ಬ್ಯಾನ್ ಮಾಡ್ಬೇಕಂತೆ ಕಿಚ್ಚ ಸುದೀಪ್ ಅವರನ್ನು..ಹಠ ಹಿಡಿದು ಕುಂತಿವೆ ಕೆಲ ಸಂಘನೆಗಳು.?

Cinema News
Advertisements

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಈಗಿನ ಪೀಳಿಗೆಯ ಪ್ರಮುಖ ನಟ. ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟ. ಪ್ರಭಾವಿ ವ್ಯಕ್ತಿ. ಕರ್ನಾಟಕ ದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ತಮ್ಮ ಪ್ರೀತಿಯ ಕಿಚ್ಚನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದರೆ ಅದೆಂತಹ ಆಕ್ರೋಶ ಅಭಿಮಾನಿಗಳಲ್ಲಿ ಭುಗಿಲೇಳಬಹುದು ಯೋಚಿಸಿ. ಹೌದು ಕೆಲ ಕನ್ನಡ ಪರ ಸಂಘನೆಗಳು ಹೀಗೆ ಪಟ್ಟು ಹಿಡಿದಿವೆ. ಕಾರಣ ಸುದೀಪ್ ನೀಡುತ್ತಿರುವ ಆ ಜಾಹೀರಾತು.

Advertisements

ಸುದೀಪ್ ರಮ್ಮಿ ಸರ್ಕಲ್ ಕುರಿತಾದ ಜಾಹೀರಾತೊಂದನ್ನು ನೀಡುತ್ತಿದ್ದಾರೆ. ಇದು ಒಂದು ಜೂಜಿನ ಆಟವಾಗಿದ್ದು ಸುದೀಪ್ ರಂತಹ ಸೆಲೆಬ್ರಿಟಿಗಳು ಇದನ್ನು ಪ್ರೋತ್ಸಾಹಿಸಬಾರದು, ಈ ಕೂಡಲೇ ಆ ಜಾಹಿರಾತಿನಲ್ಲಿ ನಟಿಸುವುದನ್ನು ನಿಲ್ಲಿಸಬೇಕು ಇಲ್ಲವಾದರೆ ಇವರನ್ನು ಕನ್ನಡ ಚಿತ್ರ ರಂಗದಿಂದ ಬ್ಯಾನ್ ಮಾಡಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿವೆ.

ಇದಕ್ಕೆ ತಕ್ಕ ಉತ್ತರವನ್ನು ಕಿಚ್ಚನ ಅಭಿಮಾನಿಗಳು ನೀಡಿದ್ದಾರೆ. ದೈರ್ಯ ಇದ್ದರೆ ಸರ್ಕಾರಕ್ಕೆ ಹೇಳಿ ರಮ್ಮೀ ಸರ್ಕಲ್ ಆಟವನ್ನು ಬ್ಯಾನ್ ಮಾಡಿಸಿ ಅದನ್ನು ಬಿಟ್ಟು ನಾಯಕ ನಟನ ತೇಜೋವಧೆ ಮಾಡಬೇಡಿ ಎಂದಿದ್ದಾರೆ. ಅಲ್ಲದೆ ಸಂಘಟನೆಯವರು ಯಶ್ ಮತ್ತು ದರ್ಶನ್ ರಂತೆ ಮಾದರಿಯಾಗಿ ಎಂದು ಹೇಳಿರುವುದಕ್ಕೆ ಇಲ್ಲಿ ಯಶ್ ಮತ್ತು ದರ್ಶನ್ ಹೆಸರು ಏಕೆ ಬರುತ್ತಿದೆ ಎಂದು ಪ್ರಶ್ನಿಸಿರುವ ಸುದೀಪ್ ಅಭಿಮಾನಿಗಳು, ಇದು ಕಿಚ್ಚನನ್ನು ತುಳಿಯುವ ಒಂದು ಷಡ್ಯಂತ್ರ ಎಂದು ಅನುಮಾನಿಸಿದ್ದಾರೆ.

ಅಲ್ಲದೆ ಈ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ಕಿಚ್ಚನ ಪರ ಬೆಂಬಲಕ್ಕೆ ನಿಂತಿದ್ದಾರೆ. ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ನಡೆದ ಕರ್ನಾಟಕ ಬಂದ್ ಗೆ ಬೆಂಬಲ ನೀಡದ ಕೆಲ ಕನ್ನಡ ಸಂಘಟನೆಗಳು ಈಗ ಕಿಚ್ಚನ ವಿರುದ್ದ ಹೋರಾಟಕ್ಕೆ ಇಳಿದಿವೆ ಎಂದು ಕಿಡಿ ಕಾರಿದ್ದಾರೆ.