ಫಿಕ್ಸ್ ಆಗಿದ್ದ ದಿನಕ್ಕೂ ಮುಂಚೆಯೇ ತನ್ನನ್ನ ತಾನೇ ಮದ್ವೆಯಾದ ಯುವತಿ.!ಫೋಟೋಸ್ ನೋಡಿ..

Kannada News
Advertisements

ನಮಸ್ತೇ ಸ್ನೇಹಿತರೇ, ಇತ್ತೀಚೆಗಷ್ಟೇ ತನ್ನನ್ನ ತಾನೇ ಮದುವೆಯಾಗುವುದಾಗಿ ಹೇಳಿ ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಗುಜರಾತ್ ನ ೨೪ವರ್ಷದ ಯುವತಿ ಕ್ಷಮಾ, ಈಗ ತಾನು ಫಿಕ್ಸ್ ಮಾಡಿಕೊಂಡಿದ್ದ ಮದುವೆ ದಿನಾಂಕದ ಮೂರುದಿನ ಮುಂಚಿತವಾಗಿಯೇ ಶಾಸ್ತ್ರೋಕ್ತವಾಗಿ ತನ್ನನ್ನ ತಾನೇ ಮದುವೆಯಾಗುವ ಮೂಲಕ ಅಚ್ಚರಿ ಮೂಡುವಂತೆ ಮಾಡಿದ್ದಾಳೆ. ಇನ್ನು ಅಪರೂಪದ ವಿಚಿತ್ರ ಮದುವೆ ಗುಜರಾತ್ ನ ವಡೋದರದ ಗೋತ್ರಿ ಎಂಬ ಪ್ರದೇಶದಲ್ಲಿ ಯುವತಿ ಕ್ಷಮಾ ಮದುವೆ ಸುಮಾರು ೪೦ ನಿಮಿಷಗಳ ಕಾಲ ನೆರವೇರಿದ್ದು, ಆಪ್ತಬಳಗದವರು, ಸ್ನೇಹಿತರು ಈ ಅಪರೂಪದ ವಿಚಿತ್ರ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇನ್ನು ತನ್ನನ್ನ ತಾನೇ ಮದುವೆಯಾಗುತ್ತಿರೋ ಯುವತಿ ಕ್ಷಮಾ ಕೆಂಪು ಬಣ್ಣದ ಸೀರೆ ಹುಟ್ಟಿದ್ದು, ನವ ವಧುವಿನಂತ ಮಿಂಚಿದ್ದಾರೆ.

Advertisements

ಇನ್ನು ಯುವತಿ ಕ್ಷಮಾ ಬಿಂದು ಮಂಟಪಕ್ಕೆ ಬರುತ್ತಿದ್ದ ವೇಳೆ ಆಕೆಯ ಸ್ನೇಹಿತೆಯರು ಹೂವಿನ ಮಳೆ ಸುರಿಸುತ್ತಾ ಸ್ವಾಗತ ಮಾಡಿದ್ದಾರೆ. ಇನ್ನು ಕ್ಷಮಾ ಸಿಂಧೂರ ಧರಿಸಿದ್ದು, ಎರಡು ಕೈ ತುಂಬಾ ಬಲೇ ಧರಿಸಿ, ಅದಾಗಲೇ ಕಟ್ಟಿಕೊಂಡಿರುವ ಕೊರಳಲ್ಲಿರುವ ತಾಳಿ ತೋರಿಸಿ ನನ್ನ ಮದುವೆ ಮುಗಿದು ಹೋಯ್ತು, ನಾನೀಗ ವಿವಾಹಿತ ಮಹಿಳೆಯಾಗಿರುವುದಕ್ಕೆ ತುಂಬಾನೇ ಖುಷಿಯಾಗುತ್ತಿದೆ ತುಂಬಾನೇ ಸಂತೋಷವನ್ನ ವ್ಯಕ್ತಪಡಿಸಿದ್ದಾಳೆ. ಇನ್ನು ನಾನೀಗ ಮದುವೆಯಾಗಿದ್ದು, ಬೇರೆ ಹೆಣ್ಣು ಮಕ್ಕಳಂತೆ, ಮನೆಯನ್ನ ಬಿಟ್ಟು ಹೋಗುವ ಅವಶ್ಯಕತೆ ಇಲ್ಲ.

ಹಾಗಾಗಿ ಮದುವೆಯಾದ ಬಳಿಕ ನಾನು ಮನೆಯನ್ನ ಬಿಟ್ಟು ಹೋಗುವ ಅಗತ್ಯವಿಲ್ಲ. ನಾನಾಗಿರುವ ಈ ಮದುವೆಯಿಂದಲೇ ಇಂತಹ ದೊಡ್ಡ ಪ್ರಯೋಜನ ಸಿಕ್ಕಿದೆ ಎಂದು ಕ್ಷಮಾ ಹೇಳಿದ್ದಾರೆ. ಇನ್ನು ಎಲ್ಲರ ಮದುವೆಗಳಲ್ಲಿ ನಡೆಯುವಂತೆ, ಎಲ್ಲಾ ರೀತಿಯ ಶಾಸ್ತ್ರಗಳನ್ನ ಈ ಮದುವೆಯಲ್ಲಿಯೂ ಕೂಡ ಆಚರಿಸಲಾಗಿದೆ. ಹೌದು, ಕ್ಷಮಾ ಬಿಂದು ಮದುವೆಯಲ್ಲಿ ಮೆಹಂದಿ ಸೇರಿಡ್ನಾತೆ ಹಲವು ಶಾಸ್ತ್ರಗಳನ್ನ ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ. ಇನ್ನು ಈ ಸಂಭ್ರಮದ ವೇಳೆ ನಮ್ಮ ಮನೆಗೆ ಅನೇಕ ಮಂದಿ ಬಂದು ಹೋಗುತ್ತಿದ್ದರಿಂದ, ಅಕ್ಕಪಕ್ಕದ ಮನೆಯವರು ತಕರಾರು ತೆಗೆದು ಗಲಾಟೆ ಮಾಡಿದ್ದರು. ಇದೆ ರೀತಿಯ ಗಲಾಟೆಗಳು ನನ್ನ ಮಾಡುವೆ ದಿನ ಕೂಡ ಆಗುವ ಸಂಭವ ಇದ್ದುದರಿಂದ ನಾನು ನನ್ನನ್ನೇ ಮೂರೂ ದಿನ ಮುಂಚೆ ಮದುವೆಯಾಗಿರುವುದಾಗಿ ಕ್ಷಮಾ ಹೇಳಿದ್ದಾರೆ. ನನ್ನ ಮದುವೆ ಗುಟ್ಟಾಗಿ ನಡೆಯಬೇಕಾಗಿರುವ ಕಾರಣದಿಂದ ನಮ್ಮ ಸಹದ್ಯೋಗಿಗಳು ಸೇರಿದಂತೆ ನನ್ನ ಆಪ್ತ ಹತ್ತು ಸ್ನೇಹಿತೆಯರು ಈ ಮದುವೆಯಲ್ಲಿ ಭಾಗಿಯಾಗಿದ್ದರು ಎಂದು ಕ್ಷಮಾ ಬಿಂದು ಹೇಳಿದ್ದಾಳೆ.