ಸಿಗರೇಟಿಗೋಸ್ಕರ ನಡೆದುಕೊಂಡೇ ಮತ್ತೊಂದು ದೇಶಕ್ಕೆ ಹೋದ ಭೂಪ..

News
Advertisements

ಕೊರೋನಾ ಮಹಾಮಾರಿಯಿಂದ ಇಡೀ ವಿಶ್ವವವೇ ತಲ್ಲಣಗೊಂಡಿದ್ದು ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇನ್ನು ಜನರು ಕೂಡ ಆಚೆ ಬರದೇ ಮನೆಯಲ್ಲೇ ಉಳಿಯುವಂತಾಗಿದೆ. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮನೆಯಿಂದ ಆಚೆ ಬರಬೇಕಾಗಿದೆ.

Advertisements

ಇನ್ನು ಜನರ ಆರೋಗ್ಯದ ದೃಷ್ಟಿಯಿಂದಾಗಿ ಹಲವಾರು ದೇಶಗಳು ಕಠಿಣ ಕ್ರಮಗಳನ್ನ ಕೈಗೊಂಡಿವೆ. ಇನ್ನು ಇಂತಹ ಪರಿಷ್ಟಿತಿಯಲ್ಲೂ ಫ್ರಾನ್ಸ್ ದೇಶದಲ್ಲಿ ನಡೆದ ಘಟನೆಯೊಂದು ಎಲ್ಲರನ್ನ ಅಚ್ಚರಿಗೊಳ್ಳುವಂತೆ ಮಾಡಿದೆ. ಅದು ಒಂದು ಸಿಗರೇಟ್ ಗೋಸ್ಕರ ಫ್ರಾನ್ಸ್ ನ ಈ ಭೂಪ ಮಾಡಿದ ಕೆಲಸ ಕೇಳಿದ್ರೆ ನೀವು ಶಾಕ್ ಆಗ್ದೆ ಇರೋಲ್ಲ.

ಹೌದು, ಕೇವಲ ಸಿಗರೇಟಿಗೋಸ್ಕರ ತನ್ನ ದೇಶದಿಂದ ಬೇರೊಂದು ದೇಶಕ್ಕೆ ಅದು ನಡೆದುಕೊಂಡು ಹೋಗಿದ್ದಾನೆ. ಇನ್ನು ಫ್ರಾನ್ಸ್ ನಲ್ಲಿಯೂ ಕೂಡ ಕೊರೋನಾ ಭೀಕರತೆ ಹೆಚ್ಚಾಗಿದ್ದು ಇಡೀ ದೇಶದಾದ್ಯಂತ ಲಾಕ್ ಡೌನ್ ಮಾಡಿ ಜನ ಮನೆಯಿಂದ ಹೊರಗೆ ಬರದಂತೆ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಆದರೆ ಇದೇ ದೇಶದ ವ್ಯಕ್ತಿಯೊಬ್ಬ ಸಿಗರೇಟ್ ಗಾಗಿ ತನ್ನ ದೇಶದಿಂದ ಸ್ಪೇನ್ ದೇಶಕ್ಕೆ ನಡೆದುಕೊಂಡು ಹೋಗಿದ್ದಾನೆ. ಇನ್ನು ಈ ಭೂಪ ಗುಡ್ಡಗಾಡು ಪ್ರದೇಶಗಳ ಮೂಲಕ ಸ್ಪೈನ್ ಒಂದು ಹಳ್ಳಿಗೆ ಹೋಗಿದ್ದಾನೆ. ಇನ್ನು ಕಡಿಮೆ ಬೆಳೆಗೆ ಸಿಗರೇಟ್ ಸಿಗುತ್ತದೆಂದು ಸ್ಪೇನ್ ದೇಶದ ಆ ಹಳ್ಳಿಗೆ ಹೋಗಿದ್ದು ಅಲ್ಲಿ ಆತನು ಅಲ್ಲಿನ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ. ಇನ್ನು ಸ್ಪೇನ್ ಗೆ ಹೋಗುವ ಗುಡ್ಡಗಾಡು ಪ್ರದೇಶದ ದಾರಿಯಲ್ಲಿ ಶೀತದಿಂದ ಕೂಡಿದ್ದು ಆಯಾಸಗೊಂಡಿದ್ದ ಆತ ಮತ್ತೆ ವಿಶ್ರಾಂತಿ ತೆಗೆದುಕೊಂಡು ಪ್ರಯಾಣ ಮುಂದುವರಿಸಿದ್ದಾನೆ ಎಂದು ಹೇಳಲಾಗಿದೆ.

ಇನ್ನು ಗುಡ್ಡಗಾಡುಗಳ ನಡುವೆ ನಡೆದುಕೊಂಡು ಹೋಗುವ ವೇಳೆ ಅಲ್ಲಿ ಸಿಕ್ಕಿಹಾಕೊಕೊಂಡಿದ್ದ ಆತ ಅಲ್ಲಿನ ಭದ್ರತಾ ಸಿಬ್ಬಂದಿಗಳ ಕಣ್ಣಿಗೆ ಬಿದ್ದಿದ್ದಾನೆ. ಇನ್ನು ಸಿಬ್ಬಂದಿ ಅಲ್ಲಿಗೆ ತಲುಪುವ ವೇಳೆಗೆ ಎಚ್ಚರತಪ್ಪಿ ಬಿದ್ದಿದ್ದಾನೆ. ಇನ್ನು ಆತನನ್ನ ರಕ್ಷಣೆ ಮಾಡಿದ ಸ್ಪೈನ್ ಭದ್ರತಾ ಸಿಬ್ಬಂದಿ ಆಕ್ರಮ ಗಡಿ ದಾಟಿದ ಹಾಗೂ ಲಾಕ್ ಡೌನ್ ಉಲ್ಲಂಘನೆ ಮಾಡಿದಕ್ಕೆ ದಂಡ ವಿಧಿಸಿ ವಸೂಲಿ ಮಾಡಿ, ಬಳಿಕ ಆತನ ಬಗ್ಗೆ ಮಾಹಿತಿ ಪಡೆದು ಮತ್ತೆ ಮರಳಿ ಫ್ರಾನ್ಸ್ ದೇಶಕ್ಕೆ ಕಳುಹಿಸಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಿಗರೇಟ್ ಗೋಸ್ಕರ ಈ ಭೂಪಟ ಮಡಿದ ಕೆಲಸವನ್ನ ಕೇಳಿ ಎಲ್ಲರೂ ಅಚ್ಚರಿಗೀಡಾಗಿದ್ದಾರೆ.