ಸಪ್ತಪದಿ ತುಳಿಯಲು ಸಿದ್ದರಾದ ಟಾಲಿವುಡ್ ಚೆಲುವೆ ಕೀರ್ತಿ ಸುರೇಶ್..

Cinema
Advertisements

ತಮ್ಮ ಅಧ್ಭುತ ಅಭಿನಯದಿಂದ ತೆಲುಗು, ತಮಿಳು ಚಿತ್ರರಂಗದಲ್ಲಿ ಬಹುಬೇಗ ಖ್ಯಾತಿ ಪಡೆದವರು ನಟಿ ಕೀರ್ತಿ ಸುರೇಶ್. ಇನ್ನು ತಮ್ಮ ಸೌಂದರ್ಯದಿಂದಲೇ ಯುವಕರ ಮನಸೆಳೆದವರು, ಈಗ ಸದ್ಯದಲ್ಲೇ ಹಸೆಮಣೆ ಏರಲು ಸಿದ್ದರಾಗಿದ್ದಾರೆ.

Advertisements

ಹೌದು, ತಮ್ಮದೇ ಆದ ಅಪಾರ ಅಭಿಮಾನಿ ಬಳಗವನ್ನ ಪಡೆದ ನಟಿ ಕೀರ್ತಿ ಸುರೇಶ್, ತೆಲುಗು ತಮಿಳು ಚಿತ್ರಗಳಲ್ಲಿ ತುಂಬಾ ಬ್ಯುಸಿ ಇರುವ ನಟಿ. ಇನ್ನು ಸಾಲು ಸಾಲು ಸಿನಿಮಾಗಳು ಕೀರ್ತಿ ಶೆಟ್ಟಿ ಕೈನಲ್ಲಿದ್ದು, ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟ ಹೆಸರು ಇವರಿಗಿದೆ. ಆದರೂ ಇಷ್ಟು ಬೇಗ ಏಕೆ ಮದುವೆ ಆಗುತ್ತಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಇನ್ನು ಈ ಸುಂದರಿ ನಟಿಯನ್ನ ಮದುವೆ ಆಗುತ್ತಿರುವುದು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಇನ್ನು ಕೀರ್ತಿ ಸುರೇಶ ಪೋಷಕರು ಮಗಳಿಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದು, ಉದ್ಯಮಿಯೊಬ್ಬರ ಜೊತೆ ಮಹಾನಟಿ ಕೀರ್ತಿ ಸುರೇಶ್ ಸಪ್ತಪದಿ ತುಳಿಯಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಆ ಉದ್ಯಮಿ ಯಾರೆಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇನ್ನು ಕೀರ್ತಿ ಸುರೇಶ್ ತಮ್ಮ ಪೋಷಕರು ನೋಡಿದ ಹುಡುಗನನ್ನೇ ವರಿಸಲಿದ್ದು, ಒಟ್ಟಿನಲ್ಲಿ ಅರೇಂಜ್ ಮದುವೆಯಾಗಲಿದ್ದಾರೆ. ಇನ್ನು ಕೀರ್ತಿ ಸುರೇಶ್ ಅವರ ತಂದೆ ಸುರೇಶ ಕುಮಾರ್ ಅವರಿಗೆ ರಾಜಕೀಯ ವ್ಯಕ್ತಿಗಳ ಜೊತೆ ಒಳ್ಳೆಯ ರಿಲೇಶನ್ ಹೊಂದಿದ್ದು, ಉದ್ಯಮಿಯೊಬ್ಬರ ಜೊತೆ ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.