ಮಾಟಗಾತಿ ಮಂಗ್ಲಿ ಎಂದೇ ಫೇಮಸ್ ಆಗಿರುವ ಈ ಗಾಯಕಿಯ ಲೈಫ್ ಸ್ಟೋರಿ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ !

Uncategorized

ಸ್ನೇಹಿತರೇ, ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿರುವ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ತೆಲುಗು ವರ್ಷನ್ ಕಣ್ಣೇ ಅದಿರಿಂದೇ ಹಾಡಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿರುವ ಗಾಯಕಿ ಮಂಗ್ಲಿ, ಈಗ ತುಂಬಾನೇ ಫೇಮಸ್ ಆಗಿಬಿಟ್ಟಿದ್ದಾರೆ. ಇನ್ನು ಈ ಗಾಯಕಿ ಶಿವನ ಕುರಿತಾದ ಹಾಡಿರುವ ಹಾಡುಗಳು ಕೂಡ ಸಿಕ್ಕಾ ಪಟ್ಟೆ ಫೇಮಸ್. ಹೌದು, ಮಂಗ್ಲಿ ಎಂದೇ ಖ್ಯಾತರಾಗಿರುವ ಈಕೆಯ ಮೂಲ ಹೆಸರು ಸತ್ಯವತಿ ರಾಥೋಡ್ ಚೌಹಾಣ್ ಎಂದು. ಇನ್ನು ಈಕೆ ತೆಲುಗಿನ ಕಿರುತೆರೆಯ ಮಾಟಗಾತಿ ಎಂಬ ಶೋನಲ್ಲಿ ಭಾಗವಹಿಸಿ ಸಿಕಾಪಟ್ಟೆ ಫೇಮಸ್ ಆಗಿದ್ದ ಕಾರಣ ಅಂದಿನಿಂದ ಮಾಟಗಾತಿ ಮಂಗ್ಲಿ ಎಂಬ ಹೆಸರಿನಿಂದಲೇ ಖ್ಯಾತರಾಗಿದ್ದಾರೆ. ಇನ್ನು ಈ ಗಾಯಕಿ ಹುಟ್ಟು ಬೆಳೆದ ಬಂದ ಕತೆ ಕೇಳಿದ್ರೆ ಕಣ್ಣೀರು ಬರುತ್ತೆ..

ಹೌದು, ಗಾಯಕಿ ಮಂಗ್ಲಿ ಬಂಜಾರಾ ಸಮುದಾಯದಿಂದ ಬಂದವರು. ಊರಿನಿಂದ ಊರಿಗೆ ಹೋಗಿ ಟೆಂಟ್ ಗಳನ್ನ ಹಾಕಿಕೊಂಡು ಜೀವನ ಸಾಗಿಸುವ ಈ ಜನಾಂಗದವರಿಗೆ ಸ್ವಂತ ಮನೆಗಳಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಈ ಜನಾಂಗದವರು ಗುಡಿಸುಲುಗಳ ರೀತಿ ತಾಂಡಗಳನ್ನ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಗುಡಿಸಲುಗಳಲ್ಲಿ ಬಾತ್ ರೂಮ್ ಸೇರಿದಂತೆ ಯಾವುದೇ ರೀತಿಯ ಸೌಲಭ್ಯಗಳು ಇರೋದಿಲ್ಲ. ಇನ್ನು ತಾನು ಚಿಕ್ಕವಳಿದ್ದಾಗ ಬಾತ್ ರೂಮ್ ಸೇರಿದಂತೆ ಯಾವ ಸೌಲಭ್ಯಗಳಿಲ್ಲದೆ ಬೆಳೆದು ಬಂದಿದ್ದೇನೆ ಎಂದು ಮಂಗ್ಲಿ ತಮ್ಮ ಬಾಲ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಸಮುದಾಯದಲ್ಲಿನ ಹೆಣ್ಣು ಮಕ್ಕಳಿಗೆ ಹದಿಮೂರು ವರ್ಷದ ಒಳಗೆ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಬಿಡುತ್ತಾರೆ ಎಂದು ತಮ್ಮ ಸಮುದಾಯದಲ್ಲಿನ ರೀತಿ ರಿವಾಜುಗಳ ಬಗ್ಗೆ ಕೂಡ ಮಂಗ್ಲಿ ಹೇಳಿದ್ದಾರೆ. ಆದರೆ ಇಷ್ಟೆಲ್ಲಾ ಕಷ್ಟಗಳ ನಡುವೆಯೂ ತನ್ನ ತಂದೆ ಶಿಕ್ಷಣದ ಮಹತ್ವ ಗೊತ್ತಿದ್ದವರಾದ ಕಾರಣ ನನ್ನನ್ನ ಓದಿಸಿದ್ದಾರೆ. ವಿಶೇಷ ಎಂದರೆ ಕರ್ನಾಟಕ ಸಂಗೀತದ ಬಗ್ಗೆ ಡಿಪ್ಲೋಮ ಕೋರ್ಸ್ ಮಾಡಿಕೊಂಡಿರುವ ಮಂಗ್ಲಿಯವರಿಗೆ ಕನಕದಾಸರು ಮತ್ತು ಪುರಂದರದಾಸರ ಪದಗಳನ್ನ ಬಹಳ ಚೆನ್ನಾಗಿಯೇ ಹಾಡುತ್ತಾರೆ.

ಆಲ್ಬಮ್ ಹಾಡುಗಳಿಂದ ಹಿಡಿದು ದೊಡ್ಡ ದೊಡ್ಡ ನಂತರ ಸಿನಿಮಾ ಹಾಡುಗಳಿಗೂ ಧ್ವನಿಯಾಗಿದ್ದಾರೆ ಮಂಗ್ಲಿ. ಮನೆಗಳೇ ಇಲ್ಲದ ಬಂಜಾರ ಸಮುದಾಯದಲ್ಲಿ ಹುಟ್ಟಿದ ಮಂಗ್ಲಿ ದೊಡ್ಡ ಮನೆಯನ್ನೇ ಕಟ್ಟಿಕೊಂಡಿದ್ದಾರೆ. ಒಟ್ಟಿನಲ್ಲಿ ಸ್ವಂತ ಮನೆಯಿಲ್ಲದೆ ಊರಿನಿಂದ ಊರಿಗೆ ಅಲೆದು ಜೀವನ ನಡೆಸುವಂತಹ ಸಮುದಾಯದಲ್ಲಿ ಹುಟ್ಟಿದ ಮಂಗ್ಲಿ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಖ್ಯಾತ ಗಾಯಕಿಯಾಗಿ ಗುರುತಿಸಿಕೊಂಡಿದ್ದು, ಮನಸಿದ್ದರೆ ಜೀವನದಲ್ಲಿ ಎಷ್ಟು ಎತ್ತರಕ್ಕಾದರೂ ಬೆಳೆಯಬಹುದು ಎಂಬುದಕ್ಕೆ ಮಂಗ್ಲಿ ಜೀವಂತ ನಿದರ್ಶನ ಹಾಗೂ ಬಹುತೇಕರಿಗೆ ಸ್ಫೂರ್ತಿಯಾಗಿದ್ದಾರೆ.