ತಾಳಿ ಕಟ್ಟಿಸಿಕೊಂಡ ಬಳಿಕ ಅತ್ತೆ ಮನೆಗೆ ಹೋಗಬೇಕಾಗಿದ್ದ ನವವಧು ಹೋಗಿದ್ದೆಲ್ಲಿಗೆ ಗೊತ್ತಾ.!?

Advertisements

ನಮಸ್ತೆ ಸ್ನೇಹಿತರೆ, ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಾದ ದಿನದಂದೇ ಪರೀಕ್ಷೆ ಬಂದುಬಿಟ್ಟರೆ ಯಾವುದನ್ನು ಆಯ್ಕೆ ಮಾಡುವುದು. ಇಲ್ಲಿ ಜೀವನಕ್ಕೆ ಬುನಾದಿ ಹಾಕುವ ಪರೀಕ್ಷೆ ಎಷ್ಟು ಮುಖ್ಯವೋ, ಜೀವನದಲ್ಲಿ ಒಮ್ಮೆ ಮಾತ್ರ ಬರುವ ಸಂಭ್ರಮ ಮದುವೆ ಕೂಡ ಅಷ್ಟೇ ಮುಖ್ಯ. ಆದರೆ ಎರಡೂ ಒಂದೇ ದಿವಸ ಬಂದುಬಿಟ್ಟರೆ, ಯಾವುದನ್ನು ಆಯ್ಕೆ ಮಾಡಬೇಕು ಎಂಬುದರ ತಲೆಕೆಡಿಸಿಕೊಳ್ಳುತ್ತಾರೆ. ಕೆಲವರು ಮದುವೆ ಮತ್ತು ಪರೀಕ್ಷೆ ಈ ಎರಡರಲ್ಲಿ ಕೇವಲ ಒಂದನ್ನು ಮಾತ್ರ ಆಯ್ಕೆ ಮಾಡಿಕೊಂಡರೆ, ಮತ್ತೆ ಕೆಲವರು ಮದುವೆ ಮಾಡಿಕೊಂಡ ದಿನವೇ ಪರೀಕ್ಷಾ ಕೊಠಡಿಗೆ ಹೋಗಿ ತನ್ನ ಜೀವನ ನಿರ್ಧರಿಸುವ ಪರೀಕ್ಷೆ ಬರೆದಿರೋ ಹಲವಾರು ನಿದರ್ಶನಗಳು ನಮ್ಮ . ಈಗ ಇದೇ ರೀತಿಯ ಪ್ರಸಂಗವೊಂದು ಮಂಡ್ಯ ಜಿಲ್ಲೆಯ ಪಾಂಡವಪುರ ಎಂಬಲ್ಲಿ ನಡೆದಿದೆ.

Advertisements

ಹೌದು, ಮಂಡ್ಯ ಜಿಲ್ಲೆಗೆ ಸೇರಿದ ಲಿಂಗಪುರ ಎಂಬ ಗ್ರಾಮದ ಯುವತಿ ಅಶ್ವರ್ಯ ಎಂಬುವರು, ಪಾಂಡವಪುರ ಪಟ್ಟಣದಲ್ಲಿರುವ STG ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದರು. ಇವರಿಗೆ, ಮೈಸೂರು ತಾಲೂಕಿಗೆ ಸೇರಿದ ಲಕ್ಷ್ಮಿಪುರ ಎಂಬ ಗ್ರಾಮದ ಯಶವಂತ್ ಎಂಬುವರ ಜೊತೆ ಮದುವೆ ನಿಶ್ಚಯವಾಗಿದ್ದು, ಇನ್ನು ಮದುವೆ ದಿನವೇ ಪರೀಕ್ಷೆ ಕೂಡ ಇತ್ತು. ಇನ್ನು ಪಾಂಡವಪುರ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಕಳೆದ ಬುಧವಾರದಂದು ಇವರ ಮದುವೆ ನಿಚ್ಚಯವಾಗಿತ್ತು. ಆದರೆ ಇದೇ ದಿನದಂದು ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿರುವ ಐಶ್ವರ್ಯ ಅವರಿಗೆ ಪರೀಕ್ಷೆ ಕೂಡ ಇರುವ ಕಾರಣ, ವಿದ್ಯಾರ್ಥಿನಿ ಮಹೂರ್ತ ಮುಗಿದ ಬಳಿಕ ನೇರವಾಗಿ ಪರೀಕ್ಷಾ ಕೊಠಡಿಗೆ ಹೋಗಿ ಪರೀಕ್ಷೆ ಬರೆಯುವುದು ಅನಿವಾರ್ಯವಾಗಿತ್ತು. ಇನ್ನು ಐಶ್ವರ್ಯ ಅವಿನಾಶ್ ಅವರ ಮದುವೆಯ ಮಹೂರ್ತ ಬೆಳಿಗ್ಗೆ 9.30 ರಿಂದ 10.30 ಗಂಟೆಗೆ ನಿಚ್ಚಯವಾಗಿತ್ತು.

