ಬಿಗ್ ಬಾಸ್ ಖ್ಯಾತಿಯ ಅರವಿಂದ್ ಮೇಲೆ TVS ಕಂಪನಿ 1 ವರ್ಷಕ್ಕೆ ಹಾಕೋ ಹಣದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ !

Entertainment
Advertisements

ಅಷ್ಟೇನೂ ಚಿರಪರಿಚಿತರಲ್ಲದ ಕೆಪಿ ಅರವಿಂದ್ ಅವರು ಬಿಗ್ ಬಾಸ್ ಮನೆಗೆ ಬಂದ ಬಳಿಕ ಈಗ ತುಂಬಾನೇ ಫೇಮಸ್ ಆಗಿಬಿಟ್ಟಿದ್ದಾರೆ. ಬಿಗ್ ಬಾಸ್ ೮ರ ಸಂಚಿಕೆಯಲ್ಲಿ ಸ್ಪರ್ಧಿಯಾಗಿರುವ ಅರವಿಂದ್ ಅವರು ವೃತ್ತಿಯಲ್ಲಿ ಬೈಕರ್ ರೇಸರ್ ಆಗಿದ್ದಾರೆ. ಇನ್ನು ಎರಡು ದಿನಗಳ ಹಿಂದೆ ನಡೆದ ಬಿಗ್ ಬಾಸ್ ನ ಸಂಚಿಕೆಯಲ್ಲಿ ಗರ್ಡಾನ್ ಏರಿಯಾದಲ್ಲಿ ಪ್ರಶಾಂತ್ ಸಂಬರಗಿ ಮತ್ತು ಚಂದ್ರ ಚೂಡ್ ಅವರ ಜೊತೆಯಲ್ಲಿ ಕುಳಿತಿದ್ದ ಅರವಿಂದ ಅವರು ಬೈಕ್ ರೇಸ್, ರೈಡಿಂಗ್ ಮಾತನಾಡಿದ್ದು ಕೆಲ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ನಾನು ಬಿಗ್ ಬಾಸ್ ವೇದಿಕೆಗೆ ಬಂದಾಗ ಬೈಕ್ ರೇಡ್ ಮಾಡಿಕೊಂಡೇ ಬಂದೇ ಎಂದು ಅರವಿಂದ್ ಅವರು ಹೇಳುತ್ತಾರೆ.

[widget id=”custom_html-4″]

ಇದನ್ನ ಕೇಳಿದ ಚಂದ್ರಚೂಡ್ ಅವರು ವೇದಿಕೆಗೆ ಹೇಗೆ ಬೈಕ್ ರೇಡ್ ಮಾಡಿಕೊಂಡು ಬಂದ್ರಿ ಎಂದು ಅಚ್ಚರಿಯಿಂದ ಕೇಳುತ್ತಾರೆ. ಇದರ ಬಗ್ಗೆ ಮೊದಲೇ ಬಿಗ್ ಬಾಸ್ ನ ಆಯೋಜಕರು ನನಗೆ ಹೇಳಿದ್ದರು ಎಲ್ಲಿ ಹೇಗೆ ನಿಲ್ಲಿಸಬಕೆಂದು, ಅದೇ ರೀತಿ ನಾನು ಮಾಡಿದೆ ಎಂದು ಅರವಿಂದ ಹೇಳುತ್ತಾರೆ. ಇನ್ನು ಸಿಸಿಎಲ್ ಕ್ರಿಕೆಟರ್ ರಾಜೀವ್ ಇದ್ದಾಗಲೂ ಕೂಡ ತಮ್ಮ ಬೈಕ್ ರೇಸಿಂಗ್ ಜೀವನದ ಬಗ್ಗೆ ಹೇಳಿಕೊಂಡಿರುತ್ತಾರೆ ಅರವಿಂದ್. ಇನ್ನು ಇದೆ ವೇಳೆ ರಾಜೀವ್ ಅವರು ನಿಮಗೆ ಬೇರೆ ಬೇರೆ ಕಂಪನಿಗಳಿಂದ ಆಫರ್ ಬಂದಿಲ್ಲವೇ ಎಂದು ಕೇಳಿದಾಗ, ನನಗೆ ಹಲವಾರು ಕಂಪನಿಗಳಿಂದ ಒಳ್ಳೆಯ ಆಫರ್ ಬಂದಿದೆ, ಆದರೆ ಹೆಚ್ಚು ಹಣ ಕೊಡುತ್ತಾರೆಂದು ನನಗೆ ಉತ್ತಮ ಸವಲತ್ತುಗಳನ್ನ ನೀಡಿರುವ ಸಂಸ್ಥೆಯನ್ನ ಬದಲಾಯಿಸಬಾರದು ಹೇಳುತ್ತಾರೆ.

