18 ಸಾವಿರಕ್ಕೆ ಮುಂಬೈಯಿಂದ ದುಬೈಗೆ ಫ್ಲೈಟ್ ನಲ್ಲಿ ಒಬ್ಬನೇ ಪ್ರಯಾಣ ಮಾಡಿದ ಭೂಪ ! ಆದ ನಷ್ಟ ಕೇಳಿದ್ರೆ ಶಾಕ್ ಆಗ್ತೀರಾ..

Kannada News
Advertisements

ಸ್ನೇಹಿತರೇ, ಪ್ರತಿಯೊಬ್ಬರಿಗೂ ಜೀವನದಲ್ಲಿ ತಾನು ಒಂದು ಬಾರಿಯಾದರೂ ವಿಮಾನದ ಮೂಲಕ ಬಾನಿನಲ್ಲಿ ಹಾರಬೇಕು ಎಂಬ ಆಸೆ ಇದ್ದೆ ಇರುತ್ತದೆ. ಇನ್ನು ಮಧ್ಯಮವರ್ಗ ಹಾಗೂ ಬಡವರಿಗೆ ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣ ಮಾಡಬೇಕು ಎಂಬುದು ಒಂದು ಕನಸಾಗಿರುತ್ತದೆ. ಇನ್ನು ವಿಮಾನ ಪ್ರಯಾಣಿಕರಿಂದ ತುಂಬಿದ್ದರೂ ಸಹ ಫ್ಲೈಟ್ ಆಗಸಕ್ಕೆ ಹಾರಿದಾಗ ಜೀವ ಬಾಯಿಗೆ ಬಂದ ಹಾಗೆ ಹಾಗೋದು ಸಹಜ. ಅಂತದರಲ್ಲಿ ಇಡೀ ವಿಮಾನದಲ್ಲಿ ಒಬ್ಬನೇ ಪ್ರಯಾಣ ಮಾಡುತ್ತಾನೆ ಎಂದರೆ..ಎಷ್ಟೇ ಹಣ ಇದ್ದರೂ ಈತರಹದ ಅನುಭವ ಸಿಗುವುದು ತುಂಬಾ ಕಷ್ಟವೇ ಸರಿ. ಆದರೆ ಇಲ್ಲೊಬ್ಬ ಭೂಪ ತಾನೊಬ್ಬನೇ ಮುಂಬೈನಿಂದ ದುಬೈ ದೇಶಕ್ಕೆ ಬೋಯಿಂಗ್ ಫ್ಲೈಟ್ ನಲ್ಲಿ ಪ್ರಯಾಣ ಮಾಡಿದ್ದಾನೆ. ಅದು 18 ಸಾವಿರಕ್ಕೆ..

[widget id=”custom_html-4″]

Advertisements

ಹೌದು, ಮುಂಬೈನಿಂದ ದುಬೈಗೆ ಎರಡೂವರೆ ಗಂಟೆಗಳ ಕಾಲ ಪ್ರಯಾಣ ಇದ್ದು, ಹೀಗೆ ಪೂರ್ತಿ ವಿಮಾನದಲ್ಲಿ ಒಬ್ಬನೇ ಪ್ರಯಾಣ ಮಾಡಿದ ವ್ಯಕ್ತಿಯ ಹೆಸರು ಭಾವೇಶ್ ರಾವೇರಿ ಎಂದು. ಇನ್ನು ಇವರು ದುಬೈಗೆ ಪ್ರಯಾಣ ಮಾಡಿದ್ದು ಮೇ ೧೯ರಂದು. ಬ್ಯುಸಿನೆಸ್ ಮ್ಯಾನ್ ಆಗಿರುವ ಈತ ದುಬೈನಲ್ಲಿ ತನ್ನ ಕಂಪನಿಯ ಬ್ರಾಂಚ್ ಹೊಂದಿದ್ದು ಹಾಗಾಗ ಮುಂಬೈನಿಂದ ದುಬೈಗೆ ಪ್ರಯಾಣ ಮಾಡುತ್ತಿರುತ್ತಾನೆ. ಆದರೆ ಭಾರತದಲ್ಲಿ ಕೊ’ರೋನಾ ಎರಡನೇ ಅಲೆ ಹೆಚ್ಚಾಗಿರುವ ಕಾರಣ ಭಾರತದಿಂದ ದುಬೈ ಪ್ರವೇಶ ಮಾಡುವ ವಿಮಾನಗಳಿಗೆ ನಿ’ಷೇಧ ಹೇರಲಾಗಿದೆ. ಆದರೆ ಭಾವೇಶ್ ರಾವೇರಿ ದುಬೈ ದೇಶದ ಗೋಲ್ಡನ್ ವೀಸಾ ಹೊಂದಿರುವ ಕಾರಣ ಗೋಲ್ಡನ್ ವೀಸಾ ಹೊಂದಿರುವವರು ಸೇರಿದಂತೆ ಸರ್ಕಾರದ ವ್ಯಕ್ತಿಗಳು ಹಾಗೂ ಗಣ್ಯರು ಪ್ರಯಾಣ ಮಾಡಬಹುದಾಗಿದೆ.

