ಸ್ಯಾಂಡಲ್ವುಡ್ ಸುಪ್ರೀಂ ಹೀರೊ ಶಶಿಕುಮಾರ್ ಅವರ ಮದುವೆ ಹೇಗಿತ್ತು ? ಯಾರೆಲ್ಲಾ ಬಂದಿದ್ರು ನೋಡಿ ?

Cinema

ನಮಸ್ತೇ ಸ್ನೇಹಿತರೇ, ಸ್ಯಾಂಡಲ್ವುಡ್ ಕಂಡ ಅತೀ ಸುಂದರ ನಟರಲ್ಲಿ ಸುಪ್ರೀಂ ಹೀರೊ ಎಂದೇ ಖ್ಯಾತರಾದ ಶಶಿಕುಮಾರ್ ಕೂಡ ಒಬ್ಬರು. ಡಾನ್ಸಿಂಗ್ ನಲ್ಲಿ ಮಿಂಚಿದವರು ಈ ಸ್ಪುರಧ್ರುಪಿ ನಟ. 1990ರ ಚಂದನವನದ ಟಾಪ್ ನಟರಲ್ಲಿ ಇವರು ಕೂಡ ಒಬ್ಬರಾಗಿದ್ದರು. ಡಿಸೆಂಬರ್ 2, 1965ರಲ್ಲಿ ಹುಟ್ಟಿದ ಶಶಿಕುಮಾರ್ ಅವರು ಕನ್ನಡ ಚಿತ್ರಗಳು ಮಾತ್ರವಲ್ಲದೆ ತಮಿಳಿನಲ್ಲೂ ಅದರಲ್ಲೂ ಸೂಪರ್ ಸ್ಟಾರ್ ರಜನೀಕಾಂತ್ ಅವರ ಭಾಷಾ ಸಿನಿಮಾದಲ್ಲಿ ಸಹ ನಟಿಸಿ ಸೈ ಎನಿಸಿಕೊಂಡವರು. ಕೇವಲ ನಟನೆ ಮಾತ್ರವಲ್ಲದೆ ರಾಜಕೀಯ ರಂಗಕ್ಕೂ ಕೂಡ ಪ್ರವೇಶ ಮಾಡಿ ಚಿತ್ರದುರ್ಗದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದವರು.

ಇನ್ನು ಶಶಿ ಕುಮಾರ್ ಅವರು ರಾಘವೇಂದ್ರ ರಾಜ್ ಕುಮಾರ್ ಅಭಿನಯದ ಚಿರಂಜೀವಿ ಸುಧಾಕರ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುವ ಮೂಲಕ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು ಎಂದು ಹೇಳಲಾಗಿದೆ. ೧೯೮೯ರ ಬಳಿಕ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟನಾಗಿ ಬೆಳೆದವರು. ಇನ್ನು ನಟ ಶಶಿಕುಮಾರ್ ಅವರ ವೈಯುಕ್ತಿಕ ವಿಷಯಕ್ಕೆ ಬಂದರೆ ಜೂನ್ 11,1993ರಂದು ಸರಸ್ವತಿ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಇನ್ನು ಈ ದಂಪತಿಗೆ ಇಬ್ಬರು ಮಕ್ಕಳಿದ್ದು ಒಬ್ಬ ಮಗಳಿದ್ದು, ಮಗ ಅಕ್ಷಿತ್ ಶಶಿಕುಮಾರ್ ಈಗಾಗಲೇ ಸ್ಯಾಂಡಲ್ವುಡ್ ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಶಶಿಕುಮಾರ್ ಅವರ ಮದುವೆಯ ಸಂದರ್ಭದಲ್ಲಿ ಯಾರೆಲ್ಲಾ ಬಂದಿದ್ರು ಈ ವಿಡಿಯೋ ನೋಡಿ ತಿಳಿಯಿರಿ..

ಇನ್ನು ೯೦ರ ದಶಕದಲ್ಲೂ ಯಶಸ್ಸಿನ ಉತ್ತುಂಗದಲ್ಲಿದ್ದ ಸಮಯದಲ್ಲಿಯೇ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಆದ ಅ’ಪಘಾ’ತದಿಂದ ಸ್ಪುರ ದ್ರೂಪಿ ನಟ ಶಶಿಕುಮಾರ್ ಅವರ ಮುಖಕ್ಕೆ ಗಾ’ಯಗಳಾಗಿ ಅವರ ಜೀವನದ ದಿಕ್ಕೇ ಬದಲಾಗಿ ಹೋಗುತ್ತದೆ. ಅಲ್ಲಿಯವರೆಗೂ ಸುಪ್ರೀಂ ಹೀರೊ ಆಗಿ ಮಿಂಚುತ್ತಿದ್ದ ನಟ ಶಶಿಕುಮಾರ್ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಾ ಹೋಗುತ್ತವೆ. ಹೀಗೆ ಸ್ಯಾಂಡಲ್ವುಡ್ ನಲ್ಲಿ ಟಾಪ್ ನಟನಾಗಿ ಮಿಂಚಿದ ಶಶಿಕುಮಾರ್ ಅವರ ಜೀವನದಲ್ಲಾದ ಅ’ಪಘಾ’ತದ ಒಂದು ಘಟನೆ ಅವರ ಭವಿಷ್ಯವನ್ನೇ ಕಷ್ಟಕ್ಕೀಡು ಮಾಡಿಬಿಡುತ್ತದೆ. ಇದೆ ಅಲ್ಲವಾ ವಿಧಿ ಎಂದರೆ.