ಸೂರ್ಯ ಪುತ್ರ ಶನಿದೇವರಿಗೂ ಮಹಾಭಾರತದ ಕರ್ಣನಿಗೂ ಇದ್ದ ಸಂಭಂದವೇನು ಗೊತ್ತಾ?ಯಾರಿಗೂ ಗೊತ್ತಿಲ್ಲದ ರೋಚಕ ಸ್ಟೋರಿ..

Adhyatma

ಕರ್ಣ ಮಹಾ ಭಾರತದ ಮಹಾರತಿ. ಧಾನವೀರ ಶೂರ ಎಂದು ಲೋಕದಲ್ಲಿ ಪ್ರಸಿದ್ಧಿಗಳಿಸಿದವನು. ಆದರೆ ಕರ್ಣನಿಗೂ ಶನಿ ದೇವನಿಗೂ ಏನು ಸಂಬಂಧ? ಮಹಾ ಭಾರತದ ಕಾವ್ಯದಲ್ಲಿ ಎಲ್ಲಿಯೂ ಶನಿ ದೇವರ ಉಲ್ಲೇಖ ಇಲ್ಲವಲ್ಲ ಎಂದು ನೀವು ಯೋಚಿಸಬಹುದು. ಆದರೆ ಸ್ಕಂದ ಪುರಾಣದಲ್ಲಿ ಈ ಬಗ್ಗೆ ಹೇಳಲಾಗಿದೆ. ಅದೇನೆಂದು ತಿಳಿಯೋಣ ಬನ್ನಿ..ಸೂರ್ಯ ದೇವ ವಿಶ್ವ ಕರ್ಮರ ಮಗಳಾದ ಸಂಧ್ಯಾ ದೇವಿಯನ್ನು ಮದುವೆಯಾಗುತ್ತಾನೆ. ಅವರಿಬ್ಬರಿಗೂ ಯಮ ಮತ್ತು ಯಮಿಯರು ಜನಿಸುತ್ತಾರೆ. ಆದರೆ ದಿನೇ ದಿನೇ ಸೂರ್ಯನ ತಾಪ ಮಾನವನ್ನು, ಪ್ರಕಾಶವನ್ನು ತಡೆದುಕೊಳ್ಳಲು ಸಂಧ್ಯಾ ದೇವಿಗೆ ಸಾಧ್ಯವಾಗುವುದಿಲ್ಲ. ಇದರಿಂದ ತಪ್ಪಿಸಿಕೊಳ್ಳಲು ಅವಳು ತಪಸ್ಸನ್ನು ಆಚರಿಸಲು ಮುಂದಾಗುತ್ತಾಳೆ. ತಪ್ಪಸ್ಸಿಗೆ ಹೋಗುವ ಮುನ್ನ ತನ್ನ ಮಕ್ಕಳ ಪಾಲನೆ ಮಾಡಲು ತನ್ನ ನೆರಳು ಛಾಯಾ ದೇವಿಯನ್ನು ಸೃಷ್ಟಿ ಮಾಡುತ್ತಾಳೆ.

ಸೂರ್ಯ ದೇವನಿಗೆ ಸಂಧ್ಯಾ ದೇವಿಯ ರೂಪದಲ್ಲಿ ಇರುವುದು ಛಾಯಾ ಎಂದು ತಿಳಿಯುವುದಿಲ್ಲ. ಹಾಗಾಗಿ ಆವರಿಬ್ಬರಿಗು ಕೂಡ ಮಗುವೊಂದು ಜನಿಸುತ್ತದೆ. ಅವರೇ ಭಗವಂತ ಶನಿದೇವ. ಛಾಯಾ ಮತ್ತು ಸೂರ್ಯ ದೇವರಿಗೆ ಮತ್ತೆ ಇನ್ನಿಬ್ಬರು ಮಕ್ಕಳು ಜನಿಸುತ್ತಾರೆ ಅವರೇ ಸವರ್ಣಮನು ಹಾಗೂ ತಾಪ್ತಿ. ಒಮ್ಮೆ ಛಾಯಾ ದೇವಿ ಸವರ್ಣಮನು ಹಾಗೂ ತಾಪ್ತಿಗೆ ಊಟ ಮಾಡಿಸುತ್ತಿರುತ್ತಾರೆ. ಪ್ರೀತಿಯಿಂದ ತನ್ನ ಇಬ್ಬರು ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿರುತ್ತಾಳೆ. ಇದನ್ನು ಕಂಡ ಶನಿ ದೇವರಿಗೆ ಕ್ರೋಧ ಉಂಟಾಗುತ್ತದೆ. ತನ್ನ ತಾಯಿ ತನಗೆ ಹೆಚ್ಚು ಪ್ರೀತಿ ತೋರುವುದಿಲ್ಲ ಆದರೆ ಇನ್ನಿಬ್ಬರು ಮಕ್ಕಳಿಗೆ ಹೆಚ್ಚು ಅಕ್ಕರೆ ತೋರಿಸುತ್ತಾಳೆ ಎಂದು ತಿಳಿದು ಕೋಪದಿಂದ ತಾಪ್ತಿಯನ್ನು ಕಾಲಿನಿಂದ ಒದೆಯುತ್ತಾರೆ. ಇದರಿಂದ ಛಾಯಾ ದೇವಿ ಶನಿ ದೇವರ ಮೇಲೆ ಕೋಪಗೊಳ್ಳುತಾಳೆ. ಕೋಪಗೊಂಡ ತನ್ನ ತಾಯಿಯನ್ನು ಶನಿ ದೇವರು ವಕ್ರ ದೃಷ್ಟಿಯಿಂದ ನೋಡುತ್ತಾನೆ. ತನಗೆ ವಕ್ರ ದೃಷ್ಟಿ ಬೀರಿದ ಶನಿ ದೇವರಿಗೆ ಛಾಯಾ ದೇವಿ ಶಾಪ ನೀಡುತ್ತಾಳೆ.

ನೀನು ಸೂರ್ಯ ದೇವನ ಮಗ ಎಂದು ಮೆರೆಯುತ್ತಿರುವೇ ಅಲ್ಲವೇ..ದೈವೀ ಶಕ್ತಿಗಳು ಇದೆಯಂದು ಅಹಂಕಾರ ಅಲ್ಲವೇ..ನೀನು ತಂದೆ ತಾಯಿಯರ ಪ್ರೀತಿಯಿಂದ ವಂಚಿತನಾಗು. ನಿನ್ನ ವಿಧ್ಯೆ ಶಕ್ತಿಗಳು ನ’ಶಿಸಿ ಹೋಗಲಿ. ಜ್ಞಾನಿ ಕರ್ಮ ಫಲದಾತ ಎಂದು ಮೆರೆಯುವ ನಿನಗೆ ಸರಿ ತಪ್ಪು ತಿಳಿಯದೆ ಜೀವನದ ಉದ್ದಕ್ಕೂ ತಪ್ಪು ದಾರಿಯಲ್ಲಿ ಸಾಗುವಂತೆ ಆಗಲಿ. ಜನರಿಂದ ಪೂಜಿಸಲ್ಪಡುವ ನೀನು ಅದೇ ಜನರಿಂದ ಅ’ವಮಾನಕ್ಕೆ ಒಳಗಾಗು ಎಂದು ಶಾಪ ನೀಡುತ್ತಾಳೆ. ನಂತರ ಅವಳು ಅಲ್ಲಿಂದ ಹೊರಟು ಹೋಗುತ್ತಾಳೆ. ಇತ್ತ ತನ್ನ ತಪ್ಪಿನ ಅರಿವಾದ ಶನಿ ದೇವರು ತನನ್ನು ಶಾಪದಿಂದ ವಿಮೋಚನೆ ಮಾಡುವಂತೆ ತನ್ನ ತಂದೆ ಸೂರ್ಯ ದೇವರ ಬಳಿ ಕೇಳಿಕೊಳ್ಳುತ್ತಾನೆ. ಆದರೆ ತಾಯಿಯ ಶಾಪದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಪುತ್ರ ಆದರೆ ಬೇರೆಯ ಅವತಾರದಲ್ಲಿ ಜನಿಸಿ ನಿನ್ನ ತಾಯಿಯು ಕೊಟ್ಟ ಶಾಪವನ್ನು ಅನುಭವಿಸು ಎಂದು ಸೂರ್ಯನು ಶನಿಗೆ ತಿಳಿಸುತ್ತಾನೆ.

ನಂತರ ಮಹಾವಿಷ್ಣುವು ತನ್ನ 8 ನೇ ಅವರತಾರದಲ್ಲಿ ದ್ವಾಪರ ಯುಗದಲ್ಲಿ ಶ್ರೀಕೃಷ್ಣನ ಅವತಾರದಲ್ಲಿ ಜನಿಸಿದಾಗ ಶನಿ ದೇವರು ಕುಂತಿ ಹಾಗೂ ಸೂರ್ಯನ ಪುತ್ರ ಕರ್ಣನಾಗಿ ಜನಿಸುತ್ತಾನೆ. ತನ್ನ ತಾಯಿ ಛಾಯಾ ದೇವಿಯ ಶಾಪದಂತೆ ತಂದೆ ತಾಯಿಯ ಪ್ರೀತಿಯಿಂದ ವಂಚಿತನಾಗುತ್ತಾನೆ. ತನ್ನ ಜೀವನದ ಕೊನೆಯ ಹಂತದ ವರೆಗೂ ತನ್ನ ತಂದೆ ತಾಯಿ ಯಾರೆಂದು ಅವನಿಗೆ ತಿಳಿಯುವುದಿಲ್ಲ. ತನ್ನ ಜನ್ಮ ರಹಸ್ಯ ತಿಳಿದಾಗ ನೋವಿನಲ್ಲಿ ಮುಳುಗಿ ಹೋಗುತ್ತಾನೆ. ಜೀವನದ ಉದ್ದಕ್ಕೂ ಸರಿ ತಪ್ಪು ತಿಳಿಯದೆ ಅಧರ್ಮಿ ದುರ್ಯೋಧನನ ಪರ ನಿಲ್ಲುತ್ತಾನೆ. ಕ್ಷತ್ರಿಯ ಕುಲದಲ್ಲಿ ಜನಿಸಿದರೂ ಜೀವನದ ಪ್ರತೀ ಹಂತದಲ್ಲೂ ಸಮಾಜದಿಂದ ಅ’ವಮಾನ ಅನುಭವಿಸುತ್ತಾನೆ. ಆದರೆ ತನ್ನ ತಂದೆ ಸೂರ್ಯ ದೇವನ ಕೃಪೆಯಿಂದ ಧಾನ ವೀರ ಮಹಾಶೂರನೆಂದು ಖ್ಯಾತಿಗಳಿಸಿ ಧರ್ಮ ಪಾಲನೆಂದು ಜಗದ್ವಿಖ್ಯಾತಿ ಗಳಿಸುತ್ತಾನೆ. ಯುದ್ಧದಲ್ಲಿ ವೀರ ಮ’ರಣ ಹೊಂದುತ್ತಾನೆ. ಹೀಗೆ ಶನಿ ದೇವರೇ ಕರ್ಣ ನ ಅವತಾರ ಎಂದು ಸ್ಕಂದ ಪುರಾಣದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.