ರಾಜ ರಾಣಿಯಲ್ಲಿ ಗೆದ್ದ ಈ ಜೋಡಿಗೆ ಸಿಕ್ಕ ಬಹುಮಾನದ ಒಟ್ಟು ಹಣವೆಷ್ಟು ಗೊತ್ತಾ.?

Entertainment

ಸ್ನೇಹಿತರೆ ಎಲ್ಲರಿಗೂ ಗೊತ್ತಿರುವಂತೆ ಕನ್ನಡ ಕಿರುತೆರೆಯಲ್ಲಿ ಆಗಾಗ ಕೆಲವು ರಿಯಾಲಿಟಿ ಶೋಗಳು ನಡೆಯುತ್ತಿರುತ್ತವೆ. ರಿಯಾಲಿಟಿ ಶೋಗಳ ಮೂಲಕವೇ ಕನ್ನಡ ಕಿರುತೆರೆಯ ಕೆಲ ಕಲಾವಿದರು ತುಂಬಾ ಪ್ರಸಿದ್ಧಿ ಪಡೆದಿದ್ದಾರೆ. ಹೌದು ರಾಜಾರಾಣಿ ಎಂಬ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಭರ್ಜರಿಯಾಗಿ ಕಳೆದ ಕೆಲ ದಿನಗಳ ಹಿಂದೆ ಪ್ರಾರಂಭಗೊಂಡಿತ್ತು. ಹೌದು ಈ ಕಾರ್ಯಕ್ರಮಕ್ಕೆ ಸೆಲೆಬ್ರಿಟಿ ದಂಪತಿಗಳು ಆಗಮಿಸಿ ಆಟವನ್ನು ಆಡಲಿಕ್ಕೆ ಬಂದಿದ್ದರು. ರಾಜು ತಾಳಿಕೋಟೆ ಜೋಡಿ, ಚಂದನ್ ಹಾಗೂ ನಿವೆದಿತ ಗೌಡ, ಇಶಿಕಾ ಹಾಗೂ ಮುರುಗನ್ ಜೋಡಿ, ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆ ನೇಹಾ ಹಾಗೂ ಚಂದನ್ ಇನ್ನೂ ಕೆಲ ರಿಯಲ್ ಪತಿ-ಪತ್ನಿ ಜೋಡಿಗಳು ಕಾಣಿಸಿಕೊಂಡಿದ್ದವು.

ಹೌದು ರಾಜ ರಾಣಿ ಕಾರ್ಯಕ್ರಮಕೆ ಮಜಾ ಟಾಕೀಸ್ ಖ್ಯಾತಿಯ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಕನ್ನಡ ಸಿನಿಮಾರಂಗದ ಹಿರಿಯ ಪೋಷಕ ನಟಿ ತಾರಾ ಅವರು ಜಡ್ಜ್ ಆಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಜೊತೆಗೆ ಅನುಪಮಾಗೌಡ ಅವರು ಈ ಕಾರ್ಯಕ್ರಮದ ನಿರೂಪಕಿಯಾಗಿದ್ದರು. ಹೌದು ಮೊನ್ನೆ ಭಾನುವಾರ ಇದೇ ಕಲರ್ಸ್ ಕನ್ನಡದ ರಾಜ ರಾಣಿ ರಿಯಾಲಿಟಿ ಶೋನ ಫಿನಾಲೆ ಭರ್ಜರಿಯಾಗಿ ನಡೆಯಿತು. ಫೈನಾಲೆಯಲ್ಲಿ ಬಿಗ್ ಬಾಸ್ ವಿಜೇತ ಮಂಜು ಪಾವಗಡ ಹಾಗೂ ನಟಿ ಶುಭ ಪೂಂಜಾ ಕೂಡ ಬಂದಿದ್ರು. ಹೌದು ಈ ರಾಜ ರಾಣಿ ಕಾರ್ಯಕ್ರಮದ ಫಿನಾಲೆಯಲ್ಲಿ ಲಕ್ಷ್ಮಿಬಾರಮ್ಮ ಖ್ಯಾತಿ ನಟಿ ನೇಹಾ ಹಾಗೂ ಚಂದನ್ ವಿಜೇತರಾಗಿ ಮೊದಲ ಸ್ಥಾನ ಪಡೆದು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಜೋಡಿಗೆ ಕಿರೀಟದ ಜೊತೆ ಐದು ಲಕ್ಷ ಹಣ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಎರಡನೇ ಸ್ಥಾನದಲ್ಲಿ ಮೊದಲ ರನ್ನರ್ ಅಪ್ ಆಗಿ ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ನಟಿ ಇಷಿಕಾ ಹಾಗೂ ಇವರ ಪತಿ ಮುರುಗನ್ ಗೆದ್ದಿದ್ದಾರೆ. ಈ ಜೋಡಿಗೆ ಎರಡುವರೆ ಲಕ್ಷ ಹಣ ಸಿಕ್ಕಿದೆ ಎಂದು ಹೇಳಲಾಗಿದೆ. ಮೂರನೆಯದಾಗಿ ನಿವೇದಿತಾ ಚಂದನ್ ಜೋಡಿ ಗೆದ್ದಿದ್ದು, ಈ ಜೋಡಿಗೆ ಒಂದು ಲಕ್ಷ ಹಣ ಸಿಕ್ಕಿದೆ ಎಂದು ತಿಳಿದುಬಂದಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆ ರಾಜ ರಾಣಿ ಕಿರೀಟ ಹೊತ್ತ ನೇಹಾ ಹಾಗೂ ಚಂದನ್ ಅವರಿಗೆ ಶುಭವಾಗಲಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು..