ಮಾನವೀಯತೆ ಮರೆತ ಪೊಲೀಸ್ರು..ಅನಾರೋಗ್ಯ ತಂದೆಯನ್ನ ಎತ್ತಿಕೊಂಡೇ ನಡೆದುಕೊಂಡು ಹೋದ ಮಗ..

News

ಕೊರೋನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ನ್ನ ಮೇ3 ರವರಿಗೆ ವಿಸ್ತರಣೆ ಮಾಡಲಾಗಿದ್ದು, ಇದರ ನೇರ ಪರಿಣಾಮ ಜನ ಸಾಮಾನ್ಯರ ಮೇಲೆ ಬಿದ್ದಿದೆ. ಹೌದು ಲಾಕ್ ಡೌನ್ ನಡುವೆ ಹಲವು ಮನಕಲುಕುವ ಘಟನೆಗಳು ನಡೆಯುತ್ತಿವೆ. ಕೇರಳದಲ್ಲಿ ಈ ನೈಜ ಘಟನೆಯೇ ಇದಕ್ಕೊಂದು ಸಾಕ್ಷಿ.

ಇದು ಕೇರಳದ ಕೊಲ್ಲಂ ಬಳಿ ನಡೆದಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವ್ಯಕ್ತಿಯೊಬ್ಬ ಮನೆಗೆ ಆಟೋದಲ್ಲಿ ವಾಪಸ್ಸು ಹೋಗುತ್ತಿದ್ದಾಗ ಮಧ್ಯದಲ್ಲಿ ಪೊಲೀಸರು ತಡೆದಿದ್ದಾರೆ. ಆಗ ೬೫ ವರ್ಷದ ತನ್ನ ತಂದೆಯನ್ನ ಮಗನೆ ಸುಮಾರು ಒಂದು ಕಿಮಿ ಎತ್ತಿಕೊಂಡು ಹೋದ ಮನಕಲುಕುವ ಘಟನೆ ನಡೆದಿದೆ.

ಅನಾರೋಗ್ಯದ ಕಾರಣ ಕೊಲ್ಲಮ್ ಬಳಿ ಆಸ್ಪತ್ರೆಯೊಂದರಲ್ಲಿ ೬೫ ವರ್ಷದ ವ್ಯಕ್ತಿ ದಾಖಲಾಗಿದ್ದು, ಬುಧವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಮಗನು ತನ್ನ ತಂದೆಯನ್ನ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದನು. ಇನ್ನು ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ದಾರಿ ಮಧ್ಯೆಯೇ ಪೊಲೀಸರು ಆಟೋವನ್ನ ತಡೆದಿದ್ದಾರೆ.

ಇನ್ನು ಈ ವೇಳೆ ಡಿಸ್ಚಾರ್ಜ್ ಆದ ದಾಖಲಾತಿಗಳನ್ನ ಮಗ ತೋರಿಸಿದ್ದರೂ ಪೊಲೀಸರು ಮುಂದೆ ಹೋಗಲು ಬಿಟ್ಟಿಲ್ಲ. ಮಾನವೀಯತೆಯನ್ನ ಮರೆತ ಪೊಲೀಸರು ಎಷ್ಟೇ ಹೇಳಿದ್ರೂ ಕೇಳದೆ ಆಟೋದಿಂದ ಇಳಿಯುವಂತೆ ಆ ಕುಟುಂಬಕ್ಕೆ ಹೇಳಿದ್ದಾರೆ. ಇನ್ನು ಸ್ವಲ್ಪನೂ ಮಾನವೀಯತೆ ತೋರದ ಪೋಲೀಸರ ವರ್ತನೆಯಿಂದ ಬೇಸತ್ತ ಮಗ ತಂದೆಯನ್ನ ಹೆಗಲ ಮೇಲೆ ಹೊತ್ತುಕೊಂಡು ಸುಮಾರು ಒಂದು ಕಿಮೀ ದೂರ ನಡೆದುಕೊಂಡೇ ಹೋಗಿದ್ದಾರೆ.

ಇನ್ನು ಹೀಗೆ ತನ್ನ ವಯಸ್ಸಾದ ತಂದೆಯನ್ನ ರಸ್ತೆಯಲ್ಲಿ ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್ ಆಗಿದ್ದು ಪೊಲೀಸರು ವರ್ತನೆ ಬಗ್ಗೆ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಏನೇ ಕಾನೂನು ನಿಯಮಗಳಿದ್ದರೂ ಇಂತಹ ಸನ್ನಿವೇಶದಲ್ಲಿ ಮಾನವೀಯತೆ ತೋರದಿರುವುದು ಬೇಸರದ ಸಂಗತಿ. ಇನ್ನು ಮಾನವ ಹಕ್ಕುಗಳ ಆಯೋಗ ಈ ವಿಡಿಯೋ ನೋಡಿದ್ದು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.