ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಲ್ಯಾಗ್ ಮಂಜು ಅವರ ಜೀವನದ ಅಸಲಿ ಕತೆ ಕೇಳಿದ್ರೆ ಕಣ್ಣೀರು ಬರುತ್ತೆ !

Entertainment
Advertisements

ಕಿರುತೆರೆಯಲ್ಲಿ ಪ್ರಸಾರವಾಗುವ ಮಜಭಾರತ ಕಾಮಿಡಿ ಶೋ ಮೂಲಕ ಲ್ಯಾಗ್ ಮಂಜ ಎಂದೇ ಫೇಮಸ್ ಆಗಿರುವ ಮಂಜು ಪಾವಗಡ ಅವರು ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ೮ ರಲ್ಲಿ ಸಖತ್ ಆಗಿಯೇ ಆಡುತ್ತಿದ್ದು, ತಮ್ಮ ಕಾಮಿಡಿ ಪಂಚ್ ಗಳ ಮೂಲಕ ಬಿಗ್ ಮನೆಯಲ್ಲೂ ಭರಪೂರ ಮನರಂಜನೆ ನೀಡುತ್ತಿದ್ದಾರೆ. ಇನ್ನು ಈ ಸಲದ ಬಿಗ್ ಬಾಸ್ ರಿಯಾಲಿಟಿ ಶೋನ ವಿನ್ನರ್ ಇವರೇ ಎಂಬ ಮಾತುಗಳು ಕೇಳಿಬರುತ್ತಿವೆ. ತನ್ನ ವಿಭಿನ್ನ ಹಾಸ್ಯದ ಮೂಲಕ ಬಿಗ್ ಬಾಸ್ ನ ಕೇಂದ್ರ ಬಿಂದುವಾಗಿರುವ ಮಂಜು ಸಹಸ್ಪರ್ಧಿಗಳ ಮನ ಗೆಲ್ಲುವುದಷ್ಟೇ ಅಲ್ಲದೆ ರಾಜ್ಯದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

[widget id=”custom_html-4″]

Advertisements

ಕನ್ನಡಿಗರ ಮನ ಗೆದ್ದಿರುವ ಮಂಜು ಪಾವಗಡ ಅವರ ಬದುಕು ಅಷ್ಟೇನೂ ಸುಲಭವಾಗಿರಲಿಲ್ಲ. ಕರ್ನಾಟಕದ ಗಡಿ ಭಾಗದಲ್ಲಿರುವ ಪಾವಗಡದ ಬಡ ಕುಟುಂಬವೊಂದರಲ್ಲಿ ಮಂಜು ಹುಟ್ಟಿದ್ದು. ಇನ್ನು ಬಡತನದ ಬೇಗೆಯಲ್ಲಿ ಮಿಂದೆದ್ದ ಮಂಜು ಇಷ್ಟೆಲ್ಲಾ ಕಷ್ಟಗಳ ನಡುವೆ ತಮ್ಮ ಶಿಕ್ಷಣವನ್ನ ಮುಗಿಸಿ ಕೆಲಸಕ್ಕೆಂದು ಬೆಂಗಳೂರಿಗೆ ಬರುತ್ತಾರೆ. ಇನ್ನು ಮಂಜು ಅವರಿಗೆ ಮೊದಲಿಗೆ ಕೆಲಸ ಸಿಕ್ಕಿದ್ದು ಪೆಟ್ರೋಲ್ ಬಂಕ್ ನಲ್ಲಿ. ಇದರ ನಡುವೆಯೇ ಸಿನಿಮಾ ಮತ್ತು ಕಿರುತೆರೆಯ ಕಡೆ ಮಂಜು ಅವರನ್ನ ಸೆಳೆಯುವಂತೆ ಮಾಡುತ್ತದೆ. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಮಂಜು ನಟನೆಯ ಕುರಿತು ತನ್ನ ಕೆಲಸದ ನಡುವೆಯೇ ತರಭೇತಿ ಪಡೆದುಕೊಳ್ಳುತ್ತಾರೆ.

[widget id=”custom_html-4″]

ಬಳಿಕ ನೀನಾಸಂ ಸೇರಿ ರಂಗಭೂಮಿಯಲ್ಲಿ ತಮ್ಮನ್ನ ತೊಡಗಿಸಿಕೊಳ್ಳುತ್ತಾರೆ. ತಂಡಗಳನ್ನ ಕಟ್ಟಿಕೊಂಡು ರಾಜ್ಯದಂತ ನಾಟಕಗಳ ಪ್ರದರ್ಶನ ಮಾಡುತ್ತಾರೆ. ಏನೇ ಮಾಡಿದ್ರು ಕೂಡ ಹೊಟ್ಟೆ ಬಟ್ಟೆಗೆ ತುಂಬಾ ಕಷ್ಟಪಡುವಂತಾಗುತ್ತದೆ. ಇನ್ನು ಹೀಗೊಂದು ದಿನ ಮಜಭಾರತದ ಶೋಗಾಗಿ ಆಡಿಷನ್ ಎದೆ ಎಂದು ತಿಳಿದು ಆಡಿಷನ್ ಗೆ ಹೋದ ಮಂಜು ಪಾವಗಡ ಅವರನ್ನ ರಿಜೆಕ್ಟ್ ಮಾಡಲಾಗುತ್ತದೆ. ಹೀಗೆ ಹಲವು ಬಾರಿ ಪ್ರಯತ್ನ ಪಟ್ಟ ಮಂಜು ಪಾವಗಡ ಅವರಿಗೆ ಮಜಭಾರತದಲ್ಲಿ ಅವಕಾಶ ಸಿಗುತ್ತದೆ. ಇನ್ನು ಶುರುವಿನಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಜು ಪಾವಗಡ ಅವರ ಅಭಿನಯ ನೋಡಿ ಅವರಿಗೆ ಮೈನ್ ರೋಲ್ ಗಳನ್ನ ನೀಡಲಾಗುತ್ತದೆ.

ಅಂದಿನಿಂದ ಹಿಂತಿರುಗಿ ನೋಡದ ಮಂಜು ಪಾವಗಡ ಮಜಭಾರತ ವೇದಿಕೆ ಮೂಲಕ ಕನ್ನಡಿಗರಿಗೆ ಚಿರಪರಚಿತರಾಗುತ್ತಾರೆ. ಅವರ ಹೆಸರಿನಲ್ಲಿ ಅಭಿಮಾನಿ ಪೇಜ್ ಗಳು ಹುಟ್ಟಿಕೊಳ್ಳುತ್ತವೆ. ಹೀಗೆ ಕಷ್ಟದಿಂದಲೇ ಬೆಳೆದು ಬಂದ ಮಂಜು ಪಾವಗಡ ಬಿಗ್ ಬಾಸ್ ಎಂಬ ಕನ್ನಡದ ರಿಯಾಲಿಟಿ ಷೋ ನಲ್ಲಿ ತಮ್ಮ ಹಾಸ್ಯದ ಕಚಗುಳಿ ಇಡುವುದರ ಮೂಲಕ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಒಟ್ಟಿನಲ್ಲಿ ಮಂಜು ಪಾವಗಡ ಲೈಫ್ ಸ್ಟೋರಿ ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂಬ ಗುರಿ ಇರುವವರಿಗೆ ಸ್ಫೂರ್ತಿ ಎಂದರೆ ತಪ್ಪಾಗೊದಿಲ್ಲ.