ಪೂರ್ತಿ ವಿಮಾನವನ್ನೇ ಬುಕ್ ಮಾಡಿ ಆಕಾಶದಲ್ಲಿ ಮದ್ವೆಯಾದ ನವಜೋಡಿ ! ಫ್ಲೈಟ್ ಲ್ಯಾಂಡ್ ಆದಾಗ ಕಾದಿತ್ತು ಬಿಗ್ ಶಾಕ್..

Kannada News

ಸ್ನೇಹಿತರೇ, ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಕೊ’ರೋನಾ ಸೋಂಕಿನ ಎರಡನೇ ಅಲೇ ಸಾಕಷ್ಟು ಸಾವು ನೋವುಗಳಿಗೆ ಕಾರಣ ಆಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಹಾಗಾಗಿಯೇ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಗಳು ಲಾಕ್ ಡೌನ್ ಘೋಷಣೆ ಮಾಡಿವೆ. ಇನ್ನು ಮದುವೆ ಸಮಾರಂಭಗಳಿಗೆ ಕೇವಲ ೨೦ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅದರಲ್ಲೂ ಮದುವೆ ವೇಳೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದು ಖಡ್ಡಾಯವಾಗಿದೆ. ಯಾರಾದ್ರೂ ಈ ನಿಯಮಗಳನ್ನ ಮೀರಿದ್ರೆ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತದೆ. ಇನ್ನು ಇಂತಹ ನಿರ್ಬಂಧಗಳ ನಡುವೆಯೇ ಎಷ್ಟೋ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಇಲ್ಲೊಬ್ಬ ಅತೀ ಬುದ್ದಿವಂತ ಮದುವೆ ಮಾಡಿಕೊಳ್ಳುವುದಕೋಸ್ಕರ ಮಾಡಿರುವ ಕೆಲಸ ಏನ್ ಗೊತ್ತಾ ?

ಹೌದು, ಲಾಕ್ ಡೌನ್ ನಿಯಮಗಳನ್ನ ಮಾಡಿರುವುದು ಭೂಮಿಯ ಮೇಲೆ ತಾನೇ..ಆಕಾಶದಲ್ಲಿ ಮದ್ವೆಯಾದರೆ ಈ ನಿಯಮಗಳು ಅನ್ವಯವಾಗೋದಿಲ್ಲ. ನಮ್ಮಣ್ಣ ಯಾರು ತಾನೇ ಕೇಳ್ತಾರೆ ಹೇಳಿ ಎಂದು ಯೋಚನೆ ಮಾಡಿದ ಅತೀ ಬುದ್ದಿವಂತನೊಬ್ಬ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗೆ ಸೇರಿದ ಸಂಪೂರ್ಣ ವಿಮಾನವನ್ನೇ ಕೇವಲ ೨ ಗಂಟೆಗಳಿಗೋಸ್ಕರ ಮದುವೆಗಾಗಿ ಬುಕ್ ಮಾಡಿದ್ದಾನೆ. ಇನ್ನು ಈ ಹೊಸ ಪ್ಲಾನ್ ಮಾಡಿದ್ದು ಮಧುರೈನ ನವ ಜೋಡಿ. ಮದ್ವೆಗಾಗಿ ಮಧುರೈನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ಕಂಪನಿಯ ಫ್ಲೈಟ್ ನ್ನ ಬುಕ್ ಮಾಡಿದ್ದರು. ಇನ್ನು ನವ ವಧು ವರನ ಎರಡು ಕಡೆಯ ಕುಟುಂಬದವರು ಸೇರಿದಂತೆ ಆಪ್ತರು ಆ ವಿಮಾನವನ್ನ ಏರಿದ್ದರು.

ಇನ್ನು ಎಲ್ಲಾ ಬಂದು ಬಳಗದವರು ವಿಮಾನ ಹತ್ತಿದ್ದು, ಫ್ಲೈಟ್ ಟೇಕ್ ಆಫ್ ಆಗುತ್ತಿದ್ದಂತೆ ಮದುವೆಯ ಕೆಲಸಗಳು ಭರ್ಜರಿಯಾಗಿ ಶುರುವಾಗಿವೆ. ಅಚ್ಚರಿ, ಏನೆಂದರೆ ಅಲ್ಲಿಯವರಿಗೂ ಫ್ಲೈಟ್ ನ ಸ್ಟಾಫ್ ಗೆ ಇದು ಮದುವೆಗಾಗಿ ಪ್ಲಾನ್ ಅನ್ನೋದು ಗೊತ್ತೇ ಇರಲಿಲ್ಲ. ಮದುವೆಯೇನೋ ವಿಮಾನದಲ್ಲಿ ತುಂಬಾ ಭರ್ಜರಿಯಾಗಿಯೇ ನಡೆಯಿತು. ಆದರೆ ವಿಮಾನದಲ್ಲಿ ಮದುವೆಯಾಗಿದ್ದು ತಪ್ಪಾಗಿಲ್ಲ. ಆದರೆ ಅಲ್ಲಿ ಹೆಣ್ಣು ಗಂಡಿನಿಂದ ಹಿಡಿದು ಯಾರೊಬ್ಬರೂ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿದ್ದರು. ಇನ್ನು ಈ ವಿಮಾನ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು.

ಇನ್ನು ವಿಮಾನದಲ್ಲಿ ಭರ್ಜರಿಯಾಗಿ ಮದುವೆ ಮಾಡಿಕೊಂಡು ಬೆಂಗಳೂರಿನಲ್ಲಿ ನವ ಜೋಡಿಗಳಿಗೆ ಶಾಕ್ ಎದುರಾಗಿದೆ. ಹೌದು, ಕೊ’ರೋನಾ ನಿಯಮಗಳನ್ನ ಪಾಲಿಸದೇ ಇರುವ ಕಾರಣ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್ ವಿಮಾನದಲ್ಲಿ ನಡೆದ ಮದ್ವೆ ಬಗ್ಗೆ ತನಿಖೆ ಆರಂಭ ಮಾಡಿದೆ. ಇನ್ನು ಇದಕ್ಕೆ ಸಂಬಂಧಪಟ್ಟಂತೆ ಆ ವಿಮಾನದ ಸಿಬ್ಬಂದಿಗಳು ಸೇರಿದಂತೆ ಸಿಬ್ಬಂದಿಗಳ ವಿಚಾರಣೆಯನ್ನ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ವಿಮಾನದಲ್ಲಿ ಮದುವೆ ಮಾಡಿಕೊಂಡ ಬಳಿಕ ಹನಿಮೂನ್ ಗೆ ರೆಡಿಯಾಗಿದ್ದ ನವ ಜೋಡಿ ಹಾಗೂ ಅವರ ಕುಟುಂಬದವರಿಗೂ ಸಂಕಷ್ಟ ಎದುರಾಗಿದೆ.