ಲಾಕ್ ಡೌನ್ ವೇಳೆ ಪೊಲೀಸ್ ಠಾಣೆ ಬಳಿ ಸಹಾಯ ಕೇಳಿಕೊಂಡು ಬಂದ ಮಹಿಳೆಗೆ ಈ ಪೊಲೀಸ್ ಕಾನ್ಸ್‌ಟೇಬಲ್ ಮಾಡಿದ ಕೆಲಸ ಏನು ಗೊತ್ತಾ?

Kannada Mahiti
Advertisements

ದೇಶದಲ್ಲಿ ಈ ಕೋರೋನ ಮಹಾಮಾರಿ ಕಾಯಿಲೆ ಬಂದಾಗಿನಿಂದ ಬಡಜನರಿಗೆ ಸಾಮಾನ್ಯ ಜನರಿಗೆ ಹಾಗು ಮಧ್ಯಮ ವರ್ಗದ ಜನರಿಗೆ ‌ಒಂದು ಒತ್ತಿನ ಊಟಕ್ಕೆ ತುಂಬಾನೇ ಕಷ್ಟ ಪರಿಸ್ಥಿತಿ ಎದುರಾಗಿದೆ .. ಅದರಲ್ಲೂ ರಸ್ತೆಯಲ್ಲಿ ಭಿಕ್ಷೆ ಬೇಡಿ ಅದರಿಂದ ಸಿಗುತ್ತದೆ ಹಣದಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಜನರು ಹಾಗು ಆ ದಿನವೇ ಸಂಪಾದನೆ ಮಾಡಿ ಆ ದಿನವೇ ತಿನ್ನುವಂತಹ ಜನರಿಗೆ ಊಟ ಸಿಗದೆ ಪರದಾಡುವ ಪರಿಸ್ಥಿತಿ ಇಂದು ಎದುರಾಗುತ್ತಿದೆ.. ಇಂತಹಾ ಪರಿಸ್ಥಿತಿಯಲ್ಲಿ ಕೇರಳದ ಪೊಲೀಸ್ ಠಾಣೆಗೆ ನನಗೆ ತಿನ್ನಲು ಊಟ ಇಲ್ಲ ಎಂದು ಕೇಳಿಕೊಂಡು ಬಂದಾಗ ಅಲ್ಲಿನ ಪೊಲೀಸ್ ಕಾನ್ಸ್‌ಟೇಬಲ್ ಮಾಡಿದ ಕೆಲಸ ಈಗ ಪ್ರತಿಯೊಬ್ಬರೂ ಕೂಡ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ..

[widget id=”custom_html-4″]

Advertisements

ಆಸಲಿಗೆ ಪೊಲೀಸ್ ಠಾಣೆಯಲ್ಲಿ ನಡೆದಿದ್ದಾದ್ರೂ ಏನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಕೇರಳದಲ್ಲಿ ಇರುವ ಪಾಲಾಡ್ ಪೊಲೀಸ್ ಸ್ಟೇಷನ್ ನಲ್ಲಿ ಒಬ್ಬ ಬಡ ಕುಟುಂಬದ ಮಹಿಳೆ ಅಲ್ಲಿಗೆ ಭಯದಿಂದ ಬಂದಳು.‌. ಆಗ ಆ ಸ್ಟೇಷನ್ ನಲ್ಲಿ ಇದ್ದ ಒಬ್ಬ ಕಾನ್ಸ್‌ಟೇಬಲ್ ಅಧಿಕಾರಿ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಳು.. ನನಗೆ ತಿನ್ನಲು ಊಟವಿಲ್ಲ, ನನಗೆ ಪರವಾಗಿಲ್ಲ ಅದರೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಅವರು ಹಸಿವನ್ನು ತಡೆಯುವುದಿಲ್ಲ ಸ್ವಾಮಿ ದಯವಿಟ್ಟು ನನಗೆ ನೂರು ರೂಪಾಯಿ ಹಣ ನೀಡಿ ಸಹಾಯ ಮಾಡಿ ಎಂದು ಕೇಳಿದಳು.. ಆಗ ಪೊಲೀಸ್ ಅಧಿಕಾರಿ ಆ ಮಹಿಳೆಯನ್ನು ನೀವು ಏನು‌ ಕೆಲಸ ಮಾಡುತ್ತಿದ್ದೀಯಾ ಅಮ್ಮ ಯಾಕೆ ನಿನ್ನ ಬಳಿ ಹಣ ಇಲ್ಲವೇ ಎಂದು ಮಹಿಳೆಯನ್ನು ಕೇಳಿದಾಗ ಆ ಮಹಿಳೆ ಈ ರೀತಿ ಹೇಳಿದಳು.. ನಾನು ಮನೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದೇ ಆದರೆ‌ ಈ ಕೋರೋನ ಕಾಯಿಲೆ ಬಂದಾಗಿನಿಂದ ಮನೆಯ ಕೆಲಸಕ್ಕೆ ಎಂದು ಮನೆಯ ಬಳಿ ಕೂಡ ಸೇರಿಸುತ್ತಿಲ್ಲ..

[widget id=”custom_html-4″]

ಇನ್ನೂ ನಾನು ಕೂಡಿಟ್ಟ ಹಣ ಕೂಡ ಖಾಲಿಯಾಗಿದೆ ಎಂದು ಕಣ್ಣೀರು ಹಾಕುತ್ತಾ ತನ್ನ ನೋವನ್ನು ಆ ಕಾನ್ಸ್‌ಟೇಬಲ್ ಬಳಿ ಹೇಳಿಕೊಳ್ಳುತ್ತಾಳೆ.. ಆಗ ಕಾನ್ಸ್‌ಟೇಬಲ್ ಆ ಮಹಿಳೆಗೆ ನೂರು ರೂಪಾಯಿ ಹಣವನ್ನು ಕೊಟ್ಟು ಜೊತೆಗೆ ಒಂದು ತಿಂಗಳ ಆಗುವಷ್ಟು ಅಕ್ಕಿ ಬೇಲೆ ಎಣ್ಣೆ ದಿನಸಿ ಪದಾರ್ಥಗಳನ್ನು ಕೂಡ ಕೋಡಿಸುತ್ತಾರೆ.. ಮೊದಲು ಪೊಲೀಸ್ ಅಧಿಕಾರಿಗಳು ಅಂದರೆ ಭಯ ಪಡುತ್ತಿದ್ದರು ಆದರೆ ಈಗ ಸಮಯದಲ್ಲಿ ಅದೇ ಪೊಲೀಸ್ ಅಧಿಕಾರಿಗಳು ಕಷ್ಟದಲ್ಲಿ ಇರುವವರಿಗೆ ಸಹಾಯವನ್ನ ಮಾಡುತ್ತಿದ್ದಾರೆ.. ಈಗಂತೂ ಕೋರೋನ ಇರುವ ಕಾರಣ ನಮ್ಮಲ್ಲಿರುವುದನ್ನು ಬಡವರಿಗೆ ಊಟ ಒಂದು ಒತ್ತು ಊಟ ಸಿಗದೆ ಇರುವವರಿಗೆ ನಮ್ಮ ಕೈಲಾದ ಸಹಾಯ ಅನೇಕ ಜನಯ ಮಾಡುತ್ತಿದ್ದಾರೆ.. ಸ್ನೇಹಿತರೆ ನಿಮ್ಮ ಪ್ರಕಾರ ಈ ಪೋಲಿಸ್ ಅಧಿಕಾರಿ ಮಾಡಿದ ಸಹಾಯದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..