ಬಿಗ್ ಬಾಸ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಔಟ್ ಆದ ಸ್ಪರ್ಧಿ ಯಾರು ಗೊತ್ತಾ ?ಸ್ಪರ್ಧಿಗಳು ಕ್ಷಮೆ ಕೇಳಿದ್ದೇಕೆ ನೋಡಿ..

Advertisements

ಎಷ್ಟು ಆ್ಯಂಗ್ರಿ ಮ್ಯಾನೋ ಅಷ್ಟೇ ಕೂಲ್ ಕ್ಯಾಪ್ಟನ್ ನಮ್ಮ ಕಿಚ್ಚ ಸುದೀಪ್. ಕಿಚ್ಚನ ಜೊತೆ ಮಾತಿಗಿಳಿದ್ರೆ ಸಾಕು ಅಲ್ಲಿ ಹರ್ಷ ತುಂಬಿರುತ್ತೆ. ಅದೇ ರೀತಿ, ವಾರದ ಕಥೆ ಕಿಚ್ಚ ಸುದೀಪ್ ಜೊತೆ ನೋಡಿದ್ದೀರಲ್ಲ..ಪ್ರತಿ ವಾರವೂ ಆ ಇಡೀ ವಾರ ನಡೆದ ಟಾಸ್ಕ್, ಹರಟೆ, ನಗು- ಅಳು, ವ್ಯಂಗ್ಯ, ಜಗಳದ ಬಗ್ಗೆ ಬಿಗ್ ಬಾಸ್ ಹೋಸ್ಟರ್ ಸ್ಪರ್ಧಿಗಳ ಜೊತೆ ಮಾತಿಗಿಳಿಯುತ್ತಾರೆ. ಹಾಗೆಯೇ, ಆ ದಿನ ಎಲಿಮಿನೇಷನ್ ಸಹ ನಡೆಯುತ್ತದೆ. ಅಲ್ಲಿ ಸ್ಪರ್ಧಿಗಳು ಕಾರಣ ನೀಡಿ ಆಯಾ ಆಯಾ ಕಂಟೆಸ್ಟೆಂಟ್ ಗಳ ಹೆಸರು ಸೂಚಿಸುತ್ತಾರೆ. ಕೊನೆಗೆ ಯಾರಿಗೆ ಹೆಚ್ಚು ವೋಟ್ ಬಿದ್ದಿರುತ್ತೋ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ನಿಮಗೆ ಎಲ್ಲರಿಗೂ ಗೊತ್ತೆ ಇದೆ. ಹೀಗೆ ವಾರದ ಕಥೆ ಕೇಳುವಾಗ ಕೊನೆಯಲ್ಲಿ ಸ್ಪರ್ಧಿಗಳ ವರ್ತನೆಗೆ ಕಿಚ್ಚ ಸುದೀಪ್ ಫುಲ್ ಗರಂ ಆಗಿ, ಕ್ಲಾಸ್ ತೆಗೆದುಕೊಂಡರು. ಬಿಗ್ ಬಾಸ್ ಮೊದಲ ಇನ್ನಿಂಗ್ಸ್ ನಲ್ಲಿದ್ದ ಸ್ಪರ್ಧಿಗಳು ಕಾಣೆಯಾಗಿದ್ದಾರೆ ಅನ್ನೋದು ವೀಕ್ಷಕರ ಕಂಪ್ಲೇಂಟ್ ಆಗಿತ್ತು.

[widget id=”custom_html-4″]

