ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರಿಗಮಪ ಖ್ಯಾತಿಯ ಶ್ರೀಹರ್ಷ..ಹುಡುಗಿ ಯಾರು ಹೇಗಿದ್ದಾರೆ ? ಈ ಫೋಟೋಸ್ ನೋಡಿ..

Entertainment

ನಮಸ್ತೇ ಸ್ನೇಹಿತರೇ, ಈ ಲಾಕ್ ಡೌನ್ ಸಮಯದಲ್ಲೂ ಕೂಡ ಬೆಳ್ಳಿತೆರೆ ನಟ ನಟಿಯರು ಸೇರಿದಂತೆ, ಕಿರುತೆರೆ ಕಲಾವಿದರೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಸಾಲಿಗೆ ಈಗ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಸ್ಫರ್ಧಿಯಾಗಿ ಭಾಗವಹಿಸಿ ತನ್ನ ವಿಭಿನ್ನ ಧ್ವನಿಯ ಮೂಲಕ ಕನ್ನಡಿಗರನ್ನ ರಂಜಿಸಿದ್ದ ಗಾಯಕ ಶ್ರೀಹರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹಳ್ಳಿಯಲ್ಲೇ ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಶೃಂಗೇರಿ ಮೂಲದ ಗೌತಮಿ ಎಂಬುವವರನ್ನ ವರಿಸಿದ್ದಾರೆ.

ಲಾಕ್ ಡೌನ್ ಇರುವ ಕಾರಣ ಮಾಡುವೆ ಕಾರ್ಯಕ್ರಮಗಳು ಮನೆಯಲ್ಲಿಯೇ ನೆರವೇರಿದ್ದು ವಧು ವರನ ಕಡೆಯವರು ಹಾಗೂ ಕೇವಲ ಆಪ್ತರಷ್ಟೇ ಸರಳವಾಗಿ ನಡೆದ ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ಜೋಡಿಗೆ ಶುಭಾಶಯಗಳನ್ನ ಕೋರಿದ್ದಾರೆ. ವಿಭಿನ್ನವಾಗಿ ಹಾಡುವುದರ ಮೂಲಕ ‘ವಾಯ್ಸ್ ಆಫ್ ಬೆಂಗಳೂರು’ ಎಂದೇ ಖ್ಯಾತರಾಗಿರುವ ಗಾಯಕ ಶ್ರೀಹರ್ಷ ಎಂಟೆಕ್ ಪದವೀಧರರು ಕೂಡ. ಇನ್ನು ವೃತ್ತಿ ವಿಚಾರಕ್ಕೆ ಬಂದರೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸಾಂಸ್ಕೃತಿಕ ಜಿಲ್ಲೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಸಕಲ ಕಾಲಾವಲ್ಲಭ ರಾಗಿರುವ ಶ್ರೀಹರ್ಷ ತಮ್ಮ ಬಾಲ್ಯದಲ್ಲಿಯೇ ರಾಜ್ಯ ಮಟ್ಟದಲ್ಲಿ ಅತ್ತ್ಯತ್ತಮ ಬಾಲ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ತಮ್ಮ ವಿಭಿನ್ನ ಹಾಡುಗಳ ಮೂಲಕ ಕನ್ನಡಿಗರನ್ನ ರಂಜಿಸಿರುವ ಶ್ರೀ ಹರ್ಷ ಶಾಸ್ತ್ರೀಯ ಸಂಗೀತವನ್ನ ಬಲ್ಲವರಾಗಿದ್ದು, ಚಲಚಿತ್ರ ಹಾಡುಗಳು, ಜಾನಪದ ಹಾಡುಗಳು, ಭಕ್ತಿಗೀತೆಯ ಹಾಡುಗಳು ಸೇರಿದಂತೆ ಗಜಲ್ಸ್, ವೇದ ಗಮಕಗಳನ್ನು ಹಾಡುತ್ತಾರೆ. ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಹಲವಾರು ಕಾರ್ಯಕ್ರಮಗಳಲ್ಲಿ ಗೆಸ್ಟ್ ಆಗಿಯೂ ಭಾಗವಹಿಸಿರುವ ಶ್ರೀಹರ್ಷ ಅವರು ವಿಭಿನ್ನವಾದ ಟ್ಯಾಲೆಂಟ್ ಗಳನ್ನ ಹೊಂದಿದ್ದು, ತನ್ನದೇ ಆದ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದು ಒಂದು ರೀತಿಯಲ್ಲಿ ಸೆಲೆಬ್ರೆಟಿ ಎನಿಸಿಕೊಂಡಿದ್ದಾರೆ. ಇನ್ನು ಗಾಯಕ ಶ್ರೀಹರ್ಷ ಅವರ ಮದ್ವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿದ್ದು ಅವರ ಅಭಿಮಾನಿಗಳು ಮದುವೆಯ ಶುಭಾಶಯಗಳನ್ನ ಕೋರಿದ್ದಾರೆ.