ಮಗ ಏನೇ ಮಾಡಿದ್ರೂ ಬದುಕಲಿಲ್ಲ..ಆದ್ರೂ ಸಾರ್ಥಕತೆ ಮೆರೆದ ಕುಟುಂಬ.!ಮನಕಲುಕುತ್ತೆ ಈ ಸ್ಟೋರಿ..

Inspire
Advertisements

ಜೀವನದಲ್ಲಿ ಯಾವುದು ಶಾಶ್ವತ ಅಲ್ಲ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಆದ್ರೆ ನಾವು ಮಾಡುವ ಕೆಲಸಗಳು ನಿಜಕ್ಕೂ ಶಾಶ್ವತ ಎಂದು ಹೇಳಬಹುದು. ಹಾಗೆ ಸಾಕಷ್ಟು ಘಟನೆಗಳು ಕೂಡ ಈಗಾಗಲೇ ನಡೆದಿವೆ. ಅವುಗಳ ಬಗ್ಗೆ ನಾವು ಹೆಚ್ಚು ಹೇಳಬೇಕಿಲ್ಲ. ಈ ಜೀವನದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಥಿತಿ ಹೊಂದಿದ ಜನರು ತುಂಬಾ ಇದ್ದಾರೆ. ಅವರಿಗೆ ಅದು ಉಪಯೋಗ ಬರುವುದಿಲ್ಲ ಎಂದಾದರೆ ಇನ್ನೊಬ್ಬರಿಗಾದರೂ ಅದು ಕಾರ್ಯರೂಪಕ್ಕೆ ಬರಲಿ ಎಂದು ಮುಂದಾಗುವ ಜನರು ಕೂಡ ಇದ್ದಾರೆ. ಹೌದು ಅಂತಹದೇ ಒಂದು ಮನಕಲಕುವ ಘಟನೆ ಇದೀಗ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ ಗೆಳೆಯರೇ. ಕಳೆದ ತಿಂಗಳು ಜುಲೈ 29 ನೇ ತಾರೀಕು ಚಾಮರಾಜನಗರ ಜಿಲ್ಲೆ , ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಗ್ರಾಮದ ರಾಘವ ಎನ್ನುವ 34 ವರ್ಷದ ಯುವಕ ಬೈಕ್ ಚಲಾಯಿಸುತ್ತಿದ್ದ.

ಆ ವೇಳೆ ರಾಘವ ಅವರಿಗೆ ಎದುರಿಗೆ ಬಂದ ಒಂದು ಬೈಕ್ ಇವರ ಬೈಕ್ಗೆ ಡಿ-ಕ್ಕಿ ಹೊಡೆದಿದ್ದು ಸ್ಥಳದಲ್ಲಿಯೇ ತುಂಬಾ ಗಂಭೀರವಾಗಿ ರಾಘವ ಅವರಿಗೆ ಗಾ’ಯಗಳಾಗಿದ್ದವಂತೆ. ನಂತರದಲ್ಲಿ ತಲೆಗೆ ಪೆ’ಟ್ಟು ಬಿದ್ದ ಕಾರಣಕ್ಕಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ರಾಘವ ಅವರಿಗೆ ಚಿ’ಕಿತ್ಸೆ ಕೊಡಿಸಲಾಗಿದೆ. ರಾಘವ ಅವರ ತಲೆಗೆ ಜೋರಾದ ಪೆ’ಟ್ಟು ಬಿದ್ದ ಕಾರಣಕ್ಕಾಗಿ ಸಿಟಿ ಸ್ಕ್ಯಾನ್ ಮಾಡಿದಾಗ ಅವರ ಮೆದುಳು ಊ’ತ ಬಂದಿದ್ದು, ಆಗಲೇ ಮೆದುಳು ನಿಷ್ಕ್ರಿಯ ಆಗಿರುವುದಾಗಿ ತಿಳಿದು ಬಂದಿದೆ. ಹೌದು ಇದನ್ನು ವೈದ್ಯರು ಅವರ ಕುಟುಂಬಕ್ಕೆ ತಿಳಿಸಿದ್ದಾರೆ. ನಮ್ಮ ಮಗನನ್ನು ಏನೇ ಮಾಡಿದರೂ ಉಳಿಸಿಕೊಳ್ಳಲು ಆಗುವುದಿಲ್ಲ ಎಂದರಿತ ರಾಘವ ತಂದೆ ನೀಲಪ್ಪಸ್ವಾಮಿ ತಾಯಿ ಯಶೋದಮ್ಮ ಸುದ್ದಿ ತಿಳಿದು ಕಣ್ಣೀರು ಹಾಕಿದ್ದಾರೆ.

ಈ ಹಂತದಲ್ಲಿ ರಾಘವ ಅವರ ಸಂಬಂಧಿ ಆಗಿದ್ದಂತವರು ರಾಘವ ಅವರ ಅಂ-ಗಾಂಗಗಳನ್ನು ಬೇರೆಯವರಿಗೆ ದಾನ ಮಾಡೋಣ ಎಂದು ಹೇಳಿದ್ದಾರೆ. ಸುಮ್ಮನೆ ಅವು ಈಗ ನಿಜಕ್ಕೂ ವ್ಯರ್ಥವಾಗುತ್ತವೆ, ರಾಘವ ಬದುಕುವುದಿಲ್ಲ ಎಂಬುದಾಗಿ ಸಂಬಂಧಿ ಹೇಳಿದಾಗ, ರಾಘವ ಅವರ ತಂದೆ ತಾಯಿ ಕಣ್ಣೀರು ಹಾಕುತ್ತಲೇ ಮಗನ ಅಂ’ಗಾಂಗಗಳನ್ನು ಇನ್ನೊಬ್ಬರಿಗೆ ದಾನ ಮಾಡಲು ಒಪ್ಪಿಗೆ ನೀಡಿದ್ದಾರೆ. ಹೌದು, ರಾಘವ ಅವರ ಅಂಗಾಂಗಗಳಿಂದ ಒಟ್ಟು ಐದು ಜನರ ಜೀವ ಉಳಿಸಲಾಗಿದೆಯಂತೆ. ಮಗನನ್ನು ನಾವು ಏನೇ ಮಾಡಿದರೂ ಬದುಕಿಸಿಕೊಳ್ಳವುದಕ್ಕೆ ಆಗುವುದಿಲ್ಲ ಎಂದು ಅರಿತ ಇವರ ಕುಟುಂಬ ಇದೀಗ ಒಟ್ಟು ಐದು ಜನರಿಗೆ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದೆ. ಜೀವ ಸಾರ್ಥಕತೆ ತಂಡಕ್ಕೆ ರಾಘವ ಅವರ ಯಕೃತ್ತು, ಎರಡು ಮೂ’ತ್ರಪಿಂಡಗಳು, ಹಾಗೆ ಹೃದಯಕವಾಟುಗಳು, ಜೊತೆಗೆ ರಾಘವ ಅವರ ಕಾರ್ನಿಯ ನೀಡಿ, ಒಟ್ಟು ಐದು ಜನರಿಗೆ ಕಸಿ ಮಾಡಲಾಯಿತು ಎಂದು ತಿಳಿದುಬಂದಿದೆ.

ಮೃತ ರಾಘವ ಅವರಿಗೆ 34 ವರ್ಷ ವಯಸ್ಸಾಗಿದ್ದು ಆಗಲೇ ಮದುವೆಯಾಗಿ ಎರಡು ವರ್ಷದ ಹೆಣ್ಣು ಮಗು ಕೂಡ ಇತ್ತು ಎನ್ನಲಾಗಿದೆ. ಈ ಕುಟುಂಬಕ್ಕೆ ರಾಘವ ಅವರ ಅಗಲಿಕೆ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಕೇಳಿಕೊಳ್ಳೋಣ. ಐದು ಜನರಿಗೆ ಅಂಗಾಂಗ ನೀಡಿದ ಈ ರಾಘವ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೀವು ಕೂಡ ಕಮೆಂಟ್ ಮಾಡಿ, ಧನ್ಯವಾದಗಳು…