Advertisements

ಇದೇ ಅಭಿಪ್ರಾಯವನ್ನ ವ್ಯಕ್ತಪಡಿಸಿದ ಕಿಚ್ಚ ಸುದೀಪ್, ಸ್ಪರ್ಧಿಗಳ ಮನಸ್ಥಿತಿ, ಅವರ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ವಾರದ ಪಂಚಾಯ್ತಿ ವೇಳೆ ಬೇರೆಯವರು ಮಾತಾಡುವಾಗ ಇನ್ನೊಬ್ಬರು ಮಧ್ಯೆ ಮಾತನಾಡುವುದನ್ನ ಗಮನಿಸಿ ಕ್ಲಾಸ್ ತೆಗೆದಿಕೊಂಡ ಸುದೀಪ್, ಒಬ್ಬರು ವೇದಿಕೆ ಮೇಲೆ ಮಾತಾಡುತ್ತಿರುತ್ತಾರೆ ಅಂದ್ರೆ, ಅವ್ರಿಗೆ ಮರ್ಯಾದೆ ಇರಲ್ಲ, ಗೌರವನೂ ಇರಲ್ಲ. ಪ್ರತಿಯೊಬ್ಬರಿಗೂ ಮಾತನಾಡೋಕೆ ಅವಕಾಶ ಸಿಗುತ್ತೆ. ಇಲ್ಲಿ ಎಲ್ಲರಿಗೂ ಮಾತಾಡಲು ಅವಕಾಶ ಕೊಟ್ಟಿದ್ದೇವೆ. ನೀವು ಕೈ ಎತ್ತಿದ ತಕ್ಷಣವೇ ನಿಮ್ಮ ವಿವರಣೆ ತೆಗೆದುಕೊಂಡಿದ್ದೇವೆ. ಯಾರು ಏನೇ ಅಪರಾಧ ಮಾಡಿದ್ದರೂ ಸಹ, ಅವರ ವಿವರಣೆ ಇಲ್ಲದೆ ಶೋ ಆಗಿಲ್ಲ. ಇದನ್ನ ನೀವು ಒಪ್ಪಿಕೊಳ್ತೀರಿ ಎಂದು ನಾನು ನಂಬುತ್ತೇನೆ. ಹೀಗಿರುವಾಗ ಪ್ರಶ್ನೆ ಕೇಳಿದ್ಮೇಲೆ, ಅವರು ಉತ್ತರ ಕೊಡಬೇಕು ಎಂದರ್ಥ. ಅವರು ಬೇರೆಯವರ ಮೇಲೆ ಕಂಪ್ಲೇಂಟ್ ಮಾಡ್ದಾಗಲೂ, ಮತ್ತೆ ಮಾತನಾಡಲು ಅವಕಾಶ ನೀಡಲಾಗಿದೆ.

[widget id=”custom_html-4″]

ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ನಿಮ್ಮನ್ನು ಇಷ್ಟಪಟ್ಟು ನೋಡುತ್ತಿರುವಾಗ ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಆದರೆ, ನಿಮಗೆ ತಾಳ್ಮೆಯೇ ಇಲ್ಲ. ಯಾರೇ ಒಬ್ಬರು ಮಾತನಾಡುವಾಗ ಮಧ್ಯದಲ್ಲಿಯೇ ಮಾತನಾಡಲು ಶುರು ಮಾಡ್ತೀರಾ ಅಂದ್ರೆ, ವಾಟ್ ಕೈಂಡ್ ಆಫ್ ಎ ಡಿಸಿಪ್ಲಿನ್ ಈಸ್ ದಿಸ್. ಇದನ್ನ ವಾರ್ನಿಂಗ್ ಆಗಿ ತೆಗೆದುಕೊಳ್ಳಿ. ನೆಕ್ಸ್ಟ್ ಟೈಮ್ ನಾನು ಕೇಳೋದೇ ಇಲ್ಲ. ಉತ್ತರ ನೀಡಲು ನಿಮಗೆ ಅವಕಾಶ ಇದೆ ಅಂದಾಗ ಮತ್ಯಾಕೆ ಅಶಿಸ್ತಿನಿಂದ ನಡೆದುಕೊಳ್ತೀರಿ. ಈಸ್ ದಿಸ್ ಎ ಎಫೆಕ್ಟ್ ಆಫ್ 43 ಡೇಸ್. ಆ 72 ದಿನಗಳಲ್ಲಿ ಇಲ್ಲದಿರೋ ಕಂಟೆಸ್ಟೆಂಟ್ ಗಳು ವಾಪಾಸ್ ಬಂದಿದೀರಾ? ತಾಳ್ಮೆಯೇ ಇಲ್ಲ ನಿಮಗೆ ಅಂತ ಖಡಕ್ ಆಗಿ ಕಿಚ್ಚ ಸುದೀಪ್ ಎಚ್ಚರಿಕೆಯನ್ನ ಕೊಟ್ಟರು. ತದನಂತರ ಅಲ್ಲಿದ್ದ ಎಲ್ಲಾ ಸ್ಪರ್ಧಿಗಳು ತಮ್ಮ ವರ್ತನೆಗೆ ಬಿಗ್ ಬಾಸ್ ಹೋಸ್ಟರ್ ಕಿಚ್ಚ ಸುದೀಪ್ ಗೆ ಕ್ಷಮೆ ಕೇಳಿದ್ರು.

