ಒಂದೇ ಬಾರಿಗೆ ಎರಡು ದುಬಾರಿ ಕಾರ್ ಗಳನ್ನ ಕೊಂಡ ಜೊತೆಜೊತೆಯಲಿ ನಟಿ ಅನು ಸಿರಿಮನೆ..ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..

Entertainment

ಕನ್ನಡ ಕಿರುತರೆಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಮೂಲಕ ಕನ್ನಡ ಕಿರುತರೆ ಲೋಕಕ್ಕೆ ಎಂಟ್ರಿ ಕೊಟ್ಟ ಅನು ಸಿರಿಮನೆ ಖ್ಯಾತಿಯ ನಟಿ ಮೇಘಾ ಶೆಟ್ಟಿ ಈಗ ಕರ್ನಾಟಕದಾದ್ಯಂತ ತುಂಬಾನೇ ಫೇಮಸ್ ಆಗಿದ್ದಾರೆ. ತಾವು ನಟಿಸಿದ ಮೊದಲ ಸೀರಿಯಲ್ ನಿಂದಲೇ ವೀಕ್ಷಕರ ಮನ ಗೆದ್ದಿರುವ ಅನು ಸಿರಿಮನೆ ಅಲಿಯಾಸ್ ಮೇಘ ಶೆಟ್ಟಿ ಅಪಾರ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮಾಧ್ಯಮ ವರ್ಗ ಕುಟುಂಬದ ಹೆಣ್ಣುಮಗಳ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಮೇಘ ಶೆಟ್ಟಿ, ಈಗ ಬೆಳ್ಳಿತೆರೆಗೂ ಎಂಟ್ರಿ ಕೊಡಲಿದ್ದಾರೆ. ಹೌದು, ನಟ ಗಣೇಶ್ ಅವರು ಅಭಿನಯಿಸುತ್ತಿರುವ ಹೊಚ್ಚ ಹೊಸ ಸಿನಿಮಾವೊಂದರಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಈ ಮೂಲಕ ಸ್ಯಾಂಡಲ್ವುಡ್ ಗೂ ಕಾಲಿಟ್ಟಿದ್ದಾರೆ.

ಒಟ್ಟಿನಲ್ಲಿ ತಾವು ನಟಿಸಿದ ಮೊದಲ ಧಾರಾವಾಹಿಯಿಂದಲೇ ಇಷ್ಟೆಲ್ಲಾ ಖ್ಯಾತರಾಗಿರುವ ಮೇಘಾ ಶೆಟ್ಟಿ ಬಣ್ಣದ ಲೋಕದಲ್ಲಿ ತುಂಬಾ ವೇಗವಾಗಿ ಬೆಳೆಯುತ್ತಿರುವ ನಟಿ ಎಂದರೆ ತಪ್ಪಾಗೊದಿಲ್ಲ. ಏಕೆಂದರೆ ನಟಿಯೊಬ್ಬಳು ತಮ್ಮ ಮೊದಲ ಸಿನಿಮಾದಲ್ಲೇ ಸ್ಟಾರ್ ನಟನೊಂದಿಗೆ ನಟಿಸುವುದು ಎಂದರೆ ಅದು ಅವರ ಪ್ರತಿಭೆಗೆ ಸಿಕ್ಕ ಫಲ ಎನ್ನಬಹುದು. ಇನ್ನು ಇದೆಲ್ಲದರ ನಡುವೆ ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದ ಮೇಘಾ ಶೆಟ್ಟಿ ಜೊತೆ ಜೊತೆಯುಲಿ ಸೀರಿಯಲ್ ಮುಗಿಯುವ ತನಕ ಕೂಡ ನಾನು ಅಭಿನಯಿಸುವೆ ಎಂದು ಹೇಳುವ ಮೂಲಕ ಮುಗಿಲೆದಿದ್ದ ಗೊಂದಲಿಗಳಿಗೆಲ್ಲಾ ತೆರೆ ಎಳೆದರು.

ಇನ್ನು ಈಗ ಮೇಘಾ ಶೆಟ್ಟಿ ಅವರು ಎರಡು ದುಬಾರಿಯಾದ ಐಷಾರಾಮಿ ಕಾರುಗಳನ್ನ ಖರೀದಿ ಮಾಡಿದ್ದು ಅದರ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಪಟ್ಟಿದ್ದಾರೆ. ಹೌದು, ಒಟ್ಟೊಟ್ಟಿಗೆ ಎರಡು ದುಬಾರಿಯಾದ ಬಿಎಂಡಬ್ಲ್ಯೂ ಫೈವ್ ಸೀರಿಸ್ ಮತ್ತು ಎಂಜಿ ಹೆಕ್ಟರ್ ಐಷಾರಾಮಿ ಕಾರ್ ಗಳನ್ನ ಕೊಂಡಿರುವ ನಟಿ ಮೇಘಾ ಶೆಟ್ಟಿ ನಮ್ಮ ಮನೆಗೆ ಸ್ವಾಗತ ಎಂದು ಬರೆದುಕೊಂಡಿದ್ದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಐಷಾರಾಮಿ ಕಾರ್ ಗಳ ಬೆಲೆ ಬಗ್ಗೆ ಕೇಳಿದ್ರೆ, BMW ಕಾರ್ ಬೆಲೆ ಬರೋಬ್ಬರಿ 80ಲಕ್ಪ ರೂಪಾಯಿಗಳಾಗಿದ್ದು, MG ಹೆಕ್ಟರ್ ಕಾರ್ ನ ಬೆಲೆ 19 ಲಕ್ಷ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಬಣ್ಣದ ಲೋಕದಲ್ಲಿ ತುಂಬಾ ಬೇಗನೆ ಫೇಮಸ್ ಆಗಿ ಬೆಳೆಯುತ್ತಿರುವ ನಟಿ ಮೇಘಾ ಶೆಟ್ಟಿ ಹತ್ತಿರ ಹತ್ತಿರ ಒಂದು ಕೋಟಿ ಬೆಲೆ ಬಾಳುವ ಕಾರ್ ಗಳ ಒಡತಿ ಎನಿಸಿಕೊಂಡಿದ್ದಾಳೆ.