ಲಾಕ್ ಡೌನ್ ಉಲ್ಲಂಘಿಸಿದ ಈ ಯುವಕರಿಗೆ ಏನ್ ಗತಿ ಬಂತು ನೋಡಿ..

News Video
Advertisements

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದರೂ ಜನರು ಮಾತ್ರ ತಮಗೆ ಏನೂ ಸಂಬಂಧ ಇಲ್ಲ ಎಂಬಂತೆ,ಮಾಸ್ಕ್ ಕೂಡ ಧರಿಸದೇ ಅನಾವಶ್ಯಕವಾಗಿ ಹೊರಗಡೆ ಓಡಾಡುತ್ತಿದ್ದಾರೆ. ಪೊಲೀಸರು ಕೂಡ ಎಷ್ಟೇ ಜಾಗೃತಿ ಮೂಡಿಸಿದ್ರೂ ಜನರು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತಿಲ್ಲ.ಈಗ ತಮಿಳುನಾಡು ಪೊಲೀಸರು ವಿನೂತನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಸುಖಾಸುಮ್ಮನೆ ಓಡಾಡುವರಿಗೆ ಪಾಠ ಕಲಿಸುವ ಸಲುವಾಗಿ ಡಮ್ಮಿ ಕೊರೋನಾ ಸೋಂಕಿತನಿದ್ದ ಅಂಬ್ಯುಲೆನ್ಸ್ ಗೆ ಒಂದೇ ಗಾಡಿಯಲ್ಲಿ ಬರುತ್ತಿದ್ದ ಮೂವರು ಯುವಕರನ್ನ ಹತ್ತಿಸಿ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿರುವಂತೆ ಮೂವರು ಯುವಕರು ತಮಿಳುನಾಡಿನ ತಿರುಪುರ್ ನಲ್ಲಿ ಬೈಕ್ ನಲ್ಲಿ ಬರುತ್ತಾರೆ. ಆದರೆ ಅವರು ಮಾಸ್ಕ ಧರಿಸಿರುವುದಿಲ್ಲ. ಸೋಷಿಯಲ್ ಡಿಸ್ಟೆನ್ಸ್ ಕೂಡ ಇರುವುದಿಲ್ಲ. ಆಗ ತಪಾಸಣೆಯಲ್ಲಿದ್ದ ಪೊಲೀಸ್ ಅಧಿಕಾರಿಗಳು ಅವರನ್ನ ನಿಲ್ಲಿಸುತ್ತಾರೆ. ಬಳಿಕ ಅಲ್ಲೇ ಇದ್ದ ಅಂಬ್ಯುಲೆನ್ಸ್ ನಲ್ಲಿ ಕೋರೋಣ ಸೋಂಕಿತ ವ್ಯಕ್ತಿ ಇರುತ್ತಾನೆ. ಅದೇ ಅಂಬ್ಯುಲೆನ್ಸ್ ಗೆ ಈ ಮೂವರನ್ನ ಹತ್ತಿಸುವಂತೆ ಪೊಲೀಸ್ ಅಧಿಕಾರಿ ಹೇಳುತ್ತಾರೆ.ಇನ್ನು ಆಂಬುಲೆನ್ಸ್ ಒಳಗೆ ಇರುವುದು ಕೊರೋನಾ ಪೀಡಿತ ವ್ಯಕ್ತಿ ಎಂದು ಆ ಯುವಕರಿಗೆ ಗೊತ್ತಾದ ತಕ್ಷಣ ಅವರಿಗೆ ಶಾಕ್ ಆಗಿ ಭಯಗೊಳ್ಳುತ್ತಾರೆ. ಇನ್ನು ಆಂಬುಲೆನ್ಸ್ ನಲ್ಲಿ ಅವರನ್ನ ಹತ್ತಿಸಲು ಹೋದಾಗ ಬೇಡ ಎಂದು ಅಧಿಕಾರಿಗಳ ಕೈಕಾಲು ಹಿಡಿದುಕೊಂಡು ಬೇಡಿಕೊಳ್ಳುವ ದೃಶ್ಯಗಳು ಈ ವಿಡಿಯೋದಲ್ಲಿವೆ.

ಇನ್ನ್ನು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ವಿಡಿಯೋ ಮಾಡಲಾಗಿದ್ದು, ಆಂಬುಲೆನ್ಸ್ ಒಳಗಿದ್ದವನು ಕೊರೋನಾ ಸೋಂಕಿತ ವ್ಯಕ್ತಿ ಅಲ್ಲ. ಅದು ಕೇವಲ ನಟನೆ ಅಷ್ಟೇ ಎಂದು ಎಂದು ತಮಿಳುನಾಡು ಪೊಲೀಸ್ರು ಸ್ಪಷ್ಟನೆ ಕೊಟ್ಟಿದ್ದಾರೆ.