ನಿಮಗೆ ಈ ಅಭ್ಯಾಸಗಳು ಇದ್ದರೆ, ಖಂಡಿತಾ ಲಕ್ಷ್ಮೀದೇವಿ ನಿಮ್ಮ ಮನೆಯ ಬಾಗಿಲಿಗೂ ಬರೋದಿಲ್ಲ.!

Adhyatma Astrology
Advertisements

ವಿಷ್ಣು ಪ್ರಿಯೆ ಮಹಾಲಕ್ಷ್ಮಿಯ ಕೃಪೆ ನಮ್ಮ ಮೇಲೆ ಇದ್ದರೆ ಆರೋಗ್ಯ , ಐಶ್ವರ್ಯ , ಸಮೃದ್ಧಿ ನೆಮ್ಮದಿ ಎಲ್ಲವೂ ನಮ್ಮ ಜೀವನದಲ್ಲಿ ಇರುತ್ತದೆ ಅದೇ ಲಕ್ಷ್ಮಿಯ ಅನುಗ್ರಹ ಇರದೇ ಹೋದರೆ ಬದುಕಿನಲ್ಲಿ ನಾನಾ ರೀತಿಯ ಸಂಕಷ್ಟಗಳು ಎದುರಾಗುತ್ತವೆ. ನಮ್ಮ ಕೆಲವು ಅಭ್ಯಾಸಗಳು ಲಕ್ಷ್ಮೀ ದೇವಿ ನಮಗೆ ಒಲಿಯದಂತೆ ಮಾಡುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಮುಂಜಾನೆ ಮತ್ತು ಸಂಜೆ ನಿದ್ರಿಸುವುದು : ಬೆಳಗ್ಗೆ ತಡವಾಗಿ ಏಳುವುದು ಸೋಮಾರಿಗಳ ಲಕ್ಷಣ. ಮುಂಜಾನೆ ಮತ್ತು ಸಂಜೆ ಗೋಧೂಳಿ ಲಗ್ನದಲ್ಲಿ ಲಕ್ಷ್ಮಿಯು ಮನೆಗೆ ಬರುತ್ತಾಳೆ ಎಂದು ಹೇಳಲಾಗಿದೆ. ಈ ಸಮಯದಲ್ಲಿ ನಾವು ನಿದ್ರಿಸುತಿದ್ದರೆ ಲಕ್ಷ್ಮಿಯು ನಮ್ಮ ಮನೆಯ ಒಳಗೆ ಬಾರದೆ ಹಿಂದಿರುಗುತ್ತಾಳೆ. ಆದ್ದರಿಂದ ಮನೆಗೆ ಲಕ್ಷ್ಮಿಯು ಬರುವ ಸಮಯದಲ್ಲಿ ಬಾಗಿಲಿಗೆ ರಂಗೋಲಿ ಹಾಕಿ ಪೂಜೆ ಪುನಸ್ಕಾರ ಮಾಡಿ ನಮ್ಮ ಕಾಯಕದಲ್ಲಿ ತೊಡಗಬೇಕು. ಇದರಿಂದ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ.

ವಿನಾಕಾರಣ ಹಣ ಖರ್ಚು ಮಾಡುವುದು : ಹಣ ಹಣವನ್ನು ಆಕರ್ಷಿಸುತ್ತದೆ. ನಮ್ಮ ಬಳಿ ಸಾಕಷ್ಟು ಹಣ ಇದ್ದರೆ ಅದರಲ್ಲಿ ಒಂದಿಷ್ಟು ಖರ್ಚು ಮಾಡಿ ಉಳಿದುದನ್ನು ಹಾಗೆ ಇಟ್ಟುಕೊಳ್ಳಬೇಕು. ಅದರ ಬದಲು ಅನಾವಶ್ಯಕವಾಗಿ ಬೇಕಾದದ್ದು ಬೇಡದ್ದು ಖರೀದಿಸಿ ಕಾಲಿ ಕೈ ಮಾಡಿಕೊಳ್ಳಬಾರದು. ಇದರಿಂದ ಹಣಕ್ಕೆ ದರಿದ್ರ ಉಂಟಾಗುತ್ತದೆ. ನಮ್ಮ ಬಳಿ ಸ್ವಲ್ಪವಾದರೂ ಹಣವನ್ನು ಯಾವಾಗಲೂ ಇಟ್ಟುಕೊಂಡಿರಬೇಕು.

ಸುಮ್ಮ ಸುಮ್ಮನೇ ಹಣ ನೀಡುವುದು : ಯಾರಾದರೂ ಕಷ್ಟದಲ್ಲಿ ಇದ್ದರೆ ಅವರಿಗೆ ಹಣದ ಸಹಾಯ ಮಾಡುವುದು ಒಳ್ಳೆಯದು. ವ್ಯವಹಾರಕ್ಕಾಗಿ ಹಣ ಕೊಟ್ಟು ತೆಗೆದು ಕೊಳ್ಳುವುದು ಸಹಜವೇ. ಆದರೆ ನಮ್ಮಲ್ಲಿ ಹಣ ಇದೆಯೆಂದು ಕೇಳು ಕೇಳಿದವರಿಗೆಲ್ಲಾ ಕೊಡುವುದು, ಸುಮ್ಮನೇ ತೋರಿಕೆಗಾಗಿ ಬೇರೆಯವಿಗೆ ವೀನಾ ಕಾರಣ ಹಣ ನೀಡುವುದು, ನಮ್ಮ ಬಳಿ ಹಣ ಇಲ್ಲದೇ ಇದ್ದರೂ ಬೇರೆಯವರಿಗೆ ಕೊಡುವುದು ಇದೆಲ್ಲ ನಮಗೆ ಹಣದ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹೀಗೆ ಮಾಡುವುದರಿಂದ ನಮ್ಮ ಕೈಯಲ್ಲಿ ಹಣ ನಿಲ್ಲುವುದಿಲ್ಲ.

ಲಕ್ಷ್ಮಿಗೆ ಗೌರವ ಕೊಡದೇ ಇರುವುದು : ನಾವು ಒಂದೊಂದು ರೂಪಾಯಿಗೂ ಬೆಲೆ ಕೊಡಬೇಕಾಗುತ್ತದೆ. ಪ್ರತೀ ವಸ್ತುವನ್ನು ಗೌರವದಿಂದ ಕಾಣಬೇಕು. ಸುಮ್ಮನೇ ಹಣವನ್ನು ಎಲ್ಲೆಂದರಲ್ಲಿ ಬಿಸಾಡುವುದು, ದುಂದು ವೆಚ್ಚ ಮಾಡುವುದು, ಹಣದದ ಬಗ್ಗೆ ಗೌರವ ಇಲ್ಲದೆ ಮಾತನಾಡುವುದು, ಒಳ್ಳೆ ರೀತಿಯಿಂದ ಬರುವ ಹಣ ಅಥವಾ ಸಂಪತ್ತನ್ನು ನಿರಾಕರಿಸುವುದು, ತಿನ್ನುವುದಕ್ಕಾಗಿ ಅಪಾರ ಹಣ ಖರ್ಚು ಮಾಡುವುದು ಇದೆಲ್ಲ ಲಕ್ಷ್ಮೀ ಕೃಪೆ ನಮ್ಮ ಮೇಲೆ ಇರದಂತೆ ಮಾಡುತ್ತವೆ.