ಪಾಪಿ ಅಧರ್ಮಿ ದುರ್ಯೋಧನ ಸ’ತ್ತ ಬಳಿಕ ಸ್ವರ್ಗ ಸೇರಿದ ! ಪಾಂಡವರು ನರಕ ಸೇರಿದ್ರು ! ಇದೇಕೆ ಹೀಗಾಯ್ತು ಗೊತ್ತಾ ?

Adhyatma Entertainment
Advertisements

ಪಾಂಡವರು ಕುರುಕ್ಷೇತ್ರ ಯುದ್ಧ ಗೆದ್ದ ಬಳಿಕ ಅಗ್ರಜ ಧರ್ಮರಾಯನ ನೇತೃತ್ವದಲ್ಲಿ ಸಾಮ್ರಾಜ್ಯ ಆಳಿ ಕೊನೆಗೆ ಸಹಜವಾಗಿ ಎಲ್ಲಾ ಮನುಜರಂತೆ ಮ’ರಣ ಹೊಂದಿದರು. ಸ’ತ್ತ ಧರ್ಮರಾಜ ಸ್ವರ್ಗಕ್ಕೆ ಹೋದ. ಆಲ್ಲಿ ತನ್ನ ಉಳಿದ ಸಹೋದರರು, ದ್ರೌಪದಿ ಮತ್ತು ತನ್ನ ಎಲ್ಲಾ ಕುಟುಂಬ ದವರು ಅಲ್ಲೇ ಇರುವರು ಎಂದು ನಿರೀಕ್ಷಿಸಿದ. ಆದರೆ ಅವನ ನಿರೀಕ್ಷೆ ಹುಸಿಯಾಗಿತ್ತು. ಅಲ್ಲಿ ಯಾರು ಇರಲಿಲ್ಲ, ಬದಲಿಗೆ ಅಲ್ಲಿ ವಿರಾಜಮಾನನಾಗಿ ಕುಳಿತಿದ್ದು ದುರ್ಯೋಧನ. ಯುಧಿಷ್ಠರನಿಗೆ ಒಂದು ಕಡೆ ಆಶ್ಚರ್ಯ ಮತ್ತೊಂದು ಕಡೆ ಕೋಪ. ಇದೇನು ಇಲ್ಲಿ ಧರ್ಮಿಗಳಾದ ನನ್ನ ಸೋಹೋದರು ಹಾಗೂ ಪತ್ನಿ ದ್ರೌಪದಿ ಇಲ್ಲ ಬದಲಿಗೆ ಈ ದುಷ್ಟ ದುರ್ಯೋಧನ ಇರುವುನಲ್ಲವೆಂದು.

[widget id=”custom_html-4″]

ಅವನು ಎಲ್ಲಾ ಕಡೆ ತನ್ನ ಅನುಜರನ್ನು ಹುಡುಕಿದ. ಕೊನೆಗೆ ಸ್ವರ್ಗಾಧಿಪತಿ ಇಂದ್ರ ದೇವನನ್ನು ತನ್ನ ಕುಟುಂಬದವರು ಎಲ್ಲಿರುವರು ಎಂದು ಕೇಳಿದ. ಆಗ ಇಂದ್ರದೇವ ಅವರು ನರಕದಲ್ಲಿ ಇರುವುದಾಗಿ ಹೇಳಿದ. ಆ ಕೂಡಲೇ ಧರ್ಮರಾಯ ಸ್ವರ್ಗ ತೊರೆದು ತನ್ನ ಕುಟುಂಬದವರು ಇರುವ ನರಕಕ್ಕೆ ಕರೆದೊಯ್ಯಲು ಇಂದ್ರನಲ್ಲಿ ಮನವಿ ಮಾಡಿದ. ನರಕಕ್ಕೆ ಬಂದ ಧರ್ಮರಾಯನಿಗೆ ತನ್ನ ಸಹೋದರ ಹಾಗೂ ಹೆಂಡತಿಯ ನೋ’ವನ್ನು ಕಂಡು ಮನಸ್ಸಿಗೆ ತುಂಬಾ ನೋವಾಯಿತು. ಅವನು ಇದೇನಿದು ಅನ್ಯಾಯ, ತನ್ನವರಿಗೆ ಏಕೆ ಇಂತ ಶಿ’ಕ್ಷೆ ಎಂದು ಕಣ್ಣೀರಿಟ್ಟ. ಅವನು ಸ್ವರ್ಗವನ್ನು ತ್ಯಜಿಸಿ ತಾನೂ ಕೂಡ ನರಕದಲ್ಲೇ ಇರುತ್ತೇನೆ ಎಂದು ಇಂದ್ರ ದೇವನಿಗೆ ಹೇಳಿದ.

[widget id=”custom_html-4″]

Advertisements

ಆಗ ಯಮಧರ್ಮ, ಇಂದ್ರದೇವ , ನಾರದ ಮೊದಲಾದ ದೇವತೆಗಳು ಪ್ರತ್ಯಕ್ಷರಾಗಿ ಧರ್ಮರಾಯನ ಈ ಒಳ್ಳೆಯ ತನವನ್ನು ಪ್ರಶಂಸಿಸಿದರು ಮತ್ತು ನಿನ್ನ ಆಗಮನದ ಬಳಿಕ ಪಾಂಡವರ ನರಕವಾಸ ಮುಗಿಯಿತು. ಇನ್ನು ಮುಂದೆ ಸ್ವರ್ಗದಲ್ಲಿ ವಾಸಿಸುವಂತೆ ನಗುತ್ತಾ ತಿಳಿಸಿದರು. ಇದೆಲ್ಲಾ ಏನೂ ಏಕೆ ಇದೆಲ್ಲಾ ನಡೆಯುತ್ತದೆ ಎಂದು ಪಾಂಡವರ ಗೊಂದಲಗಳಿಗೆ ಉತ್ತರಿಸಿದ ಇಂದ್ರ ಹಾಗೂ ನಾರದ ಮುನಿಗಳು ಹೇಳಿದರ., ಹೆಚ್ಚು ಪಾಪ ಮತ್ತು ಸ್ವಲ್ಪ ಪುಣ್ಯ ಮಾಡಿದವರನ್ನು ಮೊದಲು ಸ್ವರ್ಗಕ್ಕೆ ತಂದು ಇರಿಸಿ ಸುಖ ಭೋಗಗಳನ್ನು ಅನುಭವಿಸಿದ ಬಳಿಕ ನರಕಕ್ಕೆ ಕಳುಹಿಸಲಾಗುತ್ತದೆ. ಮತ್ತು ಹೆಚ್ಚು ಪುಣ್ಯ ಮತ್ತು ಸ್ವಲ್ಪ ಪಾಪ ಕಾರ್ಯ ಮಾಡಿದವರಿಗೆ ಮೊದಲು ನರಕದಲ್ಲಿ ಕಷ್ಟ ಕೊಟ್ಟು ನಂತರ ಸ್ವರ್ಗಕ್ಕೆ ಕಳುಹಿಸಲಾಗುತ್ತದೆ.

[widget id=”custom_html-4″]

ಪಾಂಡವರು ಧರ್ಮಿಗಳು ಆಗಿದ್ದರು ಆದರೆ ಯು’ದ್ಧದ ಸಮಯದಲ್ಲಿ ಧರ್ಮಕ್ಕಾಗಿಯೇ ಅಧರ್ಮವನ್ನು ಮಾಡಿದ್ದಾರೆ. ತಮ್ಮ ಗುರು ಹಿರಿಯರನ್ನು ಕೊಂ’ದಿದ್ದಾರೆ, ದುಶ್ಯಾಸನ ದುರ್ಯೋಧನ ಹಾಗೂ ಅವರ ಸಹೋದರರನ್ನು ಅ’ಮಾ’ನವೀಯವಾಗಿ ಸಂ’ಹಾ’ರ ಮಾಡಿದ್ದಾರೆ. ಸಾಧ್ವಿ ಗಾಂಧಾರಿಗೆ ಪುತ್ರು ಶೋಕವನ್ನು ನೀಡಿದ್ದಾರೆ. ತನ್ನ ಅನುಜ ಕರ್ಣನನ್ನೇ ಕೊಂ’ದಿದ್ದಾರೆ. ಹೀಗೆ ಅನೇಕ ಅಧರ್ಮ ಮಾಡಿದ್ದಾರೆ. ಹಾಗಾಗಿ ಅವರಿಗೆ ಕೆಲವೇ ಕೆಲ ಸಮಯ ನರಕ ದರ್ಶನ ಮಾಡಿಸಬೇಕಾಯಿತು. ಮತ್ತು ಧರ್ಮರಾಯ ಅಶ್ವತ್ಥಾಮ ಸ’ತ್ತಿದ್ದಾನೆ ಎಂದು ಹೇಳಿದ ಅರ್ಧ ಸತ್ಯದ ಪಾಪಕ್ಕಾಗಿ ತನ್ನ ಪರಿವಾರದವರು ನರಕದಲ್ಲಿ ಇದ್ದು ನ’ರ’ಳುವ ದೃಶ್ಯ ನೋಡುವ ಶಿ’ಕ್ಷೆ ಕೊಡಲಾಗಿತ್ತು. ಈಗ ಅದು ಸಹ ಮುಗಿದಿದೆ. ಈಗ ನೀವೆಲ್ಲರೂ ಸ್ವರ್ಗದಲ್ಲಿ ನಿಶ್ಚಿಂತೆ ಇಂದ ಸುಖವಾಗಿ ಇರಬಹುದು ಎಂದು ಹೇಳಿದರು.