[widget id=”custom_html-4″]

Advertisements

ನಾನು ಅಮೇರಿಕಾದ ವೀಸಾಗೋಸ್ಕರ ಅಪ್ಲೈ ಮಾಡಿದ್ದ ಸಮಯದಲ್ಲಿ ನನ್ನ ಬ್ಯಾಂಕ್ ಅಕೌಂಟ್ ನಲ್ಲಿದ್ದದ್ದು ಕೇವಲ ೭೦೦ರೂಪಾಯಿ ಮಾತ್ರ, ಆದರೆ ಅಲ್ಲಿನ ವೀಸಾಗೆ ಅಪ್ಲೈ ಮಾಡಲು ನನ್ನ ಅಕೌಂಟ್ ನಲ್ಲಿ ೧೦ ಸಾವಿರ ಡಾಲರ್ ಇರಬೇಕಿತ್ತು. ಈ ವೇಳೆ ಸಂಕಟ ಪರಿಸ್ಥಿತಿಯಲ್ಲಿದ್ದ ನನಗೆ ನಾನು ಪ್ರತಿನಿಧಿಸೋ ಟಿವಿಎಸ್ ಕಂಪನಿಯೇ ನನಗೆ ತರಭೇತಿ, ಫ್ಲೈಟ್ ಟಿಕೆಟ್ ನ ಖರ್ಚನ್ನೆಲ್ಲಾ ಭರಿಸಿದೆ. ಏನೂ ಗಾಯಗಳು ತೊಂದರೆ ಆಗದಿದ್ದಲ್ಲಿ ಈ ಬೈಕ್ ರೇಸಿಂಗ್ ವೃತ್ತಿಯನ್ನ ೪೫ವರ್ಷದವರೆಗೂ ಮಾಡಬಹುದಷ್ಟೆ..ಆದರೆ ಕಂಪನಿಯಿಂದ ಕಂಪನಿಗೆ ಹೋದಾಗ ಅನ್ನಿನ ರೂಲ್ಸ್ ಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತೆ..ಆದರೆ ಇದ್ಯಾವದೂ ಅವಶ್ಯಕತೆ ಇಲ್ಲವೆಂಬಂತೆ ನನ್ನನ್ನ TVS ಕಂಪನಿ ಚೆನ್ನಾಗಿಯೇ ನೋಡಿಕೊಂಡಿದೆ. ಇನ್ನು ಇದೆ ಕಂಪನಿ ನನ್ನ ಮೇಲೆ ಪ್ರತೀ ವರ್ಷ ಬರೋಬ್ಬರಿ ಮೂರೂ ಕೋಟಿಯಷ್ಟು ಹಣವನ್ನ ಇನ್ವೆಸ್ಟ್ ಮಾಡುತ್ತೆ ಎಂದು ಬೈಕ್ ರೇಸಿಂಗ್ ಹಾಗೂ ಕಂಪನಿ ಬಗೆಗಿನ ಹಲವಾರು ಕುತೂಹಲ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ ಕೆಪಿ. ಅರವಿಂದ್..