ಮದುವೆ ಸಮಾರಂಭ ಹಾಗೂ ಕಟಿಂಗ್ ಶಾಪ್ ಗಳಿಗೆ ಅನುಮತಿ ಕೊಟ್ಟ ಸರ್ಕಾರ.ಆದ್ರೆ ಷರತ್ತುಗಳು ಅನ್ವಯ?

News
Advertisements

ಮೇ 3ರಕ್ಕೆ ಲಾಕ್ ಡೌನ್ ಮುಗಿಯಬಹುದು ಎಂದು ಕಾಯುತ್ತಿದ್ದ ಜನರಿಗೆ, ಮೇ ೩ರ ಬಳಿಕವೂ ಇನ್ನು ಎರಡು ವಾರಗಳ ಕಾಲ ದೇಶದಾದ್ಯಂತ ಲಾಕ್ ಡೌನ್ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ. ಇನ್ನು ಕೇಂದ್ರ ಸರ್ಕಾರವೇ ಗುರುತಿಸಿರುವ ಹಸಿರು ವಲಯ (ಗ್ರೀನ್ ಜೋನ್) ಹಾಗೂ ಕಿತ್ತಳೆ ವಲಯ (ಆರೆಂಜ್ ಜೋನ್) ಗಳಲ್ಲಿ ಲಾಕ್ ಡೌನ್ ನಿಂದ ವಿನಾಯತಿಗಳನ್ನ ನೀಡಲಾಗಿಹೋದೆ.

Advertisements

ಇನ್ನು ಗ್ರೀನ್ ಜೋನ್ ಗಳಲ್ಲಿ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲಾಗಿದೆ. ಆದರೆ ಷರತ್ತುಗಳು ಅನ್ವಯವಾಗಲಿವೆ. ಹೌದು, ಮದ್ವೆ ಸಮಾರಂಭಗಳಿಗೆ ಕೇವಲ ೫೦ ಜನಕಷ್ಟೇ ಅವಕಾಶವಿದ್ದು, ಮಾಸ್ಕ್ ಧರಿಸುವುದು, ಸೋಷಿಯಲ್ ಡಿಸ್ಟೆನ್ಸ್ ಪಾಲನೆ ಮಾಡುವುದು ಖಡ್ಡಾಯವಾಗಿದೆ.

ಇನ್ನು ಅಂತ್ಯ ಸಂಸ್ಕಾರ ಸೇರಿದಂತೆ ತಿಥಿ ಕಾರ್ಯಕ್ರಮಗಳಿಗೂ ಸರ್ಕಾರ ಅವಕಾಶ ನೀಡಿದ್ದು ಕೆಲ ಷರತ್ತುಗಳು ಅನ್ವಯವಾಗಲಿವೆ. ಇನ್ನು ಇಂತಹ ಸಮಾಂಭಗಳಲ್ಲಿ ಭಾಗವಹಿಸಲು ಕೇವಲ ೨೦ ಜನರಿಗಷ್ಟೇ ಅವಕಾಶ ನೀಡಲಾಗಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಖಡ್ಡಾಯವಾಗಿದೆ. ಇನ್ನು ಯಾವುದೇ ವಲಯದಲ್ಲಿ ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ.

ಇನ್ನು ಗ್ರೀನ್ ಮತ್ತು ಆರೆಂಜ್ ಜೋನ್ ಗಳಲ್ಲಿ ಕಟಿಂಗ್ ಶಾಪ್, ಸ್ಪಾಗಳನ್ನ ತೆಗೆಯಲು ಸರ್ಕಾರ ಅನುಮತಿ ನೀಡಿದೆ ಎಂದು ಹೇಳಲಾಗಿದ್ದು, ಕಂಟೈನ್ಮೆಂಟ್ ಮತ್ತು ರೆಡ್ ಜೋನ್ ಗಳೆಂದು ಗುರುತಿಸಿರುವ ವಲಯಗಳಲ್ಲಿ ತೆರೆಯದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಲಾಗಿದೆ.