ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದ ಅಂಧ ತಾಯಿ ಜೊತೆಗಿದ್ದ ಮಗು ! ಅದೇ ಹಳಿಯಲ್ಲಿ ಫಾಸ್ಟ್ ಆಗಿ ಬರುತ್ತಿದ್ದ ಟ್ರೈನ್..ಸೂಪರ್ ಮ್ಯಾನ್ ನಂತೆ ಬಂದ ಈ ವ್ಯಕ್ತಿ ಮಗುವನ್ನ ಕಾಪಾಡಿದ್ದೇಗೆ ಗೊತ್ತಾ ?

Kannada News

ಸ್ನೇಹಿತರೇ, ರೈಲ್ವೆ ನಿಲ್ದಾಣವೊಂದರಲ್ಲಿ ನಡೆದಿರುವ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ಘಟನೆಯ ಬಗ್ಗೆ ಕೇಳಿದ್ರೆ ಒಂದು ಕ್ಷಣ ಮೈ ಜುಮ್ ಎನಿಸದೆ ಇರೋದಿಲ್ಲ. ಇಂತಹ ಘಟನೆಗಳನ್ನ ಸಿನಿಮಾಗಳಲ್ಲಿ ಮಾತ್ರ ನೋಡಿರಲು ಸಾಧ್ಯ. ಆದರೆ ಇದು ನಿಜ ಜೀವನದಲ್ಲಿ ನಡೆದಿದೆ. ರೈಲ್ವೆ ನಿಲ್ದಾಣಗಳಲ್ಲಿ ಕೆಲವೇ ಸೆಕೆಂಡುಗಳ ಅಂತರದಲ್ಲಿ ಜನರ ಜೀ’ವ ಉಳಿಸಿದವರ ಎಷ್ಟೋ ಘಟನೆಗಳನ್ನ ನಾವು ನೋಡಿರುತ್ತೇವೆ. ರೈಲ್ವೆ ಟ್ರ್ಯಾಕ್ ಗಳಲ್ಲಿ ಜನರು ಚಲಿಸುತ್ತಿರುವ ರೈಲಿಗೆ ಸಿಕ್ಕಿ ಹಾಕಿಕೊಳ್ಳುವ ಎಷ್ಟೋ ಅ’ಹಿತಕರ ಘಟನೆಗಳು ನಡೆಡಿದ್ದು, ತಮ್ಮ ಜೀವದ ಹಂಗು ತೊರೆದು ಪ್ರಯಾಣಿಕರ ಪ್ರಾ’ಣ ಕಾಪಾಡಿದ ರಿಯಲ್ ಹಿರೊಗಳನ್ನ ನೋಡಿದ್ದೇವೆ. ಅದೇ ರೀತಿಯಾದ ಈಗ ನಡೆದಿರುವ ಘ’ಟನೆಯೊಂದು ಬೆ’ಚ್ಚಿಬೀಳಿಸುವಂತಿದೆ, ಇದೇನು ಸಿನಿಮಾ ಸೀನ್ ಅಂತ ಅನ್ನಿಸದೆ ಇರೋದಿಲ್ಲ ನಿಮಗೆ.

ಹೌದು, ಸ್ನೇಹಿತರೆ ಸೂಪರ್ ಮ್ಯಾನ್ ನಂತೆ ಬಂದು ಮಗುವನ್ನ ಕಾಪಾಡಿದ ಈ ವ್ಯಕ್ತಿ ಈಗ ಇಡೀ ದೇಶದಾದ್ಯಂತ ಸ್ಟಾರ್ ಆಗಿಬಿಟ್ಟಿದ್ದಾನೆ. ಇನ್ನು ಈ ಘಟನೆ ನಡೆದಿರುವುದು ಮುಂಬೈನ ಬಾಂಗನಿ ನಗರದಲ್ಲಿ. ಇಲ್ಲಿನ ರೈಲ್ವೆ ಫ್ಲಾಟ್ ಫಾರ್ಮ್ ನಲ್ಲಿ ಕಣ್ಣು ಕಾಣಿಸದ ತಾಯಿಯೊಬ್ಬರು ತಮ್ಮ ಮಗನ ಜೊತೆ ನಡೆದುಕೊಂಡು ಹೋಗುತ್ತಿರುತ್ತಾರೆ. ಇದೆ ವೇಳೆ ತಾಯಿಯ ಜೊತೆ ಆಟ ಆಡಿಕೊಂಡು ನಡೆದುಕೊಂಡು ಹೋಗುತ್ತಿದ್ದ ಮಗು ದು’ರದೃಷ್ಟವಶಾತ್ ರೈಲ್ವೆ ಟ್ರ್ಯಾಕ್ ಮೇಲೆ ಬಿ’ದ್ದು ಬಿಡುತ್ತಾನೆ. ಇನ್ನು ಅದೇ ಟ್ರ್ಯಾಕ್ ಮೇಲೆ ರೈಲೊಂದು ಫಾಸ್ಟ್ ಆಗಿ ಬರುತ್ತಿರುತ್ತದೆ. ಪಾಪ ಕಣ್ಣು ಕಾಣದ ತಾಯಿ ತಾನು ಏನೂ ಮಾಡಲಾಗದೆ ಅಸಹಾಯಕತೆಯಿಂದ ಅ’ಳುತ್ತಿರುತ್ತಾಳೆ.

ಇನ್ನು ಇದೆ ವೇಳೆ ಅಲ್ಲೇ ಸಮೀಪದಲ್ಲಿ ರೈಲ್ವೆ ಉದ್ಯೋಗಿ ಮಯೂರ್ ಶೆಲ್ಕೆ ಎಂಬುವವರು ಕೆಲಸ ಮಾಡುತ್ತಿದ್ದು, ಮಗು ರೈಲ್ವೆ ಹಳಿ ಬಿ’ದ್ದದನ್ನ ನೋಡಿ, ರೈಲು ಬರುತ್ತಿದೆ ಎಂದು ಗೊತ್ತಿದ್ದರೂ ಶರವೇಗದಲ್ಲಿ ರೈಲ್ವೆ ಹಳಿಯ ಮೇಲೆಯೇ ತನ್ನ ಪ್ರಾ’ಣವನ್ನೂ ಲೆಕ್ಕಿಸದೆ ಓಡಿ ಬಂದ ಮಯೂರ್ ಅವರು ಮಗುವನ್ನ ಎತ್ತಿ ರೈಲ್ವೆ ಪ್ಲೇಟ್ ಫಾರ್ಮ್ ಮೇಲಿಟ್ಟು, ತಾವು ಕೂಡ ತಟ್ಟನೆ ಫ್ಲಾಟ್ ಫಾರ್ಮ್ ಮೇಲೇರುತ್ತಾರೆ. ಕ್ಷಣದಲ್ಲೇ ಅದೇ ಹಳಿಯ ಮೇಲೆ ಬಂದ ರೈಲು ಶರವೇಗದಲ್ಲಿ ಹಾದು ಹೋಗುತ್ತದೆ. ಒಂದು ಕ್ಷಣ ಯಾಮಾರಿದ್ರು ಎರಡು ಜೀ’ವಗಳು ಸಾ’ವಾಗುವ ಸಾಧ್ಯತೆಯೇ ಹೆಚ್ಚಿತ್ತು. ಆದರೆ ಸೂಪರ್ ಮ್ಯಾನ್ ನಂತೆ ಬಂದ ಮಯೂರ್ ಅವರು ಮಗುವನ್ನ ಕಾಪಾಡಿ ಹೀರೊ ಆಗಿದ್ದಾರೆ.