ಮಾಳವಿಕಾ ಅವಿನಾಶ್ ಅವರ ಮಗನ ನೋವಿನ ಕತೆ ! ಏನಾಗಿತ್ತು ಈಗ ಹೇಗಿದ್ದಾನೆ ನೋಡಿ..

Cinema

ಸ್ನೇಹಿತರೇ, ದಶಕಗಳಿಂದ ಕನ್ನಡ ಸಿನಿಮಾರಂಗದಲ್ಲಿ ಖಳ ನಟನಾಗಿ, ಪೋಷಕ ನಟನಾಗಿ ಅಭಿನಯಿಸುತ್ತಿದ್ದಾರೆ ನಟ ಅವಿನಾಶ್. ಇನ್ನು ಇವರ ಪತ್ನಿ ಮಾಳವಿಕಾ ಅವಿನಾಶ್ ಅವರು ಕೂಡ ನಟಿ ಹಾಗೂ ರಾಜಕಾರಿಣಿಯಾಗಿದ್ದು ನೇರ ನುಡಿಗೆ ಹೆಸರಾದವರು. ಸಿನಿಮಾ ಸೇರಿದಂತೆ ಧಾರಾವಾಹಿಗಳಲ್ಲೂ ಕೂಡ ನಟಿಸಿ ಸೈ ಎನಿಸಿಕೊಂಡವರು. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ ಬದುಕು ಬಂಡಿ ಕಾರ್ಯಕ್ರಮದ ನಿರೂಪಕಿಯಾಗಿ ಹೆಸರು ಮಾಡಿದವರು. ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದವರು. ಇನ್ನು ಇವೆಲ್ಲ ಏನೇ ಇದ್ದರೂ ಆ ಗಟ್ಟಿ ವ್ಯಕ್ತಿತ್ವದ ಹಿಂದೆ ಮೃದು ತಾಯಿಯ ಹೃದಯವಿದೆ, ಹೇಳಿಕೊಳ್ಳಲಾಗದ ಸಂಕಟ ನೋವಿದೆ.

ಮಾಳವಿಕಾ ಅವಿನಾಶ್ ಅವರು ಕಿರುತೆರೆಯ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟದ್ದು ಟಿಎನ್. ಸೀತಾರಾಮ್ ಅವರ ನಿರ್ದೇಶನದಲ್ಲಿ ಮೂಡಿಬಂದ ಮಾಯಾಮೃಗ ಧಾರಾವಾಹಿಯಿಂದ ತುಂಬಾ ಹೆಸರು ಮಾಡುತ್ತಾರೆ. ಬಳಿಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಾ ರಾಜಕೀಯ ರಂಗದಲ್ಲೂ ಕೂಡ ತಮ್ಮನ್ನ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇನ್ನು ನಟ ಅವಿನಾಶ್ ಅವರನ್ನ ಪ್ರೀತಿಸಿ ಮದ್ವೆಯಾದ ಮಾಳವಿಕಾ ದಂಪತಿಗೆ ಒಂದು ಮುದ್ದಾದ ಮಗು ಕೂಡ ಜನಿಸುತ್ತದೆ. ಆದರೆ ಇತರೆ ಸಾಮಾನ್ಯ ಮಕ್ಕಳಂತೆ ಇರೋದಿಲ್ಲ ಆ ಮಗು. ಹೌದು, ಮಗು ಹುಟ್ಟುತ್ತಲೇ ಬುದ್ದಿಮಾಂದ್ಯವಾಗಿರುತ್ತೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮಗೆ ದೇವರು ವಿಶೇಷ ಮಗುವೊಂದನ್ನ ಕೊಟ್ಟಿದ್ದಾನೆ ಎಂದು ಭಾವಿಸಿ ತುಂಬಾ ಪ್ರೀತಿಯಿಂದ ತಮ್ಮ ಮಗನನ್ನ ಸಾಕುತ್ತಾರೆ.

ಇನ್ನು ಸಂದರ್ಶನವೊಂದರಲ್ಲಿ ತಮ್ಮ ಮಗುವಿನ ಬಗ್ಗೆ ಮಾತನಾಡಿರುವ ಅವಿನಾಶ್ ಮಾಳವಿಕಾ ದಂಪತಿ ತಾವು ಬದುಕಿರುವವರೆಗೂ ನಮ್ಮ ಮಗುವನ್ನ ಚೆನ್ನಾಗಿ ನೋಡಿಕೊಳ್ಳುತ್ತೇವೆ ತಮ್ಮಲ್ಲಿರುವ ನೋವನ್ನ ತೋಡಿಕೊಂಡಿದ್ದಾರೆ. ಅವಿನಾಶ್ ಮಾಳವಿಕಾ ದಂಪತಿಯದ್ದು ಸುಖಿ ಸಂಸಾರದ ಮುದ್ದಾದ ಕುಟುಂಬ. ಇನ್ನು ಹಣದ ಜೊತೆಗೆ ಗಂಡ ಹೆಂಡತಿಯ ಅನ್ಯೋನ್ಯತೆ ಕೂಡ ಇದೆ. ಅಗಾಧವಾದ ಪ್ರೀತಿಯಿದೆ. ಆದರೆ ತಮ್ಮ ಪ್ರೀತಿಗೆ ಪ್ರತೀಕವಾಗಿ ಹುಟ್ಟಿರುವ ಮಗ ಮಾತ್ರ ಸಾಮಾನ್ಯರಂತೆ ಇಲ್ಲ. ಇನ್ನು ಇಂತಹ ದುಃಖ ಅನುಭವಿಸಿದವರಿಗೆ ಗೊತ್ತು. ಸ್ನೇಹಿತರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನೆಂದು ತಿಳಿಸಿ..