ಈ ಸೀರಿಯಲ್ ನ ಕಾಟ ತಡೆಯೋಕೇ ಆಗ್ತಿಲ್ಲ..ಮೊದ್ಲು ಲಾಕ್ ಡೌನ್ ಮಾಡ್ರಪ್ಪಾ ಎಂದು ಫ್ಯಾನ್ಸ್ ನಿಂದ ಸಿಕ್ಕಾಪಟ್ಟೆ ಟ್ರೋಲ್ !

Entertainment

ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಸೀರಿಯಲ್ ಗೀತಾ ತನ್ನ ವೀಕ್ಷಕರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಹೌದು, ಈ ಧಾರಾವಾಹಿಯ ಚಿತ್ರೀಕರಣ ಈಗ ಕಾಡಿನಲ್ಲಿ ನಡೆಯುತ್ತಿದ್ದು ನಟ ನಟಿಯರಾದ ಗೀತಾ ಮತ್ತು ವಿಜಿ ಅವರ ಎಪಿಸೋಡ್ ಗಳನ್ನ ನೋಡಿ ವೀಕ್ಷಕರು ಸುಸ್ತಾಗಿದ್ದಾರೆ. ಕಾಡಿನಲ್ಲಿ ಸಿಕ್ಕಿಹಾಕಿಕೊಳ್ಳುವ ಕಿರುತೆರೆಯ ಈ ಜೋಡಿ ಕಾಡಿನ ಜನರ ರೀತಿಯ ರೋಮ್ಯಾನ್ಸ್, ಹಾಗೂ ಅಲ್ಲಿನ ಸಂಪ್ರದಾಯ ನೋಡಿ ಇವರ ಕಾಟ ತಡೆದುಕೊಳ್ಳೋಕೆ ಆಗ್ತಿಲ್ವಲ್ಲಾಪ್ಪಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಗೀತಾ ಧಾರಾವಾಹಿಯವರು ಕಾಡಿನ ಸೀನ್ ಗಳನ್ನ ರಬ್ಬರ್ ನಂತೆ ಎಳೆಯುತ್ತಿರುವುದನ್ನ ನೋಡಿ ಏನಪ್ಪಾ ಇಷ್ಟೊಂದು ಬೋರ್ ಹೊಡೆಸ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಈ ಧಾರಾವಾಹಿಯ ವೀಕ್ಷಕರೇ ತಮ್ಮ ನೆಚ್ಚಿನ ಸೀರಿಯಲ್ ಬಗ್ಗೆ ಟ್ರೋಲ್ ಮಾಡುತ್ತಿರುವುದು ವಿಪರ್ಯಾಸ. ಇನ್ನು ಈ ಸೀರಿಯಲ್ ನ ಅಭಿಮಾನಿಗಳು ಗೀತಾ ಧಾರವಾಹಿ ಬಗ್ಗೆ ಹೇಗೆಲ್ಲಾ ಟ್ರೋಲ್ ಮಾಡಿದ್ದಾರೆ ನೋಡಿ..ಸೀರಿಯಲ್ ನಲ್ಲಿ ನಮಗೂ ಒಂದು ಪಾರ್ಟ್ ಕೊಡ್ರಪ್ಪಾ..ನಾವು ಕೂಡ ಕಾಡಲ್ಲಿ ದಾಸವಾಳ ನೋಡುತ್ತಾ ಕೂತಬಿಡ್ತಿವಿ..ಇವರ ಕಾಟವನ್ನ ತಡೆಯೋಕೇ ಆಗುತ್ತಿಲ್ಲಾ..ದಯವಿಟ್ಟು ಲಾಕ್ ಡೌನ್ ಮಾಡ್ರಪ್ಪಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು..ಕಾಡಲ್ಲಿದ್ದರೂ ಎಷ್ಟು ಚೆನ್ನಾಗಿ ಕನ್ನಡ ಮಾಡ್ತಾರಪ್ಪಾ..ನಿಜವಾಗಲು ಇವರೆಲ್ಲಾ ಕಾಡು ಮನುಷ್ಯರು. ಇದನ್ನ ನೋಡುತ್ತಿರುವ ನಾವೇ ನಿಜವಾದ ಕಾಡು ಮನುಷ್ಯರು ಎಂದು ವೀಕ್ಷಕರು ಟ್ರೋಲ್ ಮಾಡುತ್ತಿದ್ದಾರೆ.

ಆದಷ್ಟು ಬೇಗ ಈ ಸೀರಿಯಲ್ ಸ್ಟಾಪ್ ಮಾಡಿ, ಚೆನ್ನಾಗಿರೋ ಧಾರಾವಾಹಿನ ಜಾತ್ರೆ ತಾರಾ ಮಾಡಿಬಿಟ್ರಲ್ಲ ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಈ ಗೀತಾ ಧಾರಾವಾಹಿಗಿಂತ ವೀಕ್ಷಕರು ಮಾಡುತ್ತಿರುವ ಕಾಮೆಂಟ್ ಗಳೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಟ್ರೋಲ್ ಆಗುತ್ತಿವೆ. ಮತ್ತೆ ಕೆಲವರು ಕಾಡಲ್ಲಿ ಇರೋ ಜನ ಇಂಗ್ಲಿಷ್ ಮಾತಾಡ್ತಾರಾ ಎಂದು ಕಾಮೆಂಟ್ ಮಾಡಿದ್ದಾರೆ.