ತನ್ನ ಚಿತ್ರದಲ್ಲಿ ಕೆಲಸ ಮಾಡೋ ಪ್ರತಿಯೊಬ್ಬರಿಗೂ ರವಿಚಂದ್ರನ್ ಮಗ ಮಾಡಿದ್ದೇನು ಗೊತ್ತಾ ? ತಂದೆಗೆ ತಕ್ಕ ಮಗನಾದ ನಟ..

Cinema
Advertisements

ಸ್ನೇಹಿತರೇ, ಎರಡನೆಯ ಅಲೆಯಾಗಿ ಬಂದಿರೋ ಈ ಮಹಾಮಾ’ರಿ ಕೊ’ರೋನಾ ಭಾರತವನ್ನ ಇನ್ನಿಲ್ಲದೆ ಕಾಡುತ್ತಿದೆ. ಸಾವಿರಾರು ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ. ಇನ್ನು ಇದು ಕನ್ನಡ ಚಿತ್ರರಂಗವನ್ನು ಕೂಡ ಬಿಟ್ಟಿಲ್ಲ. ಲಾಕ್ ಡೌನ್ ಏರೋ ಕಾರಣ ಸಿನಿಮಾದಲ್ಲಿ ಕೆಲಸ ಮಾಡುವ ದಿನಗೂಲಿ ಸಿನಿಮಾ ಕಾರ್ಮಿಕರಿಂದ ಹಿಡಿದು ಪೋಷಕ ಕಲಾವಿದರ ಕುಟುಂಬಗಳು ಈಗ ಸಂಕಷ್ಟದ ಸ್ಥಿತಿಯಲ್ಲಿವೆ. ಇನ್ನು ಸುದೀಪ್, ಉಪೇಂದ್ರ ಸೇರಿದಂತೆ ಹಲವಾರು ಸ್ಯಾಂಡಲ್ವುಡ್ ನಟರು ಸಿನಿಮಾರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಹಿಡಿದು ಕಲಾವಿದರಿಗೂ ಸಹ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಇನ್ನು ಈಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಯುವ ನಟ ಮನೋರಂಜನ್ ರವಿಚಂದ್ರನ್ ಕೂಡ ತಮ್ಮ ಸಿನಿಮಾದಲ್ಲಿ ಕೆಲಸ ಮಾಡುವವರಿಗೆ ಸಹಾಯ ಮಾಡುವ ಮೂಲಕ ತಂದೆಗೆ ತಕ್ಕ ಮಗ ನೆನೆಸಿಕೊಂಡಿದ್ದಾರೆ.

[widget id=”custom_html-4″]

Advertisements

ಹೌದು, ಮನೋರಂಜನ್ ನಟನೆಯ ಮುಗಿಲ್ ಪೇಟೆ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ನೂರಕ್ಕೂ ಹೆಚ್ಚು ಕಾರ್ಮಿಕರು ಕಲಾವಿದರಿಗೆ ಹಣದ ರೂಪದಲ್ಲಿ ಸಹಾಯದ ಹಸ್ತ ಚಾಚಿದ್ದಾರೆ ನಟ ಮನೋರಂಜನ್. ಈ ಸಿನಿಮಾದಲ್ಲಿ ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ 5 ಸಾವಿರ ಹಣ ಹಾಕೋ ಮೂಲಕ ಕಾರ್ಮಿಕರು ಹಾಗೂ ಕಲಾವಿದರಿಗೆ ನೆರವಾಗಿದ್ದಾರೆ ಮನೋರಂಜನ್ ರವಿಚಂದ್ರನ್. ಇನ್ನು ಇದರ ಬಗ್ಗೆ ಮಾತನಾಡಿರೋ ಯುವ ನಟ ಈ ಕೊ’ರೋನಾ ಕಾರಣದಿಂದಾಗಿ ಮನೆಯಲ್ಲಿದ್ದರೆ ನಾವೆಲ್ಲಾ ಸೇಫ್ ಆಗಿ ಇರ್ತೇವೆ ಎಂದು ನಾವೆಲ್ಲಾ ಭಾವಿಸಿರುತ್ತೇವೆ. ಆದರೆ ನಾವಂದುಕೊಂಡಂತಿಲ್ಲ..

[widget id=”custom_html-4″]

ಆದ್ರೆ, ಇದೆ ವೇಳೆ ಚಿತ್ರೀಕರಣದ ಕೆಲಸ ಇಲ್ಲದ ಕಾರಣ ಸಿನಿಮಾ ಕಾರ್ಮಿಕರು ಹಾಗೂ ಕಲಾವಿದರು ಈಗ ಜೀವನ ನಡೆಸೋದಕ್ಕೆ ತುಂಬಾ ಕಷ್ಟಪಡುತ್ತಿದ್ದು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ಅಂತಹವರ ನೆರವಿಗೆ ನಿಲ್ಲುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿಯೇ ನಮ್ಮ ‘ಮುಗಿಲ್ ಪೇಟೆ’ ಸಿನಿಮಾದಲ್ಲಿ ಕೆಲಸ ಮಾಡುತ್ತಿರೋ ನೂರಕ್ಕೂ ಹೆಚ್ಚು ಕಾರ್ಮಿಕರು ಹಾಗು ಕಲಾವಿದರ ಬ್ಯಾಂಕ್ ಅಕೌಂಟ್ ಗೆ 5 ಸಾವಿರ ಹಣ ಹಾಕುವ ನಿರ್ಧಾರ ಮಾಡಿದ್ದೇನೆ ಎಂದು ನಟ ಮನೋರಂಜನ್ ಹೇಳಿದ್ದಾರೆ. ಸ್ನೇಹಿತರೇ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗನಾಗಿರುವ ಮನೋರಂಜನ್ ಅವರು ಮಾಡಿರುವ ಈ ಕೆಲಸಕ್ಕೆ ನಿಮ್ಮ ಅಭಿಪ್ರಾಯ ಏನಿದು ತಿಳಿಸಿ..