ಕಸದ ಗುಡ್ಡೆಯ ಬಳಿ ಬೀದಿ ನಾಯಿಯ ಜೊತೆ ಕುಳಿತ ಕನ್ನಡ ಚಿತ್ರಗಳಲ್ಲಿ ನಟಿಸಿದ ಖ್ಯಾತ ಖಳ ನಟ ! ಅಸಲಿಗೆ ಆಗಿದ್ದೇನು ಗೊತ್ತಾ ?

Cinema

ಸ್ನೇಹಿತರೇ, ಈ ನಟನನ್ನ ಕೆಲ ಕನ್ನಡ ಚಿತ್ರಗಳಲ್ಲಿ ನೋಡಿದ ನೆನಪು. ಹೌದು, ದಿಗ್ಗಜರು ಸೇರಿದಂತೆ ಉಪೇಂದ್ರ ಅಭಿನಯದ ಮಸ್ತಿ ಸೇರಿ ಕೆಲ ಕನ್ನಡ ಸಿನಿಮಾಗಳಲ್ಲಿ ಖಳ ನಟನಾಗಿ ಅಭಿನಯಿಸಿದ್ದಾರೆ. ತಮಿಳು ಚಿತ್ರರಂಗದ ಈ ಖ್ಯಾತ ಖಳ ನಟನ ಹೆಸರು ಮನ್ಸೂರ್ ಅಲಿ ಖಾನ್ ಎಂದು. ತಮಿಳಿನ ಬಹುತೇಕ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ ಇವರು. ಇನ್ನು ಈಗ ಈ ಖ್ಯಾತ ಖಳ ನಟ ಕಸವಿರುವ ಜಾಗದ ಬಳಿ ಕುಳಿತು ಬೀದಿ ನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಹಾಗಾದ್ರೆ ನಟ ಮನ್ಸೂರ್ ಅಲಿ ಖಾನ್ ವಿಚಿತ್ರವಾಗಿ ವರ್ತಿಸುವುತ್ತಿರುವುದೇಕೆ ಗೊತ್ತಾ ?

ನಮಗೆಲ್ಲಾ ತಿಳಿದಿರುವ ಹಾಗೆ ತಮಿಳುನಾಡಿನಲ್ಲಿ ಈಗ ಚುನಾವಣೆ ನಡೆಯಲಿದ್ದು, ರಾಜಕಾರಣಿಗಳು ಮತದಾರ ಪ್ರಭುಗಳನ್ನ ಒಲಿಸಿಕೊಳ್ಳುವ ಸಲುವಾಗಿ ವಿಭಿನ್ನವಾಗಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ನಟ ಮನ್ಸೂರ್ ಅಲಿ ಖಾನ್ ಕೂಡ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು ಈಗಾಗಲೇ ತಮ್ಮ ನಾಮಪತ್ರವನ್ನ ಸಲ್ಲಿಸಿದ್ದಾರೆ. ಇನ್ನು ಜನರನ್ನ ತಮ್ಮ ಕಡೆ ಸೆಳೆಯುವ ಸಲುವಾಗಿ ವಿಭಿನ್ನ, ವಿಚಿತ್ರವಾಗಿ ಪ್ರಚಾರಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಸ್ವತಂತ್ರ ಅಭ್ಯರ್ಥಿಯಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಈ ನಟ ಕೊಯಮುತ್ತೂರಿನ ತೊಂಡಮುತ್ತೂರ್ ಕ್ಷೇತ್ರದಿಂದ ಸ್ಪರ್ಧೆ ನೀಡುತ್ತಿದ್ದಾರೆ.

ನಟ ಮನ್ಸೂರ್ ಅಲಿ ಖಾನ್ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದು ಅಭಿವೃದ್ಧಿಗಾಗಿ ಮತ ನೀಡಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಒಬ್ಬರೇ ಏಕಾಂಗಿಯಾಗಿ ಜನರನ್ನ ಸೆಳೆಯುವಲ್ಲಿ ನಿರತರಾಗಿರುವ ನಟ ಇಲ್ಲಿಯವರೆಗೂ ರಾಜಕಾರಣಿಗಳು ಸುಳ್ಳು ಭರವಸೆಗಳನ್ನ ಕೊಟ್ಟು ಯಾವುದೇ ಅಭಿವೃದ್ಧಿ ಕಾರ್ಯಗಳನ್ನ ಮಾಡದೆ ಮತ ಕೊಟ್ಟ ಜನರಿಗೆ ಮೋಸ ಮಾಡುತ್ತಿದ್ದಾರೆ ಮತಧಾರ ಪ್ರಭುಗಳನ್ನ ತಮ್ಮತ್ತ ಸೆಳೆಯುವಲ್ಲಿ ನಿರತರಾಗಿದ್ದಾರೆ. ತೆಗೆಯದೆ ಇರುವ ಕಸದ ರಾಶಿಯೊಂದರ ಬಳಿ ಕುಳಿತ ನಟ ಮನ್ಸೂರ್ ಅವರು ಅಲ್ಲಿದ್ದ ಬೀದಿ ನಾಯಿಯ ಆಟವಾಡುವುದರ ಜೊತೆಗೆ ಜನರನ್ನ ತಮ್ಮ ಕಡೆ ಸೆಳೆಯುವಲ್ಲಿ ಪ್ರಯತ್ನ ಪಡುತ್ತಿದ್ದು, ಈ ಫೋಟೋಗಳಂತೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.

ಇನ್ನು ಇಷ್ಟೇ ಅಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದವರನ್ನ ಕರೆದು ಅವರ ಸಮಸ್ಯೆಗಳನ್ನ ವಿಚಾರಿಸಿದಷ್ಟೇ ಅಲ್ಲದೆ, ಆ ಮಾಹಿತಿಯನ್ನ ತಮ್ಮ ನೋಟ್ ಬುಕ್ ನಲ್ಲಿ ಬರೆದುಕೊಂಡ, ನನ್ನನ್ನ ನೀವು ಗೆಲ್ಲಿಸಿದ್ದೆ ಆದಲ್ಲಿ ನಿಮ್ಮ ಸಮಸ್ಯೆಗಳನ್ನ ನಾನು ಈಡೇರಿಸುವೆ ಎಂದು ಭರವಸೆಗಳನ್ನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ವಿಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಜನರನ್ನ ತಮ್ಮ ಕಡೆ ಸೆಳೆಯುವಂತೆ ಮಾಡುತ್ತಿರುವ ನಟ ಮನ್ಸೂರ್ ಅಲಿ ಖಾನ್ ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲ್ಲುತ್ತಾರಾ ಇಲ್ಲವಾ ಎಂಬುದನ್ನ ಕಾದು ನೋಡಬೇಕಾಗಿದೆ.