ಬ್ರೇಕಿಂಗ್ ನ್ಯೂಸ್..ಮತ್ತೆ ವಿಸ್ತರಣೆ ಆಯ್ತು ಲಾಕ್ ಡೌನ್.?ಎಷ್ಟು ದಿವಸ ಅಂತ ನೋಡಿ..

News
Advertisements

ದಿನದಿಂದ ದಿನಕ್ಕೆ ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ವಿಸ್ತರಿಸುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದ್ದಾರೆ.

Advertisements

ಇದಕ್ಕೂ ಮೊದಲು ಏಪ್ರಿಲ್ ೧೪ರವರೆಗೆ ಲಾಕ್ ಡೌನ್ ಮಾಡಲಾಗಿತ್ತು. ಆದರೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಏಪ್ರಿಲ್ 30ರವರೆಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯುವುದು ಎಂದು ಸಿಎಂ ಯಡಿಯೂರಪ್ಪನವರು ಆದೇಶ ಮಾಡಿದ್ದಾರೆ.

ಇನ್ನು ಏಪ್ರಿಲ್ ೧೪ಕ್ಕೆ ಲಾಕ್ ಡೌನ್ ಅಂತ್ಯವಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವೀಡಿಯೊ ಕಾನ್ಪರೆನ್ಸ್ ನ ಡೆಸಿದ್ದಾರೆ. ಇನ್ನು ಈ ವಿಡಿಯೋ ಕಾನ್ಪರೆನ್ಸ್ ಮುಗಿದ ಬಳಿಕ ಮಾತನಾಡಿದ ಯಡಿಯೂರಪ್ಪನವರು, ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಕರಣ ಅನಿವಾರ್ಯವಾಗಿ ಲಾಕ್ ಡೌನ್ ನ್ನ ಏಪ್ರಿಲ್ ೩೦ರವರೆಗೆ ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಎರಡು ವಾರಗಳ ಕಾಲ ಮುಂದುವರಿಯಲಿರುವ ಈ ಲಾಕ್ ಡೌನ್ ಮೊದಲಿಗಿಂತ ವಿಭಿನ್ನವಾಗಿದ್ದು, ಮುಂದಿನ ಎರಡುದಿನಗಳಲ್ಲಿ ಕೇಂದ್ರ ಸರ್ಕಾರ ನೀಡುವ ಮಾರ್ಗ ಸೂಚಿಗಳ ಪ್ರಕಾರ ಲಾಕ್ ಡೌನ್ ಇರಲಿದೆ ಎಂದು ಹೇಳಲಾಗಿದೆ.