ಕಿಚ್ಚ ಸುದೀಪ್ ಅವರನ್ನು ಕಾಡುತ್ತಿರುವ ಕಾಯಿಲೆ ಏನು ಗೊತ್ತೇ ?ನಿಜವಾಗಿಯೂ ಅವರಿಗೆ ಏನಾಗಿದೆ !

Cinema

ಕಿಚ್ಚ ಸುದೀಪ್ ತಮ್ಮದೇ ಆದ ಅಪಾರ ಅಭಿಮಾನಿ ಬಳಗ ಹೊಂದಿರುವ ಕನ್ನಡದ ಕೆಲವೇ ನಟರಲ್ಲಿ ಒಬ್ಬರು. ಪ್ರತೀ ವರ್ಷ ರಿಯಾಲಿಟಿ ಶೋ ನಡೆಸಿಕೊಡುವ ಕನ್ನಡದ ಏಕೈಕ ಸ್ಟಾರ್ ನಟ. ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ. ಬಿಗ್ ಬಾಸ್ ಕನ್ನಡ ಅದೆಷ್ಟೋ ಸೀಸನ್ ಕಂಡಿದೆ. ವಾರದ ಕೊನೆಯಲ್ಲಿ ಕಿಚ್ಚ ಬಂದು ಕಾರ್ಯಕ್ರಮ ನಡೆಸಿ ಕೊಡದ ದಿನವಿಲ್ಲ. ಆದರೆ ಇದೇ ಮೊದಲ ಬಾರಿಗೆ ಸುದೀಪ್ ಅವರು ವಾರದ ಕತೆ ಕಿಚ್ಚನ ಜೊತೆ ಮತ್ತು ಸಂಡೆ ವಿತ್ ಸುದೀಪ ಸಂಚಿಕೆಗಳಲ್ಲಿ ಈ ವಾರ ಕಾಣಿಸಿಕೊಂಡಿಲ್ಲ. ಕಾರಣ ಅನಾರೋಗ್ಯ.

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆ ಎಂದ ಕೂಡಲೇ ಮೊದಲು ತಲೆಗೆ ಬರುವುದು ಕೊರೋನ. ಸುದೀಪ್ ಅಭಿಮಾನಿಗಳಲ್ಲಿ ಇದೇ ಆತಂಕಕ್ಕೆ ಕಾರಣವಾಗಿದೆ. ಗಾಬರಿ ಪಡುವ ಅಗತ್ಯವಿಲ್ಲ. ಕಿಚ್ಚ ಸುದೀಪ್ ಅವರಿಗೆ ಕೋ’ವಿಡ್ ಪಾಸಿಟಿವ್ ಇಲ್ಲ. ಆದರೆ ಕಾಲಿಗೆ ಸಂಬಂಧಿಸಿದ ಸಮಸ್ಯೆ ಇದೆ. ಇತ್ತೀಚೆಗೆ ಬುರ್ಜ್ ಕಲೀಫದಲ್ಲಿ ತಮ್ಮ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದರು. ಹಾಗಾಗಿ ಅವರು ಹೊರದೇಶಕ್ಕೆ ಪ್ರಯಾಣ ಮಾಡಬೇಕಾಗಿತು. ನಂತರ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣ, ಒಂದರ ಹಿಂದೆ ಒಂದು ಬೇರೆ ಬೇರೆ ಕೆಲಸಕ್ಕಾಗಿ ಬಿಡುವಿಲ್ಲದೆ ಒಡಾಡಬೇಕಾಯಿತಿ. ಅಲ್ಲದೆ ಗಂಟೆ ಗಟ್ಟಲೆ ನಿಂತುಕೊಂಡೇ ಬಿಗ್ ಬಾಸ್ ಶೋ ನಿರೂಪಣೆ ಮಾಡಬೇಕು. ಈ ಎಲ್ಲಾ ಕಾರಣಗಳಿಂದ ಸುದೀಪ್ ಅವರಿಗೆ ವಿಪರೀತ ಕಾಲು ನೋವು ಕಾಣಿಸಿಕೊಂಡಿದೆ. ಪಾದಗಳಲ್ಲಿ ವಿಪರೀತ ನೋವು ಉಂಟಾಗಿದೆ. ಇದರಿಂದ ಜ್ವರವೂ ಬಂದಿದೆ.

ವೈದ್ಯರು ವಿಶ್ರಾಂತಿ ಪಡೆಯಲೇ ಬೇಕೆಂದು ಕಟ್ಟು ನಿಟ್ಟಾಗಿ ಹೇಳಿದ್ದಾರೆ. ಆದರಿಂದ ಮುಂದಿನ ವಾರದ ವರೆಗೂ ಸುದೀಪ್ ವಿಶ್ರಾಂತಿ ಪಡೆಯಲಿದ್ದಾರೆ. ಸುದೀಪ್ ಶಿಸ್ತಿನ ಮನುಷ್ಯ. ಸಿನಿಮಾ ಚಿತ್ರೀಕರಣಕ್ಕಾಗಲೀ ಬೇರೆ ಕೆಲಸಕ್ಕಾಗಿ ಸಮಯಕ್ಕೆ ಮುಂಚೆಯೇ ಹಾಜರುರಿರುತ್ತಾರೆ. ತಮ್ಮ ಕಮಿಟ್ ಮೆಂಟ್ ಎಂದೂ ಮುರಿಯುವುದಿಲ್ಲ. ಆದರೆ ಇದೇ ಮೊದಲ ಬಾರಿ ಬಿಗ್ ಬಾಸ್ ಶೋನ ಸಂಚಿಕೆಗೆ ಗೈರು ಆಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ತಮ್ಮ ಪ್ರೀತಿಯ ನಟ ಬೇಗ ಗುಣವಾಗಿ ಬರಲೆಂದು ಹಾರೈಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಬಹುಬೇಗ ಗುಣಮುಖರಾಗಲಿ ಎಂದು ನಾವು ಕೂಡ ದೇವರಲ್ಲಿ ಪ್ರಾರ್ಥಿಸುತ್ತೇವೆ