ಹಿರಣ್ಯ ಕಶ್ಯಪನನ್ನು ಕೊಂ’ದ ನರಸಿಂಹಸ್ವಾಮಿ ನರಳಿದ್ದು ಏಕೆ ಗೊತ್ತೆ.! ಔದುಂಬರ ವೃಕ್ಷದ ಬಗ್ಗೆ ನಿಮಗೆ ತಿಳಿಯದ ರಹಸ್ಯಗಳು..

Adhyatma
Advertisements

ಬಾಲಕ ಪ್ರಹ್ಲಾದ ಕರೆಗೆ ನರಸಿಂಹ ಅವತಾರವನ್ನು ಎತ್ತುತ್ತಾನೆ ಮಹಾವಿಷ್ಣು. ರಕ್ಕಸ ಹಿರಣ್ಯ ಕಶ್ಯಪನನ್ನು ಸಂಹರಿಸುತ್ತಾರೆ. ಉಗ್ರ ನರಸಿಂಹ ಕಂಬದಿಂದ ಹೊರಬಂದು ಹಿರಣ್ಯ ಕಶ್ಯಪನ ಹೊಟ್ಟೆಯನ್ನು ಬಗೆದು ಕರುಳುಗಳನ್ನು ಮಾಲೆಯಾಗಿ ಹಾಕಿಕೊಳ್ಳುತ್ತಾನೆ. ಆದರೆ ಹಿರಣ್ಯಕಶುಪುವಿನ ಹೊಟ್ಟೆಯಲ್ಲಿ ಕಾಲಕೋಟ ವಿಶವಿರುತ್ತದೆ. ಇದು ಘನ ಘೋರವಾಗಿದ್ದು ಅವನ ರಾಕ್ಷಸೀಯ ಗುಣಗಳಿಗೆ ಕಾರಣವಾಗಿರುತ್ತದೆ. ಈ ವಿಷಯವನ್ನು ಸ್ಪರ್ಶಿಸಿದ ನರಸಿಂಹ ಸ್ವಾಮಿಯ ಉಗುರುಗಳು ಹಿರಣ್ಯಕಶ್ಯಪ್ನ ಸಂಹಾರದ ನಂತರ ಉರಿಯ ತೊಡಗುತ್ತದೆ. ಏನೇ ಮಾಡಿದರು ಉರಿ ನೋವು, ಶಮನವಾಗುವುದಿಲ್ಲ. ಇದನ್ನು ನೋಡಿದ ಲಕ್ಷ್ಮೀದೇವಿಯು ಪರಿಹಾರವನ್ನು ಕಂಡುಹಿಡಿಯುತ್ತಾರೆ. ಅದುವೇ ಔದುಂಬರ ವೃಕ್ಷ. ಔದುಂಬರ ವೃಕ್ಷದ ಹಣ್ಣುಗಳನ್ನು ನರಸಿಂಹ ಸ್ವಾಮಿಯ ಉಗುರುಗಳಿಗೆ ಲೇಪಿಸಿದ ನಂತರ ಉರಿ ಮತ್ತು ನೋವು ಮಾಯವಾಗುತ್ತದೆ. ನಂತರ ಈ ಔದುಂಬರದಕ್ಷಕ್ಕೆ ಮಹಾಲಕ್ಷ್ಮಿಯು ವರವನ್ನು ಕೊಡುತ್ತಾಳೆ.

ಔದುಂಬರ ವೃಕ್ಷ ಅಥವಾ ಹತ್ತಿ ಮರ ವಿಷ್ಣು ಮತ್ತು ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದದ್ದು. ಇದನ್ನು ಕಡಿಯುವುದು ಶಾಸ್ತ್ರಗಳಲ್ಲಿ ನಿಷಿದ್ಧ. ಈ ಮರ ಪೂಜನೀಯವಾದದ್ದು. ಔದುಂಬರ ವೃಕ್ಷವನ್ನು ಪೂಜೆ ಮಾಡುವುದರಿಂದ ಐಶ್ವರ್ಯ ಸುಖ ಸಂಪತ್ತು ದೊರಕುತ್ತದೆ. ಒಂದು ವೇಳೆ ಈ ಮರವನ್ನು ಕಡಿದರೆ ಅದು ಘೋರ ಅಪರಾಧವಾಗುತ್ತದೆ. ಈ ಮರವನ್ನು ಕಡಿದವರು ಮತ್ತು ಕಡಿಸಿದವರು ಭೂಮಿಯ ಮೇಲೆ ನರಕವನ್ನೇ ಅನುಭವಿಸುತ್ತಾರೆ ಎಂದು ಹೇಳಲಾಗಿದೆ. ಮತ್ತು ಹತ್ತಿ ಮರದಲ್ಲಿ ಸಾಕ್ಷಾತ್ ಗುರು ದತ್ತಾತ್ರೇಯರೇ ನೆಲೆಸಿದ್ದಾರೆ ಎನ್ನಲಾಗುತ್ತದೆ. ಯಾವುದಾದರೂ ಶುಭಕಾರ್ಯಗಳು ನೆರವೇರಬೇಕಾದರೆ ಮತ್ತು ಗುರುವಿನ ಕೃಪೆಗೆ ಪಾತ್ರರಾಗಬೇಕಾದರೆ ಈ ಮರವನ್ನು ಪೂಜಿಸಬೇಕು. ಮತ್ತು ಔದುಂಬರ ವೃಕ್ಷವನ್ನು ಪೂಜಿಸುವವರ ಮೇಲೆ ಮಹಾಲಕ್ಷ್ಮಿಯ ಕೃಪೆ ಸದಾ ಇರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.