ಮೊದಲ ಬಾರಿಗೆ ಮಸೀದಿ ಒಳಗಡೆ ನುಗ್ಗಿದ ಲೇಡಿ ತಹಶೀಲ್ದಾರ್

News

ಲಾಕ್ ಡೌನ್ ಇರುವ ಕಾರಣ ಅಗತ್ಯವಸ್ತುಗಳಿಗೆ ಬಿಟ್ಟರೆ, ಬೇಕಾಬಿಟ್ಟಿ ಜನರು ಹೊರಗಡೆ ಬರುವಂತಿಲ್ಲ. ಇನ್ನು ಯಾವುದೇ ಧಾರ್ಮಿಕ ಸಭೆಗಳನ್ನ ನಡೆಸುವಂತಿಲ್ಲ. ದೇವಸ್ಥಾನದಲ್ಲಿ, ಮಸೀದಿಯಲ್ಲಿ, ಚರ್ಚ್ ಗಳಲ್ಲಿ ಪ್ರಾರ್ಥನೆ ಮಾಡಲು ಜನರು ಸೇರುವಂತಿಲ್ಲ.

ಆದರೆ ಈಗ ಕೋಲಾರದಲ್ಲಿ ಲಾಕ್ ಡೌನ್ ಇದ್ದರೂ ಮಸೀದಿಯಲ್ಲಿ ನಮಾಜ್ ಮಾಡಲು ಹೋಗಿದ್ದ ಹತ್ತು ಮಂದಿಯನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ ಕೋಲಾರದ ತಹಶೀಲ್ದಾರ್ ಆದ ಶೋಭಿತರವರು. ಇನ್ನು ಮಹಿಳೆಯರು ಮಸೀದಿಗೆ ಪ್ರವೇಶಮಾಡುವ ಆಗಿಲ್ಲ, ಆದರೆ ಮೊಟ್ಟ ಮೊದಲ ಬಾರಿಗೆ ಶೋಭಿತರವರು ಮಸೀದಿ ಪ್ರವೇಶಮಾಡಿದ್ದಾರೆ.

ಮಸೀದಿಯಲ್ಲಿ ನಮಾಜ್ ಮಾಡುತ್ತಿರುವ ಬಗ್ಗೆ ನನಗೆ ದೂರು ಬಂದಿದ್ದು ಸ್ಥಳಕ್ಕೆ ನಾನು ಖುದ್ದಾಗಿ ಹೋಗಿ ನೋಡಿದಾಗ ಹತ್ತು ಮಂದಿ ಮಸೀದಿಯಲ್ಲಿ ನಮಾಜ್ ಮಾಡುತ್ತಿರುವುದು ಕಂಡುಬಂದಿದೆ. ಇನ್ನು ಕೋಲಾರ ಜಿಲ್ಲೆ ಗ್ರೀನ್ ಜೋನ್ ನಲ್ಲಿರುವುದು ಜನರಿಗೆ ಕೊರೋನಾ ಬಗ್ಗೆ ಗಂಭೀರತಯೇ ಇಲ್ಲದಂತಾಗಿದೆ. ಇನ್ನು ರಜೆ ಇರುವ ಕಾರಣ ಇಲ್ಲಿನ ಕೆಲ ಯುವಕರು ಪ್ರಾರ್ಥನೆ ಸಲ್ಲಿಸಲು ಹೋಗಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದ್ದು ಪ್ರಕರಣ ದಾಖಲಿಸಿ ಅಲ್ಲಿನ ಮುಖಂಡರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ತಹಶೀಲ್ದಾರ್ ಅವರು ಹೇಳಿದ್ದಾರೆ.

ಇನ್ನು ಮಸೀದಿ ಒಳಗಡೆ ಹೋಗಿದ್ದರ ಬಗ್ಗೆ ಮಾತನಾಡಿರುವ ತಹಶೀಲ್ದಾರ್ ರವರು ನಾನು ಅಧಿಕಾರಿಯಾಗಿ ಹೊಳಗಡೆ ಹೋಗಿದ್ದೇನೆಯೇ ಹೊರತು, ಮಹಿಳೆಯಾಗಿ ಮಸೀದಿ ಒಳಗಡೆ ಹೋಗಿಲ್ಲ ಎಂದು ಹೇಳಿರುವ ಶೋಭಿತರವರು ಯಾವುದೇ ಧರ್ಮಗಳ ನಂಬಿಕೆಯನ್ನ ಅಲ್ಲಗಳೆಯುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ನಾನು ಮಸೀದಿ ಒಳಗಡೆ ಹೋಗಿದ್ದಕ್ಕೆ ಯಾವುದೇ ತೊಂದರೆಯಿಲ್ಲ, ಎಂದು ಮಸೀದಿಯವರೇ ಹೇಳಿದ್ದಾರೆ ಎಂದು ತಹಶೀಲ್ದಾರ್ ಶೋಭಿತರವರು ಹೇಳಿದ್ದಾರೆ.