ಯಾವುದೇ ತಕರಾರು ಮಾಡದೆ ಬೈಕ್ ನ ಮೇಲೆ ಹೊರಟ ಹಸುವಿನ ಅಪರೂಪದ ವಿಡಿಯೋ !

Kannada News

ನಮಸ್ತೇ ಸ್ನೇಹಿತರೇ, ಗೋವನ್ನ ಪೂಜಿಸುವ ಒಂದೇ ಒಂದು ದೇಶ ಎಂದರೆ ಅದು ಭಾರತ. ತನ್ನ ಹಾಲನ್ನ ಜನರಿಗಾಗಿ ಕೊಟ್ಟು ಜೀವಿಸುವ ಪ್ರಾಣಿ ಅದು. ತುಂಬಾ ನಂಬಿಕಸ್ತ ಪ್ರಾಣಿಯೂ ಸಹ ಈ ಗೋವು ಆಗಿದೆ. ಇನ್ನು ಜನರು ಹಸುಗಳನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ದೂರದ ಪ್ರದೇಶಗಳಿಗೆ ಕರೆದೊಯ್ಯಲು ಟೆಂಪೋ, ಕ್ಯಾಂಟರ್ ದಂತಹ ದೊಡ್ಡ ದೊಡ್ಡ ವಾಹನಗಳನ್ನ ಬಳಸುತ್ತಾರೆ. ಒಂದು ವೇಳೆ ಹಸು ಹಠ ಮಾಡಿದಲ್ಲಿ ಟೆಂಪೋ ಲಾರಿಗಳಲ್ಲೇ ಹಸುವನ್ನ ಕೊಂಡಯ್ಯಲು ತುಸು ಕಷ್ಟಪಡಬೇಕಾಗುತ್ತದೆ.

ಈಗಿರುವಾಗ ಹಸುವನ್ನ ಒಂದು ಬೈಕಿನ ಮೇಲೆ ಕೊಂಡೊಯ್ಯಲು ಸಾಧ್ಯವೇ. ಯಾರೂ ಈ ರೀತಿ ಯೋಚನೆ ಸಹ ಮಾಡಲು ಸಾಧ್ಯವಿಲ್ಲ ಅಲ್ಲವಾ..ಆದರೆ ಇಲ್ಲೊಬ್ಬ ವ್ಯಕ್ತಿ ಹಸುವನ್ನ ತನ್ನ ಬೈಕಿನ ಮೇಲೆ ಕುಳ್ಳರಿಸಿಕೊಂಡು ಕರೆದೊಯ್ಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಅದು ಹೇಗೆ ಹಸುವು ಸ್ವಲ್ಪವೂ ಕೂಡ ಗಾಬರಿಗೊಳ್ಳದೆ ಕದಲದೆ ಬೈಕಿನ ಮೇಲೆ ಕೂರಲು ಸಧ್ಯ ಎಂಬ ಪ್ರಶ್ನೆ ನಿಮ್ಮ ಮನಸಿನಲ್ಲಿ ಮೂಡಿರಬಹುದಲ್ಲವೇ..

ಆದರೆ ವಿಚಿತ್ರ ಎಂದರೆ ಆ ವ್ಯಕ್ತಿಯ ಮೇಲೆ ಅದೇನು ನಂಬಿಕೆಯೋ ಆ ಹಸುವಿಗೆ..ಸ್ವಲ್ಪವೂ ಕೂಡ ಗಾಬರಿಗೊಳ್ಳದೆ, ತಕರಾರು ಮಾಡದೆ ಆರಾಮವಾಗಿ ಕುಳಿತು ಬೈಕಿನ ಮೇಲೆ ಸವಾರಿ ಮಾಡಿದೆ ಆ ಹಸು. ಇನ್ನು ಈ ವಿಡಿಯೋವನ್ನ ನೋಡಿದ ನೆಟ್ಟಿಗರು, ಕೆಲವರು ಕಾಮಿಡಿಯಾಗಿ ಕಾಮೆಂಟ್ ಗಳನ್ನ ಮಾಡಿದ್ರೆ ಮತ್ತೆ ಕೆಲವರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳನ್ನ ಮಾಡಿದ್ದಾರೆ. ಓಟ್ಟಿನಲ್ಲಿ ಅಪರೂಪದಲ್ಲಿ ಅಪರೂಪ ಎನಿಸುವ ಈ ವಿಡಿಯೋವನ್ನ ನೀವು ಒಮ್ಮೆ ನೋಡಿ..