ರಣಧೀರನ ಬೆಡಗಿ ಖುಷ್ಬೂ ಕಾರಿಗೆ ಡಿ’ಕ್ಕಿ ಹೊ’ಡೆದ ಟ್ಯಾಂಕರ್ ! ನಜ್ಜುಗುಜ್ಜಾಯ್ತು ಕಾರು..

Kannada News
Advertisements

[widget id=”custom_html-4″]

ಕನ್ನಡದ ರಣಧೀರ ಸೇರಿದಂತೆ ತೆಲುಗು, ತಮಿಳು ಚಿತ್ರಗಳಲ್ಲಿ ಮಿಂಚಿದ ಬಹುಭಾಷೆ ತಾರೆ ನಟಿ ಖುಷ್ಬೂ. ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ನಟಿ ಖುಷ್ಬೂ ತಮ್ಮ ಫೋಟೋಗಳನ್ನ ಪೋಸ್ಟ್ ಮಾಡುತ್ತಿರುತ್ತಾರೆ. ನಟನೆ ಜೊತೆಗೆ ರಾಜಕಾರಣಿಯೂ ಹೌದು ಈ ರಣಧೀರನ ಬೆಡಗಿ. ಇತೀಚೆಗಷ್ಟೇ ಬಿಜೆಪಿ ಪಕ್ಷ ಸೇರಿದ್ದಾರೆ. ಆದರೆ ಖುಷ್ಬೂ ಅವರು ಇಂದು ಹೋಗುತ್ತಿದ್ದ ಕಾರು ಅ’ಪಘಾ’ತಕ್ಕೀಡಾಗಿದೆ.

[widget id=”custom_html-4″]

ಹೌದು, ನಟಿ ರಾಜಕಾರಣಿ ಖುಷ್ಬೂ ಚಲಾಯಿಸುತ್ತಿದ್ದ ಕಾರು ಇಂದು ತಮಿಳುನಾಡಿನ ಮೆಲ್ಮರುವಾತ್ತೂರ್ ನಲ್ಲಿ ಅ’ಪಘಾ’ತವಾಗಿರುವ ಘಟನೆ ನಡೆದಿದೆ. ಇತ್ತೀಚೆಗಷ್ಟೇ ತಾವು ಮೊದಲಿದ್ದ ರಾಜಕೀಯ ಪಕ್ಷವನ್ನ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಹಾಗಾಗಿ ಪಕ್ಷ ಹಮ್ಮಿಕೊಂಡಿದ್ದ ವೇಲ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

Advertisements

ಖುಷ್ಬೂ ಅವರು ಇದ್ದ ಕಾರು ಹೋಗುತ್ತಿದ್ದ ವೇಳೆ ಇದ್ದಕಿದ್ದಂತೆ ಎದುರುಗಡೆಯಿಂದ ಬಂದ ಕಂಟೈನರ್ ವಾಹನ ಅವರ ಕಾರಿಗೆ ಅ’ಪ್ಪಳಿಸಿದೆ. ವೇಗವಾಗಿ ಬಂದು ಡಿ’ಕ್ಕಿ ಹೊಡೆದಿದ್ದರ ಪರಿಣಾಮ ಖುಷ್ಬೂ ಅವರ ಕಾರು ಸಂಪೂರ್ಣವಾಗಿ ನ’ಜ್ಜು ಗು’ಜ್ಜಾಗಿದೆ ಎಂದು ಹೇಳಲಾಗಿದ್ದು, ನಟಿ ಖುಷ್ಬೂ ಪ್ರಾ’ಣಾ’ಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಪೊಲೀಸರು ಈಗಾಗಲೇ ಟ್ಯಾಂಕರ್ ಚಲಾಯಿಸುತ್ತಿದ್ದ ಡ್ರೈವರ್ ನನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಈ ಘಟನೆಯ ಟ್ವೀಟ್ ಮಾಡಿರುವ ನಟಿ ರಾಜಕಾರಣಿ ಖುಷ್ಬೂ ಅವರು ಹೇಳಿರುವ ಹಾಗೆ, ನಮ್ಮ ಕಾರು ಸರಿಯಾದ ಮಾರ್ಗದಲ್ಲೇ ಹೋಗುತಿತ್ತು. ಆದರೆ ಇದ್ದಕಿದ್ದಂತೆ ವೇಗವಾಗಿ ಬಂದ ಕಂಟೈನರ್ ವಾಹನ ನಮ್ಮ ಕಾರಿಗೆ ಗು’ದ್ದಿದೆ ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.