[widget id=”custom_html-4″]

ಇನ್ನು ಎಂದಿನಂತೆ ನಡೆದಿದ್ದ ನಾಮಿನೇಷನ್ ಪ್ರಕ್ರಿಯೆಯಲ್ಲಿ ದಿವ್ಯಾ ಸುರೇಶ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚುಡಾ ಅವರು ಸೇರಿ ನಾಲ್ಕು ಜನ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಇನ್ನು ವಾರದ ಕತೆ ಕಿಚ್ಚನ ಜೊತೆಯ ಭಾನುವಾರದ ಕಾರ್ಯಕ್ರಮದಲ್ಲಿ ಸುದೀಪ್ ಅವರು ನಡೆಸಿದ ಎಲಿಮನೇಷನ್ ಪ್ರಕ್ರಿಯೆಯಲ್ಲಿ, ಬಿಗ್ ಬಾಸ್ ೮ರ ಎರಡನೇ ಇನ್ನಿಂಗ್ಸ್ ನಲ್ಲಿ ಬಿಗ್ ಮನೆಯಿಂದ ಹೊರಹೋಗುವ ಮೊದಲ ಸ್ಫರ್ಧಿಯ ಹೆಸರನ್ನ ತಿಳಿಸಿದ್ರು. ತಾನು ಎಲಿಮನೇಟ್ ಆಗುವುದಿಲ್ಲವೆಂಬ ತುಂಬಾ ಆತ್ಮವಿಶ್ವಾಸದಿಂದ ಇದ್ದ ಪ್ರಶಾಂತ್ ಸಂಬರಗಿ ಎಲಿಮನೆಟ್ ಆದ ಸ್ಪರ್ಧಿಯಾಗಿದ್ದಾರೆ. ಆದರೆ ಪ್ರಶಾಂತ್ ಸಂಬರಗಿ ಮನೆಯಿಂದ ಹೊರಹೋದ ಮೇಲೆ, ಉಳಿದ ಹನ್ನೊಂದು ಸ್ಫರ್ಧಿಗಳಿಗೆ ಸೂಚನೆಯೊಂದನ್ನ ನೀಡಿದ್ದಾರೆ. ಅದೇನೇದರೆ ಸಂಬರಗಿ ಎಲಿಮನೇಟ್ ಆಗಿಲ್ಲ. ಅವರು ಮತ್ತೆ ಮೆನೆಯೊಳಗೆ ಬಂದ ಮೇಲೆ ಪ್ರಶಾಂತ್ ತಮಗೆ ಕಾಣಿಸುತ್ತಿಲ್ಲ ಎಂಬಂತೆ ಡ್ರಾಮ ಮಾಡಿ ಎಂದು ಸ್ಪರ್ಧಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಬಳಿಕ ಪ್ರಶಾಂತ್ ಅವರು ಮನೆಯೊಳಗೇ ಬಂದಿದ್ದು ಸ್ಪರ್ದಿಗಳಲೆಲ್ಲಾ ತಮಗ್ಯಾರಿಗೂ ಅವರು ಕಾಣಿಸುತ್ತಿಲ್ಲ ಎಂಬಂತೆ ಡ್ರಾಮಾ ಮಾಡಿದ್ದು ಮಾತ್ರ ವೀಕ್ಷಕರಿಗೆ ಸಿಕ್ಕಾ ಪಟ್ಟೆ ಮನರಂಜನೆಯಾಗಿದ್ದಂತೂ ಸತ್ಯ.