ಸಿನಿಮಾ ಜಗತ್ತಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿರುವ KGF 2 ಟೀಸರ್ ಬಗ್ಗೆ ಬಾಲಿವುಡ್ ದಿಗ್ಗಜ ಹೇಳಿದ್ದೇನು ಗೊತ್ತಾ ?

Cinema

ಕೆಜಿಎಫ್ ಚಾಪ್ಟರ್ 1 ಚಿತ್ರವು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ ಒಂದು ಅತ್ಯುತ್ತಮ ಸಿನಿಮಾ. ಪ್ರಶಾಂತ್ ನೀಲ್ ಅವರ ನಿರ್ದೇಶನ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಮಾರ್ಗದರ್ಶನದಲ್ಲಿ ತೆರಿಗೆ ಬಂದು ಇಡೀ ಭಾರತೀಯ ಸಿನಿಮಾ ರಂಗವೇ ತನ್ನತ್ತ ನೋಡುವಂತೆ ಮಾಡಿದ ಚಿತ್ರ. ಸುಮಾರು ಎಪ್ಪತ್ತು ಕೋಟಿ ಬಂಡವಾಳದಲ್ಲಿ ತಯಾರಾದ ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದುಪ್ಪಟ್ಟು ಸುಮಾರು ಇನ್ನುರೈವತ್ತುರಿಂದ ಮುನ್ನೂರು ಕೋಟಿ ರೂಪಾಯಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಸ್ಯಾಂಡಲ್ವುಡ್ ನಲ್ಲಿ ಒಂದು ಹೊಸ ಇತಿಹಾಸವನ್ನೇ ಬರೆಯಿತು.

ಕೆಜಿಎಫ್ ಸಿನೆಮಾದಲ್ಲಿ ರಾಕಿಂಗ್ ಸ್ಟಾರ್ ನಟ ಯಶ್ ಅವರು ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕ ವರ್ಗವನ್ನು ಸೆಳೆದಿದ್ದು ಅಲ್ಲದೆ ತಮ್ಮ ಅಭಿನಯದಿಂದ ಮನೆ ಮಾತಾಗಿದ್ದರು. ಛಾಯಾಗ್ರಹಣದಿಂದ ಈ ಸಿನಿಮಾ ಪ್ರತಿಯೊಬ್ಬ ಸಿನಿ ಪ್ರೇಕ್ಷಕನ ಮನಸಲ್ಲಿ ಅಚ್ಚು ಹೊಡೆದಿದೆ. ಕೆಜಿಎಫ್ ಚಿತ್ರಕ್ಕೆ ಹಾಗೂ ಕನ್ನಡ ಸಿನಿಮಾ ರಂಗಕ್ಕೆ ಹೊಸ ತರಹದ ಛಾಯಾಗ್ರಹಣವನ್ನು ಪರಿಚಯಸಿದ ಹೆಗ್ಗಳಿಕೆ ಭುವನ್ ಗೌಡ ಅವರಿಗೆ ಸಲ್ಲುತ್ತದೆ. ಇನ್ನು ಮೊನ್ನೆಯಷ್ಟೇ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ಆಗಿದ್ದು ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೇ ದೇಶ-ವಿದೇಶಗಳಲ್ಲಿ ಕೆಜಿಎಫ್ 2 ಟೀಸರ್ಗೆ ವ್ಯಾಪಕ ಪ್ರತಿಕ್ರಿಯೆ ಹಾಗೂ ಪ್ರಶಂಸೆಗಳು ವ್ಯಕ್ತವಾಗಿವೆ. ಈಗಾಗಲೇ ಯುಟ್ಯೂಬ್ನಲ್ಲಿ ಕೆಜಿಎಫ್ 2 ಟೀಸರ್ ಗೆ ನೂರು ಮಿಲಿಯನ್ ವೀಕ್ಷಣೆ ತಲುಪಿ ಇನ್ನು ಮುನ್ನುಗ್ಗುತ್ತಿದ್ದು ಯೂಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿ ಇದೆ.

ಇನ್ನು ಬಾಲಿವುಡ್ ದಿಗ್ಗಜ ನಟ ಹೃತಿಕ್ ರೋಷನ್ ಮೆಚ್ಚುಗೆ ವ್ಯಕ್ತಪಡಿಸಿದ ರೀತಿ ಅಂತೂ ಅದ್ಬುತ. ಕೆಜಿಫ್ 2 ಟೀಸರ್ ವೀಕ್ಷಿಸಿದ ನಟ ಹೃತಿಕ್ ರೋಷನ್ ಬೆರಗಾಗಿ ಚಿತ್ರತಂಡದ ಪರಿಶ್ರಮ ಮತ್ತು ಸಂಕಲ್ಪವನ್ನು ಶ್ಲಾಘಿಸಿದ್ದಾರೆ.”ವಾಟ್ ಎ ಗ್ರೇಟ್ ಟ್ರೈಲರ್” ಎಂದು ಹೇಳುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿ, ಕೆಜಿಫ್ 2 ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹೀಗೆ ಹೃತಿಕ್ ರೋಶನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಬಳಿಕ ಹುಟ್ಟುಹಬ್ಬದ ದಿನದಂದೇ ಟೀಸರ್ ರಿಲೀಸ್ ಆಗಿದ್ದಕ್ಕೆ ತಮ್ಮ ಸಂತೋಷವನ್ನು ಹೇಳಿಕೊಂಡು ರಾಕೀಬಾಯ್, ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೊರಿದ್ದಾರೆ.