[widget id=”custom_html-4″]

ಇನ್ನು ಭಾವೇಶ್ ರಾವೇರಿ ಮುಂಬೈನಿಂದ ದುಬೈಗೆ ಪ್ರಯಾಣ ಮಾಡಿರುವ ಬೋಯಿಂಗ್ 777 ವಿಮಾನವು ೩೬೦ಸೀಟುಗಳನ್ನ ಹೊಂದಿದ್ದು, ಭಾವೇಶ್ ವಿಮಾನ ಪ್ರವೇಶ ಮಾಡಿದಾಗ ವಿಮಾನದ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಮಾಡಿದ್ದಾರೆ. ಇನ್ನು ತಾನೊಬ್ಬನೇ ದುಬೈಗೆ ಪ್ರಯಾಣ ಮಾಡಿರುವ ಭಾವೇಶ್ ರಾವೇರಿ ಟಿಕೆಟ್ ಗಾಗಿ ಖರ್ಚು ಮಾಡಿದ್ದು 18 ಸಾವಿರ ರೂಪಾಯಿಗಳು. ಆದ್ರೆ ಮುಂಬೈನಿಂದ ದುಬೈಗೆ ಹೊರಟ ವಿಮಾನಕ್ಕೆ ತಗುಲಿದ ವೆಚ್ಚ ಮಾತ್ರ ವಿಮಾನದ ಇಂಧನ ಸೇರಿ ಬರೋಬ್ಬರಿ ಎಂಟು ಲಕ್ಷ ಎಂದು ಹೇಳಲಾಗಿದೆ. ಇನ್ನು ತನ್ನ ಅಪರೂಪದ ಅನುಭವದ ಬಗ್ಗೆ ಮಾತನಾಡಿರೋ ಭಾವೇಶ್ ರಾವೇರಿ ಅವರು ನಾನು ೨೪೦ಕ್ಕೂ ಹೆಚ್ಚು ಬಾರಿ ದುಬೈಗೆ ಪ್ರಯಾಣ ಮಾಡಿದ್ದರೂ, ಒಬ್ಬೇ ಒಬ್ಬ ಇಡೀ ವಿಮಾನದಲ್ಲಿ ಪ್ರಯಾಣ ಮಾಡುವಂತಹ ಅದ್ಭುತ ಕ್ಷಣ ಎಷ್ಟೇ ಹಣ ಇದ್ದರೂ ಸಿಗೋದಿಲ್ಲ. ಇದು ನನ್ನ ಜೀವನದಲ್ಲಿ ಸದಾ ಉಳಿಯುವ ಅತ್ಯಂತ ಅಪರೂಪದ ಕ್ಷಣ ಎಂದು ಭಾವೇಶ್ ರಾವೇರಿ ಹೇಳಿದ್ದಾರೆ.