ಕುರಿ ಪ್ರತಾಪ್ ಹೊಸ ಮನೆಯ ಗೃಹ ಪ್ರವೇಶ..ಕುರಿ ಕಾಲೆಳೆದ ಒಳ್ಳೆಹುಡುಗ ಪ್ರಥಮ್..

Entertainment

ಮಜಾ ಟಾಕೀಸ್ ಖ್ಯಾತಿಯ ಸ್ಯಾಂಡಲ್ವುಡ್ ನ ಖ್ಯಾತ ಹಾಸ್ಯ ನಟ ಕುರಿಪ್ರತಾಪ್ ಈಗ ಕನ್ನಡ ಸಿನಿಮಾ ರಂಗದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್ನು ಕೆಲವು ವಾರಗಳ ಹಿಂದಷ್ಟೆ ನಡೆದಿದ್ದ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ೭ರ ಸೀಸನ್ ನ ರನ್ನರ್ ಆಪ್ ಕೂಡ ಆಗಿದ್ದಾರೆ.

ಇನ್ನು ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ಹಾಸ್ಯ ನಟ ಕುರಿ ಪ್ರತಾಪ್ ರವರು ಇಂದು ತಮ್ಮ ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದಾರೆ. ಇನ್ನು ಕುಟುಂಬದವರು, ಸ್ನೇಹಿತರು ಭಾಗಿಯಾಗಿದ್ದ ಕುರಿ ಪ್ರತಾಪ್ ಹೊಸ ಮನೆಯ ಗ್ರಹಪ್ರವೇಶ ಕಾರ್ಯಕ್ರಮದಲ್ಲಿ ಒಳ್ಳೆ ಹುಡುಗ ಪ್ರಥಮ್ ಕೂಡ ಹೋಗಿದ್ದು ಶುಭ ಕೋರಿದ್ದಾರೆ.

ಇನ್ನು ಗೃಹ ಪ್ರವೇಶದ ಸಂಭ್ರಮದಲ್ಲಿರುವ ಕುರಿ ಪ್ರತಾಪ್ ಗೆ ಕಾಲೆಳೆದಿರುವ ಪ್ರಥಮ್, ಕುರಿ ಇನ್ನ ಮುಂದೆ ಕೊಟ್ಟಿಗೆಯಲ್ಲಿ ಇರಲ್ಲ..ಬಂಗಲೆಯಲ್ಲಿ ಇರುತ್ತೆ ಅಂತ ತಮಾಷೆ ಮಾಡಿದ್ದಾರೆ. ಇನ್ನು ನಟ ಕುರಿ ಪ್ರತಾಪ್ ೩೦ ಕೋಟಿ, ೪೦ ಕೋಟಿ ಖರ್ಚು ಮಾಡಿ ಮನೆ ಕಟ್ಟಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನ ಹಬ್ಬಿಸಬೇಡಿ ಎಂದಿರುವ ಪ್ರಥಮ ಕುರಿ ಪ್ರತಾಪ್ ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡಿ ಎಂದು ಕುರಿಯ ಕಾಲೆಳೆದಿದ್ದಾರೆ.

ಒಟ್ಟಿನಲ್ಲಿ ಒಳ್ಳೆ ಹುಡುಗ ಕುರಿ ಪ್ರತಾಪ್ ರವರ ಹೊಸ ಮನೆಯ ಗೃಹ ಪ್ರವೇಶದಲ್ಲಿ ಪಾಲ್ಗೊಂಡು ವಿಭಿನ್ನವಾಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದು, ತಮ್ಮ ಫೋಟೋಗಳನ್ನ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡು ಸಂಭ್ರಮಪಟ್ಟಿದ್ದಾರೆ.