮಗೆ ಅಚ್ಚರಿ ಆಗುತ್ತೆ. ಹೌದು, ದುಬಾರಿಯಾಗಿಯೇ ಸಂಭಾವನೆ ಪಡೆದಿರುವ ಗೀತಾ ಅವರು ಒಂದು ವಾರಕ್ಕೆ ನಲವತ್ತು ಸಾವಿರದಂತೆ ಮೂರೂ ವಾರಕ್ಕೆ 1 ಲಕ್ಷದ 20 ಸಾವಿರ ಸಂಭಾವನೆ ಎನ್ನಲಾಗಿದೆ. ಇನ್ನು ಈ ವಾರ ಮನೆಯಿಂದ ಹೊರ ಹೋಗಲು ಗೀತಾ ಸೇರಿದಂತೆ ನಟಿ ನಿಧಿ ಸುಬ್ಬಯ್ಯ, ಸಿಂಗರ್ ವಿಶ್ವನಾಥ್, ಪ್ರಶಾಂತ್ ಸಂಬರ್ಗಿ, ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ ನಾಮಿನೇಟ್ ಆಗಿದ್ದರು.