ಇದೆಲ್ಲಾ ಸರಿ ಆದರೆ ಅಂತಹ ಆಧರ್ಮಿ ದುರ್ಯೋಧನನಿಗೆ ಏಕೆ ಸ್ವರ್ಗವಾಸ. ಅವನೊಂದಿಗೆ ನಾವು ಸ್ವರ್ಗದಲ್ಲಿ ಇರಲಾಗುವುದಿಲ್ಲ ಎಂದು ಪಾಂಡವರು ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ನಾರದ, ದುರ್ಯೋಧನ ಎಷ್ಟೇ ಅಧರ್ಮಿ ಆಗಿದ್ದರೂ ಅದಕ್ಕೆಲ್ಲ ಶಿ’ಕ್ಷೆ ಭೂಮಿಯಲ್ಲೇ ದೊರೆತಿದೆ. ಅವನು ಅವನ ಸಹೋದರರ ಸಾ’ವನ್ನು ಕಣ್ಣಾರೆ ಕಂಡಿದ್ದಾನೆ. ತನ್ನ ತಾಯಿಯ ರೋ’ದನೆ ನೋಡಿದ್ದಾನೆ. ಕಣ್ಣು ಮುಂದೆಯೇ ಪಾಂಡವರ ವಿಜಯವನ್ನು ನೋಡಿದ್ದಾನೆ. ಅಲ್ಲದೆ ಎಷ್ಟೋ ಸಮಯದವರೆಗೂ ತೊಡೆ ಮು’ರಿ’ದುಕೊಂಡು ನ’ರ’ಳಿದ್ದಾನೆ. ಅವನ ಅಹಂಕಾರಕ್ಕೆ ತಕ್ಕ ಅವಮಾನವನ್ನು, ಮಾಡಿದ ಪಾಪಕ್ಕೆ ಶಿ’ಕ್ಷೆಯನ್ನು ಸಾ’ಯುವ ಮುನ್ನವೇ ಅನುಭವಿಸಿದ್ದಾನೆ.

ಭೂಮಿಯಲ್ಲೇ ಶಿ’ಕ್ಷೆ ಅನುಭವಿಸಿದ ಮೇಲೆ ಸ’ತ್ತ ಬಳಿಕ ನರಕದಲ್ಲಿ ಅವರಿಗೆ ಮತ್ತೊಮ್ಮೆ ಶಿ’ಕ್ಷೆ ನೀಡಲಾಗುವುದಿಲ್ಲ. ಮತ್ತು ಅವನ ಸ್ವರ್ಗವಾಸಕ್ಕೆ ಕಾರಣ ಅವನು ಮಾಡಿದ ಎಷ್ಟೋ ಒಳ್ಳೆ ಕೆಲಸಗಳು. ಸುಯೋಧನ ಸ್ನೇಹಿತರಿಗೆ ಒಳ್ಳೆ ಮಿತ್ರನಾಗಿದ್ದ, ತಂದೆ ತಾಯಿಗೆ ಒಳ್ಳೆ ಪುತ್ರನಾಗಿದ್ದ. ತಂಗಿಗೆ ಒಳ್ಳೆ ಅಣ್ಣ, ಪತ್ನಿಗೆ ಉತ್ತಮ ಪತಿಯೂ ಆಗಿದ್ದ. ಅವನ ರಾಜ್ಯದ ಜನರನ್ನು ಅವನು ರಾಜನಾಗಿದ್ದಾಗ ಚೆನ್ನಾಗಿ ನೋಡಿಕೊಂಡಿದ್ದ. ಶೋಷಿತರಿಗೆ ನೆಲೆ ಕಲ್ಪಿಸಿದ್ದ. ಹೀಗೆ ಅವನ ಪುಣ್ಯದ ಕೆಲಸಗಳು ಹಲವಿವೆ ಎಂದರು. ಮತ್ತು ಅಶರೀರರಾಗಿ ಇಲ್ಲಿಗೆ ಬಂದಿರುವ ನೀವೆಲ್ಲರೂ ಭೂಮಿಯ ಮೇಲಿನ ಎಲ್ಲಾ ರಾಗ ದ್ವೇ’ಷಗಳನ್ನು ಮರೆತು ಸ್ವರ್ಗದಲ್ಲಿ ಸಂತೋಷದಿಂದ ಬಾಳಬೇಕೆಂದು ಹೇಳಿದರು.