ತಾವೇ ಕಷ್ಟದಲಿದ್ದರೂ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ ?

Cinema
Advertisements

ಸ್ನೇಹಿತರೇ, ಈ ಮಹಾಮಾರಿ ಸೋಂಕು ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ಈಗ ೧೪ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇನ್ನು ಇದರಿಂದ ಸಾಮಾನ್ಯ ಜನರು, ದಿನಗೂಲಿ ಕೆಲಸಗಾರರು, ಬೀದಿ ಬದಿ ವ್ಯಾಪಾರಿಗಳು, ಸಿನಿಮಾ ಕಾರ್ಮಿಕರು ಸೇರಿದಂತೆ ಬಹುತೇಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇದೆ ವೇಳೆ ಸೆಲೆಬ್ರೆಟಿಗಳು ಸೇರಿದಂತೆ ಅನೇಕರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಅಂತಹರವಳ್ಳಿ ಒಬ್ಬರು ಚಂದನವನದ ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ಅವರು..

[widget id=”custom_html-4″]

ಹೌದು, ತಾವು ಎಷ್ಟೇ ಕಷ್ಟದಲ್ಲಿದ್ದರೂ ಸಹ ಪರರ ಸಂಕಷ್ಟಕ್ಕಾಗಿ ಮಿಡಿಯುವ ಮನಸ್ಸು ಲೀಲಾವತಿಯವರದ್ದು. ಕಳೆದ ವರ್ಷ ಕೂಡ ಲಾಕ್ ಡೌನ್ ಸಮಯದಲ್ಲಿ ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದ, ಈ ಬಾರಿ ಕೂಡ, ಈ ಕೋವಿಡ್ ನ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಇನ್ನು ನಟ ವಿಂಡೋ ರಾಜ್ ಅವರು ಕೂಡ ತಾಯಿಗೆ ತಕ್ಕ ಮಗ. ಅವರ ಬಗ್ಗೆ ಇಲ್ಲ. ಹೌದು, ಲಾಕ್ ಡೌನ್ ಆಗಿದ್ದು ಈಗ ಸಿನಿಮಾ ರಂಗದಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಸಂಕಷ್ಟದ ಪರಿಸ್ಥಿತಯಲ್ಲಿದ್ದಾರೆ, ಜೊತೆಗೆ ಬಡ ಕಲಾವಿದರೂ ಕೂಡ..ಈಗ ಇಂತಹವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಮಮತಾಮಯಿ ಮಾತೆ ಲೀಲಾವತಿ ಅವರು.

[widget id=”custom_html-4″]

Advertisements

ಪುತ್ರ ವಿನೋದ್ ರಾಜ್ ಅವರ ಜೊತೆ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಲೀಲಾವತಿಯವರು ಪುತ್ರ ವಿನೋದ್ ರಾಜ್ ಜೊತೆ ಸೇರಿ ಸುಮಾರು ೨೦೦ಕ್ಕೂ ಹೆಚ್ಚು ಸಿನಿಮಾ ಕಾರ್ಮಿಕರು ಹಾಗೂ ಸಹ ಕಲಾವಿದರಿಗೆ ಬೆಂಗಳೂರಿನ ಸುಮ್ಮನಹಳ್ಳಿಯಲ್ಲಿ ದಿನಸಿ ಕಿಟ್ ಗಳನ್ನ ನೀಡಿದ್ದಾರೆ. ಯಾರೇ ಸಂಕಷ್ಟದ ಪರಿಸ್ಥಿತಿಯಲ್ಲಿದ್ದರೂ ತಮ್ಮ ಕೈಲಾದ ಸಹಾಯ ಮಾಡುವ ಗುಣ ರೂಡಿಸಿಕೊಂಡು ಬಂದಿದ್ದಾರೆ ಹಿರಿಯ ನಟಿ ಲೀಲಾವತಿಯವರು. ಇನ್ನು ಮಗ ನಟ ವಿನೋದ್ ರಾಜ್ ಅವರು ಕೂಡ ತನ್ನ ತಾಯಿಯ ಹಾದಿಯಲ್ಲೇ ಸಾಗುತ್ತಿದ್ದಾರೆ. ಇನ್ನು ದಿನಸಿ ಕಿಟ್ ಗಳನ್ನ ವಿತರಣೆ ಮಾತನಾಡಿರುವ ಲೀಲಾವತಿಯವರು ನಮ್ಮ ಈ ಚಿಕ್ಕ ಸಹಾಯದಿಂದ ಯಾರಿಗೆ ಹೊಟ್ಟೆ ತುಂಬುತ್ತೋ ಗೊತ್ತಿಲ್ಲ, ಆದರೆ ಆ ಭಗವಂತನ ಆಶೀರ್ವಾದದಿಂದ ನನ್ನ ಕೈಲಾದ ಕೆಲಸ ಮಾಡುತ್ತಿದ್ದೇನೆ ಎಂದು ಹಿರಿಯ ನಟಿ ಹೇಳಿದ್ದಾರೆ.