ಹರ್ಷ ಭುವಿ ಪ್ರೀತಿಯ ನಡುವೆ 3ತಿಂಗಳಲ್ಲೇ ಎಂಡಿ ಪೋಸ್ಟ್ ನಿಂದ ಕೆಳಗೆ ಇಳಿತಾರ ಸಾನಿಯಾ.?ಸೀರಿಯಲ್ ನಲ್ಲಿ ಬಾರಿ ಟ್ವಿಸ್ಟ್.!

Entertainment

ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಚ್ಚು ಜನಪ್ರಿಯತೆ ಪಡೆದಿರುವ ಧಾರಾವಾಹಿಗಳು ಈಗೀಗ ತುಂಬಾನೇ ಇಂಟರೆಸ್ಟಿಂಗ್ ಆಗಿ ಸಾಗುತ್ತಿವೆ. ಕರೋನ ಹೋದ ಬಳಿಕ ಹೆಚ್ಚು ಧಾರಾವಾಹಿಗಳು ಕಿರುತೆರೆಯಲ್ಲಿ ಸದ್ದು ಮಾಡುತ್ತಿವೆ. ಕಲರ್ಸ್ ಕನ್ನಡದಲ್ಲಿ ಇದೀಗ ಪ್ರಸಾರವಾಗುತ್ತಿರುವ ಕನ್ನಡತಿ ಸೀರಿಯಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸೀರಿಯಲ್ ಪ್ರಿಯರಿಗೆ ಕನ್ನಡತಿ ಸೀರಿಯಲ್ ಅಚ್ಚುಮೆಚ್ಚು ಎನ್ನಬಹುದು. ಕನ್ನಡತಿ ಸೀರಿಯಲ್ ನಲ್ಲಿ ಭುವಿ ಹಾಗೂ ಹರ್ಷ ಅವರ ಪಾತ್ರ ನೋಡುಗರನ್ನು ತುಂಬಾ ಸೆಳೆಯುತ್ತದೆ. ಹಾಗೆ ಕನ್ನಡತಿ ಧಾರಾವಾಹಿಲ್ಲಿ ಆಕರ್ಷಕವಾಗಿ ಇವರಿಬ್ಬರು ಅಭಿನಯ ಮಾಡುತ್ತಿದ್ದಾರೆ. ಹಾಗೆ ಇವರದೇ ಆದ ಅಭಿನಯಕ್ಕೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ.

ಹೌದು, ಭುವಿ ಹಾಗೂ ಹರ್ಷ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಕನ್ನಡತಿ ಸೀರಿಯಲ್ ಪ್ರಿಯರು ಹೇಳುತ್ತಿದ್ದಾರೆ. ಹಾಗೇನೆ ಈ ಎರಡು ಪಾತ್ರಗಳು ಮಾತ್ರ ಜನ ಮನ್ನಣೆ ಗಳಿಸಿಲ್ಲ ಬದಲಿಗೆ ಈ ಸೀರಿಯಲ್ನಲ್ಲಿ ಅಭಿನಯಿಸುವ ಸಾಕಷ್ಟು ಕಲಾವಿದರು ತುಂಬಾ ಖ್ಯಾತಿ ಹೊಂದಿದ್ದಾರೆ. ಹೌದು ಇದೀಗ ಈ ಸೀರಿಯಲ್ ಕಥೆ ನೋಡುವುದಾದರೆ ಹರ್ಷ ಅವ್ರೆ ಭುವಿ ಅವರನ್ನು ಇಷ್ಟ ಪಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಭುವಿ ಒಪ್ಪಿಕೊಂಡಿಲ್ಲ. ಅವರ ಪ್ರಪೋಸಲ್ನ ಇನ್ನು ವೇಟಿಂಗ್ ಲಿಸ್ಟಲ್ಲಿ ಇಟ್ಟಿದ್ದಾರೆ. ಇವರಿಬ್ಬರ ಪ್ರೀತಿ ಸನ್ನಿವೇಶದ ಚಿತ್ರಣಗಳು ತುಂಬಾ ಮುದ್ದಾಗಿ ಕಾಣುತ್ತವೆ. ಮತ್ತೊಂದು ಕಡೆ ಸಾನಿಯಾ ತನ್ನ ಎಂಡಿ ಪೋಸ್ಟ್ ಇಂದ ಕೆಳಗಡೆ ಇಳಿಯಬೇಕು ಎಂದು ಕೇಳಿ ಬಂದಿದೆ. ಹೌದು ರತ್ನಮಾಲ ಅವರ ಮಾವನ ಕರೆಸಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಹಾಗೇನೇ ಸಾನಿಯಾ ಅವರ ಬಳಿ ಹೋಗಿ ಎಂಡಿ ಪೋಸ್ಟ್ ನಿಂದ ನೀವು ಇನ್ನೂ 3 ತಿಂಗಳಲ್ಲಿ ಕೆಳಗೆ ಇಳಿಯಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಇವರ ಮಾವನವರು ಇಷ್ಟು ದಿನ ಬಂದಿರಲಿಲ್ಲ. ಆದರೆ ಈ ಎಲ್ಲಾ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಸಾನಿಯಾ ಆ ಹರ್ಷ ಯಾರನ್ನು ಮದುವೆಯಾಗುತ್ತಾನೆ, ಇನ್ನು ಮೂರು ತಿಂಗಳೊಳಗೆ ಹರ್ಷ ಅವರಿಗೆ ಮದುವೆ ಮಾಡಲಿದ್ದಾರೆ.

ಹಾಗೆ ಆ ಮದುವೆಯಾಗುವ ಹುಡುಗಿ ಹರ್ಷ ಪತ್ನಿಯೇ ಈ ಶಾಲೆ ಎಂಡಿ ಆಗಲಿದ್ದಾರೆಂದು ತಲೆಕೆಡಿಸಿಕೊಂಡಿದ್ದಾರೆ. ಜೊತೆಗೆ ಹರ್ಷನನ್ನ ವಿವಾಹ ಆಗುತ್ತಿರುವ ಆ ಬೆಡಗಿ ಯಾರೆಂದು ತಲೆಕೆಡಿಸಿಕೊಂಡಿದ್ದಾರೆ. ಈ ಕಥೆ ಇನ್ನೂ ಮುಂದುವರೆಯಲಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು…