ಮೊದಲ ಬಾರಿಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋಗೆ ಬಂದಿರೋ ಮೇಘನಾ ರಾಜ್ ಗೆ ಸಿಕ್ಕ ದುಬಾರಿ ಸಂಭಾವನೆ ಎಷ್ಟು ಗೊತ್ತಾ!?

Entertainment

ಸ್ನೇಹಿತರೇ, ಸ್ಯಾಂಡಲ್ವುಡ್ ನ ಖ್ಯಾತ ನಟಿ ಮೇಘನಾ ಸರ್ಜಾ ಅವರು ಪತಿ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ಬಳಿಕ ತುಂಬಾ ನೋವಲ್ಲಿದ್ದರು. ರಾಯನ್ ಸರ್ಜಾ ಹುಟ್ಟಿದ ಬಳಿಕ, ಮಗನಲ್ಲೇ ಚಿರಂಜೀವಿ ಸರ್ಜಾ ಅವರನ್ನ ನೆನೆಯುತ್ತಾ ಕಾಲ ಕಳೆಯುತ್ತಿದ್ದರು. ಇದರ ನಡುವೆಯೇ ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ವುಡ್ ಗೆ ಮರಳಿದ ಮೇಘಾನಾ ರಾಜ್ ಸಿನಿಮಾವೊಂದರಲ್ಲಿ ನಟಿಸಿದರು.

ಇನ್ನು ಮೇಘನಾ ರಾಜ್ ಅವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಸಾಯಿ ಎನಿಸಿಕೊಂಡ ನಟಿ. ಇನ್ನು ಎಲ್ಲರಿಗು ತಿಳಿದಿರುವ ಹಾಗೆ ಪತಿ ಚಿರಂಜೀವಿ ಸರ್ಜಾ ಸ್ಯಾಂಡಲ್ವುಡ್ ನ ಯುವನಟರಾಗಿದ್ದವರು, ಇನ್ನು ಇವರ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಷಾಯ್ ಕೂಡ ಕನ್ನಡ ಸಿನಿಮಾರಂಗಕ್ಕೆ ಹಲವು ವರ್ಷಗಳಿಂದ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಕೇವಲ ಒಂದೇ ವರ್ಷಕ್ಕೆ ಪತಿ ಚಿರಂಜೀವಿ ಸರ್ಜಾ ಅವರನ್ನ ಕಳೆದುಕೊಂಡ ಮೇಘನಾ ರಾಜ್ ಅವರೇ ಅವರ ಜೀವನ ಅಷ್ಟೇನೂ ಸುಖಮಯವಾಗಿರಲಿಲ್ಲ. ದುಃಖವೇ ತುಂಬಿದ ಮೇಘನಾ ಅವರ ಬಾಳಲ್ಲಿ ಬೆಳಕು ಮೂಡಿದ್ದು ಮಗ ರಾಯನ್ ಸರ್ಜಾ ಹುಟ್ಟಿದ ಮೇಲೆಯೇ..ಈಗ ತಮ್ಮ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿರುವ ಮೇಘನಾ ರಾಜ್ ಈಗ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹೌದು, ಇದೆ ಮೊದಲ ಬಾರಿಗೆ ಕಿರುತೆರೆಯರಿಯಾಲಿಟಿ ಶೋನ ತೀರ್ಪುಗಾರರಲ್ಲಿ ಒಬ್ಬರಾಗಿ ಮೇಘನಾ ರಾಜ್ ಕಾಣಿಸಿಕೊಳ್ಳಲಿದ್ದಾರೆ. ಹೌದು, ಕನ್ನಡದ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಡ್ಯಾನ್ಸಿಂಗ್ ಚಾಂಪಿಯನ್ಸ್’ ಶೋ ಕಾರ್ಯಕ್ರಮದ ತೀರ್ಪುಗಾರರಾಗಿ ಮೇಘನಾ ಸರ್ಜಾ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಹಲವು ವರ್ಷಗಳ ಬಳಿಕ ಕಿರುತೆರೆ ಲೋಕಕ್ಕೆ ಹಿಂದುರುಗಿರುವ ಮೇಘನಾ ರಾಜ್ ಪಡೆದುಕೊಳ್ಳುತ್ತಿರುವ ಸಂಭಾವನೆ ವಿಚಾರವಾಗಿ ವೀಕ್ಷಕರಲ್ಲಿ ಕುತೂಹಲ ಮೂಡಿದೆ. ಹೌದು, ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ಈ ‘ಡ್ಯಾನ್ಸಿಂಗ್ ಚಾಂಪಿಯನ್ಸ್’ ರಿಯಾಲಿಟಿ ಶೋನಲ್ಲಿ ಗಟ್ಟಿಮೇಲೆ ಸೀರಿಯಲ್ ಖ್ಯಾತಿಯ ಆದ್ಯಾ, ರಾಜರಾಣಿ ಖ್ಯಾತಿಯ ನಟಿ ನೇಹಾ ಗೌಡ ಮತ್ತು ಪತಿ ಚಂದನ್, ಪುಟ್ಟ ಗೌರಿ ಸೀರಿಯಲ್ ಖ್ಯಾತಿಯ ಸಾನಿಯಾ, ಕನ್ನಡತಿ ಸೀರಿಯಲ್ ನಟಿ ಸುಚಿ ಹೀಗೆ ಕಿರುತೆರೆಯ ಹಲವು ಸೆಲೆಬ್ರೆಟಿಗಳು ಡ್ಯಾನ್ಸಿಂಗ್ ಚಾಂಪಿಯನ್ಸ್ ಸ್ಪರ್ಧಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ.

ಇನ್ನು ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಕಾರ್ಯಕ್ರಮವನ್ನ ಯಶಸ್ವಿ ಮಾಡುವ ಸಲುವಾಗಿ ತುಂಬಾ ಅದ್ದೂರಿಯಾಗಿ ಎಲ್ಲಾ ತಯಾರಿಗಳು ನಡೆದಿದ್ದು, ಸ್ಪರ್ಧಿಗಳು ಹಾಗೂ ತೀರ್ಪುಗಾರರಿಗೆ ದುಬಾರಿ ಸಂಭಾವನೆ ನೀಡಲಾಗುತ್ತಿದೆ. ಇನ್ನು ಮಾಹಿತಿಗಳ ಪ್ರಕಾರ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ತೀರ್ಪುಗಾರರಾಗಿರುವ ಮೇಘನಾ ರಾಜ್ ಅವರಿಗೆ ಒಂದು ವರದ ಸಂಭಾವನೆಯಾಗಿ ಬರೋಬ್ಬರಿ ಒಂದು ಲಕ್ಷ ನೀಡಲಾಗುತ್ತಿದೆ ಎನ್ನಲಾಗಿದೆ.

ಇನ್ನು ಸುಮಾರು ನಾಲ್ಕು ತಿಂಗಳುಗಳ ಈ ಡ್ಯಾನ್ಸಿಂಗ್ ಚಾಂಪಿಯನ್ಸ್ ಶೋ ಕಾರ್ಯಕ್ರಮ ನಡೆಯಲಿದ್ದು, ಒಟ್ಟಾರೆಯಾಗಿ ಮೇಘನಾ ರಾಜ್ ಅವರು 13 ರಿಂದ 15 ಲಕ್ಷದ ಸಂಭಾವನೆ ಪಡೆಯಲಿದ್ದಾರೆ. ಒಟ್ಟಿನಲ್ಲಿ ಒಂದು ದೊಡ್ಡ ಲಾಂಗ್ ಗ್ಯಾಪ್ ನ ಬಳಿಕ ನೋವಿನಲ್ಲೇ ಇದ್ದ ಮೇಘನಾ ರಾಜ್ ಅವರು ಕಿರುತೆರೆಗೆ ಎಂಟ್ರಿ ಕೊಟ್ಟಿರುವುದು ಅವರ ಜೀವನದಲ್ಲಿ ನೆಮ್ಮದಿಯ ಉಲ್ಲಾಸ ತುಂಬಲಿದೆ..