ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೀತ್ಸೆ ಗಾಯಕ..ಅಸಲಿಗೆ ಹುಡುಗಿ ಯಾರು ಏನು ಮಾಡುತ್ತಿದ್ದಾರೆ ಗೊತ್ತಾ ?

Cinema

ಸ್ನೇಹಿತರೇ, ನೀವು ಶಿವಣ್ಣ ಉಪ್ಪಿ ಅಭಿನಯದ ಪ್ರೀತ್ಸೇ ಸಿನಿಮಾದ ಪ್ರೀತ್ಸೆ ಪ್ರೀತ್ಸೆ ಹಾಡನ್ನ ನೀವು ಕೇಳಿರುತ್ತೀರಾ..ಆಗಿನ ಕಾಲಕ್ಕೆ ತುಂಬಾ ಫೇಮಸ್ ಆಗಿದ್ದ ಹಾಡಿದು. ಇನ್ನು ಈ ಹಾಡನ್ನ ಹಾಡಿದ್ದು ಗಾಯಕ ಹೇಮಂತ್..ಅಂದಿನಿಂದ ಹೇಮಂತ್ ಅವರು ಪ್ರೀತ್ಸೆ ಪ್ರೀತ್ಸೆ ಸಿಂಗರ್ ಅಂತಲೇ ಖ್ಯಾತರಾಗಿದ್ದಾರೆ. ಇನ್ನು ಈಗ ಹೇಮಂತ್ ಅವರ ಜೀವನದಲ್ಲಿ ಹೊಸ ಜೀವನ ಪ್ರಾರಂಭವಾಗಲಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಹೇಮಂತ್ ಅವರ ಮದ್ವೆ ನಡೆದಿದ್ದು, ಕೃತಿಕಾ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ. ಇನ್ನು ಪ್ರೀತ್ಸೇ ಹಾಡಿನ ಮೂಲಕ ಬಣ್ಣದ ಲೋಕಕ್ಕೆ ಗಾಯಕನಾಗಿ ಕಾಲಿಟ್ಟ ಹೇಮಂತ್ ಅವರು ಮದುವೆಗೆ ಕುಟುಂಬಸ್ಥರು ಹಾಗು ಚಿತ್ರರಂಗದ ಖ್ಯಾತ ನಟರು, ಹಾಗೂ ಸ್ನೇಹಿತರು ಆಗಮಿಸಿ ನವ ವಧುವರರಿಗೆ ಶುಭ ಕೋರಿದ್ದಾರೆ.

ಇನ್ನು ಹೇಮಂತ್ ಕೃತಿಕಾ ಅವರ ಮದುವೆಗೆ ಸ್ಟಾರ್ ನಟರಾದ ಶಿವಣ್ಣ, ಉಪೇಂದ್ರ, ಪುನೀತ್ ರಾಜ್ ಕುಮಾರ್, ಗಣೇಶ್, ಯಶ್ ಹಾಗೂ ಶ್ರೀನಗರ ಕಿಟ್ಟಿ ಸೇರಿದಂತೆ ಸಿನಿಮಾರಂಗದ ಹಲವು ಕಲಾವಿದರು ಬಂದಿದ್ದು ಶುಭಾಶಯಗಳನ್ನ ಕೋರಿದ್ದಾರೆ. ಇನ್ನು ಗಾಯಕ ಹೇಮಂತ್ ಅವರು ಮದ್ವೆಯಾಗಿರುವ ವಧು ಕೃತಿಕಾ ಅವರ ಬಗ್ಗೆ ಹೇಳುವುದಾದರೆ, ವೃತ್ತಿಯಲ್ಲಿ ವೈದ್ಯಯಾಗಿರುವ ಕೃತಿಕಾ ಅವರು ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ನೆಫ್ರಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕನ್ನಡದ ನಾದಬ್ರಹ್ಮ ಎಂದೇ ಖ್ಯಾತರಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರ ಗರಡಿಯಲ್ಲಿ ಸಹಾಯಕ ಸಂಗೀತ ಸಹಾಯಕರಾಗಿ ಕೆಲಸ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

ಇನ್ನು ಸ್ಯಾಂಡಲ್ವುಡ್ ನ ಖ್ಯಾತ ಸಂಗೀತ ನಿರ್ದೇಶಕರಾದ ಮನೋಮೂರ್ತಿ, ವಿ ಮನೋಹರ್, ಸಾಧು ಕೋಕಿಲ, ಗುರುಕಿರಣ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರು ಸಂಗೀತ ನಿರ್ದೇಶನ ಮಾಡಿದ ಹಾಡುಗಳಿಗೆ ಹಿನ್ನಲೆ ಗಾಯಕರಾಗಿದ್ದಾರೆ ಹೇಮಂತ್ ಕುಮಾರ್ ಅವರು. ಇನ್ನು ಹೇಮಂತ್ ಅವರಿಗೆ ಗಾಯಕ ವೃತ್ತಿಯಲ್ಲಿ ಬ್ರೇಕ್ ಕೊಟ್ಟದ್ದು ಮಾತ್ರ ಪ್ರೀತ್ಸೆ ಪ್ರೀತ್ಸೆ ಹಾಡು. ಒಟ್ಟಿನಲ್ಲಿ ಖ್ಯಾತ ಗಾಯಕ ಹೇಮಂತ್ ಅವರ ಜೀವನದಲ್ಲಿ ಹೊಸ ಜೀವನ ಪ್ರಾರಂಭವಾಗಿದ್ದು, ಅವರ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ನಾವು ಶುಭ ಹಾರೈಸೋಣ..