ಹಾಗಾಗಿ, ಮಾಂಗಲ್ಯಧಾರಣೆ ಆದ ಬಳಿಕ ಆರತಕ್ಷತೆ ಮುಗಿಸಿ ತಾನು ಮುಂದೆ ಜೀವನ ಮಾಡಬೇಕಾದ ಹೊಸ ಮನೆಗೆ ಕಾಲ್ ಇಡಬೇಕಾಗಿತ್ತು. ಆದರೆ ಅತ್ತೆ ಮನೆಗೆ ಹೋಗಬೇಕಾಗಿದ್ದ ಐಶ್ವರ್ಯ, ನೇರವಾಗಿ ಹೋಗಿದ್ದು ಮಾತ್ರ ಎಕ್ಸಾಮ್ ಹಾಲ್ ಗೆ. ಮದುವೆ ಮುಗಿದ ಬಳಿಕ ಐಶ್ವರ್ಯ ತಮ್ಮ ಕುಟುಂಬಸ್ಥರು ಹಾಗೂ ಹಿರಿಯರ ಅನುಮತಿ ಪಡೆದು, ಮಹೂರ್ತ ಮುಗಿಯುತ್ತಿದ್ದಂತೆ ನೆರವಾಗಿ ಪರೀಕ್ಷಾ ಕೊಠಡಿಗೆ ಹೋಗಿ ಪ್ರಥಮ ವರ್ಷದ ಬಿಕಾಂ ಪರೀಕ್ಷೆಯನ್ನ ಬರೆದಿದ್ದಾರೆ. ಮದುವೆಯ ಕಾರಣದಿಂದ ವಧುವಿನ ಪರೀಕ್ಷೆಗೆ ತೊಂದರೆಯಾಗಬಾರದೆಂದು ಯೋಚಿಸಿದ ಗಂಡು ಮತ್ತು ಹೆಣ್ಣಿನ ಎರಡು ಮನೆಯ ಕುಟುಂಬದವರು ನಿರ್ಧಾರ ತೆಗೆದುಕೊಂಡು, ಐಶ್ವರ್ಯ ಅವರಿಗೆ ಪರೀಕ್ಷೆ ಬರೆಯಲೆಂದು ಪ್ರೋತ್ಸಾಹ ಮಾಡಿ ಪರೀಕ್ಷಾ ಸೆಂಟರ್ ಗೆ ಕಳುಹಿಸಿಕೊಟ್ಟಿದ್ದಾರೆ. ಮದುಮಗಳ ಅಲಂಕಾರ ದಲ್ಲಿದ್ದ ವಿದ್ಯಾರ್ಥಿನಿ ಐಶ್ವರ್ಯ, ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆದಿದ್ದು, ಬೇರೆ ಹೆಣ್ಣುಮಕ್ಕಳಿಗೂ ಮಾದರಿಯಾಗಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ತಿಳಿಸಿ..