ಕೊರೋನಾ ಸೋಂಕಿನ ಬಗ್ಗೆ ತಾಳೆಗರಿ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು ಹೇಳಿದ್ದೇನು ಗೊತ್ತಾ.?

Adhyatma News

ಇಡೀ ಜಗತ್ತಿನಾದ್ಯಂತವೂ ರುದ್ರ ತಾಂಡವವಾಡುತ್ತಿದೆ ಈ ಮಾರಕ ಕೊರೋನಾ ವೈರಸ್. ಅಮೆರಿಕಾ ಸೇರಿದಂತೆ ದೊಡ್ಡ ದೊಡ್ಡ ದೇಶಗಳೇ ಏನೂ ಮಾಡಲಾಗದೆ ತರಗುಟ್ಟಿ ಹೋಗಿವೆ. ಅಪಾರ ಸಾವು ನೋವುಗಳು ಸಂಭವಿಸಿವೆ. ಈಗಾಗಲೇ ಸಾವಿರಾರು ಜನರ ಆಹುತಿಯಾಗಿದೆ ಈ ಕೊರೋನಾ ವೈರಸ್ ಬಾಯಿಗೆ.

ಇನ್ನು ಈ ಮಹಾಮಾರಿ ಕೊರೋನಾ ಕುರಿತಂತೆ ಭವಿಷ್ಯ ನುಡಿದಿದ್ದಾರೆ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು. ಇನ್ನು ಕೊಡಿ ಮಠದ ಶ್ರೀಗಳು ಇದುವರೆಗೂ ಹೇಳಿರುವ ಯಾವುದೇ ಭವಿಷ್ಯ ಸುಳ್ಳಾಗಿಲ್ಲ ಎಂಬ ಮಾತಿದೆ. ಇನ್ನು ಅದು ಶುಭವೋ, ಅಶುಭವೋ ತಮ್ಮ ಭವಿಷ್ಯವಾಣಿಯ ಮೂಲಖ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತಾರೆ ಶ್ರೀಗಳು.

ಇನ್ನು ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬದ ಸಂಧರ್ಭದಲ್ಲಿ ಭವಿಷ್ಯ ನುಡಿಯುವ ಕೊಡಿ ಮಠ ಶ್ರೀಗಳು ತಾಳೆ ಗರಿ ಮೂಲಖ ನುಡಿಯುವ ಭವಿಷ್ಯ ವಿಶೇಷವಾದದ್ದು. ಇನ್ನು ಶ್ರೀಗಳುಜಗತ್ತಿಗೆ ಆಪತ್ತು ಎದುರಾಗಲಿದೆ ಎಂದು ಕಳೆದ ವರ್ಷವೇ ಭವಿಷ್ಯ ನುಡಿದಿದ್ದರು ಎಂಬ ಮಾಹಿತಿ ಇದೆ. ಇನ್ನು ಫೆಬ್ರುವರಿಯಲ್ಲೂ ಕೂಡ ನಾನು ಮೊದಲೇ ಹೇಳಿದ್ದೆ,ಮದ್ದಿಲ್ಲದ ಕಾಯಿಲೆಯೊಂದು ಇಡೀ ಜಗತ್ತಿನಾದ್ಯಂತವೂ ಅವರಿಸಲಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಇನ್ನು ಸಾವಿರಾರು ಜನರನ್ನ ಆಹುತಿ ತೆಗೆದುಕೊಳ್ಳುವ ಈ ಕಾಯಿಲೆ ಜಡತ್ವ ವಸ್ತುಗಳಾದ ಮಣ್ಣು, ಕಲ್ಲು, ಮರಗಳಿಗೂ ಅವರಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಇನ್ನು ಜಗತ್ತಿನಾದ್ಯಂತಾ ಅತೀ ವೇಗವಾಗಿ ಹಬ್ಬುತ್ತಿರುವ ಈ ಕಾಯಿಲೆಯನ್ನ ಋಷಿಮುನಿಗಳು ನಮಗೆ ಬಿಟ್ಟು ಹೋಗಿರುವ ಗಿಡ ಮೂಲಿಕೆಗಳಿಂದ ಪರಿಹಾರ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಇನ್ನು ಇದಕ್ಕೆಲ್ಲಾ ಮನುಷ್ಯನಿಗೆದೇವರ ಮೇಲೆ ಕಡಿಮೆಯಾಗುತ್ತಿರುವ ಭಕ್ತಿಯೇ ಕಾರಣ ಎಂದುಕೋಡಿ ಮಠದ ಶ್ರೀಗಳು ಹೇಳಿದ್ದಾರೆ. ಒಟ್ಟಿನಲ್ಲಿ ನಾವು ಗಮನಿಸುವ ಅಂಶವೇನೆಂದರೆ ಏನೆೇ ಕಾಯಿಲೆ ಸೋಂಕು ಬಂದರೂ ಅದು ಹೊರದೇಶದಿಂದ ಬರುತ್ತದೆಯೋ ಹೊರತು, ನಮ್ಮ ದೇಶದ್ದು ಅಂತೂ ಅಲ್ಲ. ಇದಕ್ಕೆಲ್ಲಾ ಮೂಲ ಕಾರಣ ಅನಾದಿಕಾಲದಿಂದಲೂ ಬಂದಿರುವ ನಮ್ಮ ದೇಶದ ಆಹಾರ ಪದ್ಧತಿ ಅಂತಲೇ ಹೇಳಬಹುದು. ಏಕೆಂದರೆ ನಮ್ಮ ದೇಶದ ಆಹಾರ ಪದ್ದತಿಯಲ್ಲಿ ಯಾವುದೇ ಕಾಯಿಲೆಯನ್ನ ಶಮನ ಮಾಡುವ, ಕಾಯಿಲೆ ಬರದಂತೆ ತಡೆಯುವ ಔಷಧಿಯ ಗುಣಗಳಿವೆ. ಆದರೆ ಇದ್ಯಾವುದು ನಮ್ಮ ಜನಕ್ಕೆ ಅರ್ಥವಾಗುವುದಿಲ್ಲ, ಉಪಯೋಗ ಮಾಡಿಕೊಳ್ಳುವುದೂ ಇಲ್ಲ.