ಅಮೆಜಾನ್ ನಲ್ಲಿ ಮೌತ್ ವಾಷ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂದಿದ್ದೆ ಬೇರೆ ! ಇದಪ್ಪಾ ಅದೃಷ್ಟ ಅಂದ್ರೆ..

Kannada News
Advertisements

ಸ್ನೇಹಿತರೇ, ಇಂದಿನ ಮುಂದುವರಿದ ತಾಂತ್ರಿಕ ಯುಗದಲ್ಲಿ ನೀವು ಕೂತಿದ್ದಲ್ಲಿಗೆ ಏನನ್ನಾದರೂ ತರಿಸಿಕೊಳ್ಳಬಹುದಾಗಿದೆ. ಅದಕ್ಕಾಗಿಯೇ ಅಮೆಜಾನ್, ಫ್ಲಿಪ್ ಕಾರ್ಟ್ ಸರಿದಂತೆ ಹಲವಾರು ಆನ್ಲೈನ್ ಶಾಪಿಂಗ್ ಅಪ್ಲಿಕೇಶನ್ ಗಳು ಇವೆ. ಹಣ ಒಂದಿದ್ದರೆ ಎನ್ನನಾದರೂ ಕೂತಿದ್ದಲ್ಲಿಗೆ ತರಿಸಿಕೊಳ್ಳಬಹುದು. ಇನ್ನು ಎಷ್ಟೋ ಬಾರಿ ಈ ಆನ್ಲೈನ್ ಶಾಪಿಂಗ್ ನಿಂದ ಅವಾಂತರಗಳು ನಡೆದ ಎಷ್ಟೋ ಘಟನೆಗಳು ನಡೆದಿವೆ. ಇನ್ನು ಗ್ರಾಹಕನ ಅದೃಷ್ಟ ಚೆನ್ನಾಗಿದ್ದರೆ ಆರ್ಡರ್ ಮಾಡಿದ ವಸ್ತುವಿಗಿಂತ ಹೆಚ್ಚು ಬೆಲೆ ಬಾಳುವ ವಸ್ತುಗಳು ಡೆಲಿವರಿ ಆಗಿರೋ ಪ್ರಸಂಗಗಳು ನಡೆದಿವೆ.

[widget id=”custom_html-4″]

Advertisements

ಈ ರೀತಿ ಆದಾಗ ಕೆಲ ಗ್ರಾಹಕರು ಅಂತಹ ವಸ್ತುಗಳನ್ನ ಹಿಂದಿರುಗಿಸಲು ಪ್ರಯತ್ನ ಪಟ್ಟರು ಕೂಡ ಅದು ಸಾಧ್ಯವಾಗೋದಿಲ್ಲ. ಹೌದು, ದೆಹಲಿ ನಿವಾಸಿಯಾಗಿರುವ ಲೋಕೇಶ್ ಎನ್ನೋ ವ್ಯಕ್ತಿ ಅಮೆಜಾನ್ ನಲ್ಲಿ ಕೋಲ್ಗೆಟ್ ಮೌತ್ ವಾಷ್ ನ್ನ ಆರ್ಡರ್ ಮಾಡುತ್ತಾನೆ. ಆದರೆ ಆತನಿಗೆ ಮೌತ್ ವಾಷ್ ಬದಲಾಗಿ ಬಂದಿದ್ದು ಮಾತ್ರ ಸ್ಮಾರ್ಟ್ ಮೊಬೈಲ್ ಫೋನ್. ಹೌದು, ಈತನಿಗೆ ಮೌತ್ ವಾಷ್ ಬದ್ಲಾಗಿ ರೆಡ್ ಮೀ ನೋಟ್ 10 ಸ್ಮಾರ್ಟ್ ಮೊಬೈಲ್ ಫೋನ್ ಬಂದಿದೆ. ಆದರೆ ಮೊಬೈಲ್ ಫೋನ್ ನ್ನ ಅಮೆಜಾನ್ ಗೆ ಮರಳಿಸಲು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗುತ್ತಿಲ್ಲ ಎಂದು ಗ್ರಾಹಕ ಲೋಕೇಶ್ ಹೇಳಿದ್ದಾರೆ.

[widget id=”custom_html-4″]

ಮೌತ್ ವಾಷ್ ಬದ್ಲಾಗಿ ತಪ್ಪಾಗಿ ಬಂದಿರೋ ರೆಡ್ ಮೀ ನೋಟ್ 10 ಮೊಬೈಲ್ ಫೋನ್ ನ್ನ ಹಿಂದಿರುಗಿಸಲು ತುಂಬಾ ಪ್ರಯತ್ನಪಟ್ಟೆ. ಆದರೆ ಅಮೆಜಾನ್ ಕಂಪನಿಯ ನಿಯಮಗಳಿಂದ ಮೊಬೈಲ್ ಫೋನ್ ನ್ನ ವಾಪಾಸ್ ಮಾಡಲು ಸಾಧ್ಯವಾಗುತ್ತಿಲ್ಲ. ಬೇರೆ ದಾರಿಯಲ್ಲದೆ ರೆಡ್ ಮೀ ಮೊಬೈಲ್ ಫೋನ್ ಇಟ್ಟುಕೊಂಡಿದ್ದೇನೆ ಎಂದು ಅಶೋಕ್ ಹೇಳಿದ್ದಾರೆ. ತಾವು ಆರ್ಡರ್ ಮಾಡಿದ ವಸ್ತುವಿನ ಬದ್ಲಾಗಿ ಅದಕ್ಕಿಂತ ಹೆಚ್ಚು ಬೆಲೆ ಬಾಳುವ ವಸ್ತು ಬಂದರೆ ಅದನ್ನ ವಾಪಾಸ್ ಮಾಡುವವರು ತುಂಬಾ ಕಡಿಮೆ. ಅಂತಹದರಲ್ಲಿ ಮೊಬೈಲ್ ಫೋನ್ ನ್ನ ವಾಪಾಸ್ ಮಾಡಲು ಪ್ರಯತ್ನಪಟ್ಟ ಅಶೋಕ್ ಅವರ ನಿಜಾಯಿತಿಗೆ ಮೆಚ್ಚುಗೆಗಳು ವ್ಯಕ್ತವಾಗಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..