ಕೊನೆಗೂ ಬಿಗ್ ಬಾಸ್ 8ರ ವಿನ್ನರ್ ಯಾರೆಂದು ಬಹಿರಂಗ ಮಾಡಿದ ಸುದೀಪ್ ! ಯಾರು ಗೊತ್ತಾ ?

Entertainment

ನಮಸ್ತೇ ಸ್ನೇಹಿತರೇ, ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ 8ರಿಯಾಲಿಟಿ ಶೋ ಕಾರ್ಯಕ್ರಮವನ್ನ ಈಗಾಗಲೇ ಅರ್ಧಕ್ಕೆ ಸ್ಟಾಪ್ ಮಾಡಿರೋದು ನಿಮಗೆಲ್ಲರಿಗೂ ಗೊತ್ತಿರೋ ವಿಚಾರವೇ..ಇನ್ನು ನೆನ್ನೆಯ ಎಪಿಸೋಡ್ ನಲ್ಲಿ ಹೊರಜಗತ್ತಿನಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದರ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಪ್ರಸಾರ ಮಾಡಲಾಗಿದ್ದು, ಬಿಗ್ ಬಾಸ್ ಕಾರ್ಯಕ್ರಮವನ್ನ ಬಂದ್ ಮಾಡಿರುವ ಬಗ್ಗೆ ಸ್ಪರ್ಧಿಗಳಿಗೆ ಹೇಳಲಾಗುತ್ತದೆ. ಇನ್ನು ಹೊರ ಜಗತ್ತಿನ ವಿಚಾರ ಹಾಗೂ ಕೆಲ ಗಂಟೆಗಳಲ್ಲೇ ಎಲ್ಲಾ ಸ್ಪರ್ಧಿಗಳು ಹೊರಹೋಗುವ ವಿಚಾರ ತಿಳಿದು ೧೧ ಸ್ಪರ್ದಿಗಳು ಕಣ್ಣೀರು ಹಾಕಿ ಪ್ರತಿಯೊಬ್ಬ ಸ್ಪರ್ಧಿಗಳು ತಮ್ಮ ಬೇಸರವನ್ನ ಹೊರಹಾಕುತ್ತಾರೆ.

ಇನ್ನು ಬಿಗ್ ಬಾಸ್ ನ ಕಣ್ಮಣಿ ಪ್ರತಿಯೊಬ್ಬ ಸ್ಪರ್ಧಿಗಳ ಬಿಗ್ ಬಾಸ್ ಜರ್ನಿಯ ವಿಟಿಯನ್ನ ಹಾಕಿ ಅವರ ನೋವು ನಲಿವುಗಳ ಕ್ಷಣಗಳನ್ನ ಪ್ರಸಾರ ಮಾಡಲಾಗುತ್ತದೆ. ಇನ್ನು ಸ್ಪರ್ಧಿಗಳ ತಮ್ಮ ವಿಡಿಯೋವನ್ನ ನೋಡಿ ಖುಷಿಯ ಪಡುವುದರ ಜೊತೆಗೆ ಕಣ್ಣೀರು ಹಾಕುತ್ತಾರೆ. ಇನ್ನು ಇದೆಲ್ಲಾ ಮುಗಿದ ಮೇಲೆ ಸ್ಫರ್ಧಿಗಳೆಲ್ಲಾ ತಾವು ಸುದೀಪ್ ಅವರ ಜೊತೆ ಮಾತನಾಡಬೇಕೆಂದು ಹೇಳುತ್ತಾರೆ. ಆಗ ಸುದೀಪ್ ಅವರು ಮಾತನಾಡುತ್ತಾ..ಎಲ್ಲಾ ಸ್ಪರ್ಧಿಗಳಿಗೂ ಈ ನಿಮ್ಮ ಕಿಚ್ಚನ ನಮಸ್ಕಾರ..ಅನಾರೋಗ್ಯದ ಕಾರಣದಿಂದ ನಾನು ಕೆಲ ವಾರಗಳಿಂದ ಬಿಗ್ ಬಾಸ್ ವೇದಿಕೆಗೆ ಬರಲು ಸಾಧ್ಯವಾಗಲಿಲ್ಲ. ಇನ್ನು ಹೊರಗಡೆ ಸೋಂಕು ಹೆಚ್ಚಾಗಿರುವ ಕಾರಣದಿಂದ ವೀಕೆಂಡ್ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ.

ಇನ್ನು ಇದೆ ಕಾರಣಕ್ಕೆ ಬಿಗ್ ಬಾಸ್ ಅರ್ಧಕ್ಕೆ ಮುಗಿಯುತ್ತಿದ್ದು, ಇದರಿಂದ ನನಗೂ ಕೂಡ ತುಂಬಾ ಬೇಸರದ ಜೊತೆಗೆ ದುಃಖ ಆಗುತ್ತಿದೆ. ನಾನು ನಿಮ್ಮೆಲ್ಲರನ್ನು ತುಂಬಾ ಪ್ರೀತಿಸುತ್ತೇನೆ..ನೀವೆಲ್ಲಾ ಸ್ಪರ್ಧಿಗಳೂ ಕೂಡ ಈ ಸಲದ ಬಿಗ್ ಬಾಸ್ ವಿನ್ನರ್ ಗಳಾಗಿದ್ದೀರಿ. ನಿಮ್ಮ ಈ ಬಿಗ್ ಬಾಸ್ ನ ಜರ್ನಿಯಿಂದ ನಿಮಗೆಲ್ಲಾ ಒಳ್ಳೆಯದಾಗುತ್ತದೆ ಎಂದು ಸುದೀಪ್ ಅವರು ತುಂಬಾ ಬೇಸರದಿಂದಲೇ ಸ್ಪರ್ಧಿಗಳಿಗೆ ಸಮಾಧಾನದ ಮಾತುಗಳನ್ನಾಡಿದ್ದಾರೆ. ಒಟ್ಟಿನಲ್ಲಿ ಬೇಸರ ಹಾಗೂ ದುಃಖದಲ್ಲಿದ್ದ ಸ್ಪರ್ಧಿಗಳಿಗೆ ಸುದೀಪ್ ಅವರ ಹಿತನುಡಿಗಳು ಕೊಂಚ ಮಟ್ಟಿಗಾದರೂ ಸಮಾಧಾನವನ್ನ ನೀಡಿದೆ ಎಂದು ಹೇಳಬಹುದು..ಸ್ನೇಹಿತರೇ, ನಿಮ್ಮ ಪ್ರಕಾರ ಈ ಬಿಗ್ ಬಾಸ್ ರಿಯಲ್ ವಿನ್ನರ್ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ..