ಏನಾಗಿದೆ ಸರ್ವಾಧಿಕಾರಿ ಕಿಮ್​​ ಗೆ.?ಕೊರಿಯಾಗೆ ಬರ್ತಿದ್ದಾಳಾ ಲೇಡಿ ಉತ್ತರಾಧಿಕಾರಿ?

News

ಜಗತ್ತು ಕೊರೋನಾ ಎಂಬ ಮಹಾಮಾರಿಯಿಂದ ನಲುಗುತ್ತಿರುವ ಸಮಯದಲ್ಲೇ ಉತ್ತರ ಕೊರಿಯಾ ದೇಶದಿಂದ ಆಘಾತಕಾರಿ ಸುದ್ದಿಯೆಂದು ಹೊರಬಿದ್ದಿದೆ. ಇನ್ನು ಅಲ್ಲಿನ ಸರ್ವಾಧಿಕಾರಿ ಕಿಮ್ ಜಂಗ್ ಉನ್ ನಮ್ಮ ದೇಶದಲ್ಲಿ ಒಂದೇ ಒಂದು ಕೊರೋನಾ ಕೇಸ್ ಇಲ್ಲ ಅಂತ ಹೆಮ್ಮೆಯಿಂದ ಜಗತ್ತಿನ ಮುಂದೆ ಹೇಳಿಕೊಂಡಿದ್ದ. ಆದರೆ ಉತ್ತರ ಕೊರಿಯಾದ ಯಾವ ಸುದ್ದಿಯೂ ಕೂಡ ಜಗತ್ತಿಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದ ಕಿಮ್ ಆರೋಗ್ಯದ ಬಗ್ಗೆಯೇ ವಿಶ್ವದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಸರ್ವಾಧಿಕಾರಿ ಕಿಮ್ ಆಗಿರುವುದಾದರೂ ಏನು? ಅಸಲಿಗೆ ಉತ್ತರಕೊರಿಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಾದರು ಏನು? ಇನ್ನ್ನು ಈ ಕಿಮ್ಜಂಗ್ ಉನ್ ಬಗ್ಗೆ ಹೇಳಬೇಕೆಂದರೆ ಜಗತ್ತಿಗೆ ತಿಳಿಯದ ನಿಗೂಢ ವ್ಯಕ್ತಿತ್ವ ಈತನದ್ದು. ತನ್ನ ವಿರುದ್ಧನಿಂತವರು ಯಾರೇ ಆದರೂ ಸುಮ್ಮನೆ ಬಿಡುವವನಲ್ಲಈ ಸರ್ವಾಧಿಕಾರಿ. ಭ್ರಷ್ಟಾಚಾರ, ಸೋಮಾರಿತನಕ್ಕೆ ಅವಕಾಶವಾಗದ ಹಾಗೆ ತನ್ನ ದೇಶದ ಅಧಿಕಾರಿಗಳನ್ನ, ರಾಜಕಾರಣಿಗಳನ್ನ ನೇರವಾಗಿ ಯಮಲೋಕಕ್ಕೆ ಅಟ್ಟುವ ನೀರುಂಕುಶ ಸರ್ವಾಧಿಕಾರಿ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುವ ಈ ಸರ್ವಾಧಿಕಾರಿ ಕಿಮ್ ಜಂಗ್ ಅಮೇರಿಕಾದ ದೊಡ್ಡಣ್ಣನನ್ನೇ ಬೆದರಿಸಿದ ಭೂಪ. ಆದರೆ ಕಳೆದ ಒಂದು ವಾರಗಳಿಂದ ಸುದ್ದಿಯಲ್ಲಿದೆ ಕಿಂಗ್ ಗೆ ಆಗಿರೋದೇನು?ಕೊರೋಯಾಗೆ ಬರುತ್ತಿರುವ ಆ ಲೇಡಿ ಉತ್ತರಾಧಿಕಾರಿ ಯಾರು?ಕಿಮ್ ಬಗೆಗಿನ ಹೆಚ್ಚಿನ ಮಾಹಿತಿ ತಿಳಿಯಲು ಈ ವಿಡಿಯೋ ನೋಡಿ..