ದಿನೇ ದಿನೇ ದೊಡ್ಡದಾಗುತ್ತಾ ಹೊಲ ಮನೆಗಳನ್ನೆಲ್ಲಾ ನುಂಗುತ್ತಿದೆ ಈ ಬಾವಿ !ಎಲ್ಲವನ್ನು ನುಂಗುತ್ತಲಿರುವ ಈ ಬಾವಿ ಇರುವದೆಲ್ಲಿ ಗೊತ್ತಾ ?

Kannada Mahiti

ಒಮ್ಮೊಮ್ಮೆ ಪ್ರಕೃತಿಯಲ್ಲಿ ನಡೆಯುವ ವಿಚಿತ್ರಗಳು ಕುತೂಹಲದ ಜೊತೆಗೆ ಕೆಲವೊಮ್ಮೆ ಆತಂಕ ಕೂಡ ಹುಟ್ಟಿಸುತ್ತವೆ. ಕೆಲ ದಿನಗಳಿಂದ ಮೆಕ್ಸಿಕೊದ ಬಾವಿಕಯಲ್ಲಿ ಆಗ್ತಾ ಇರೋದನ್ನು ನೋಡಿ ಅಲ್ಲಿನ ಜನರೇ ವಿಸ್ಮಿತರಾಗ್ತಿದ್ದಾರೆ. ದೊಡ್ಡ ಬಯಲಲ್ಲಿರೋ ಬಾವಿ ಒಂದು ತಾನೇ ತಾನಾಗಿ ಕುಸಿದು, ಇದೀಗ ಬೃಹದಾಕಾರದ ಕೆರೆಯಂತಾಗ್ತಿದೆ. ನೀರು ಒಳಗಿನಿಂದ ಉಕ್ಕಿ ಉಕ್ಕಿ ಬರ್ತಾ ಇದ್ರೆ ಮೇಲಿನಿಂದ ಮಣ್ಣು ಹಾಗೇ ಕುಸಿದು ಕುಸಿದು ಬೀಳ್ತಾ ಇದೆ. ಇದು ಯಾವಾಗ ನಿಲ್ಲುತ್ತೆ ಅನ್ನೋದೇ ಗೊತ್ತಾಗ್ತಾ ಇಲ್ಲ. ಬಾವಿಯಂತೂ ಕೆರೆಯಾಗಿ ಈಗ ಸರೋವರವಾಗಿ ಬಿಡುತ್ತಾ ಅಥವಾ ಮತ್ತೇನಾದ್ರೂ ಅಪಾಯ ತಂದು ಬಿಡುತ್ತಾ ಅನ್ನೋ ರೀತಿ ಕಾಣ್ತಾ ಇದೆ. ವಿಶಾಲವಾದ ಈ ಪ್ರದೇಶದಲ್ಲಿ ಬಾವಿ ಬಾಯಿ ತೆರೆದಿದ್ದಷ್ಟೇ ಅಲ್ಲ, ಬಾಯಿ ಅಗಲ ಮಾಡುತ್ತಲೇ ಹೋಗ್ತಾ ಇದೆ. ಮೊದಲು ಈ ಬಯಲಿನಲ್ಲಿ ಇದ್ದಿದ್ದು ಒಂದು ಸಣ್ಣ ಗುಂಡಿ. ಇದ್ದಕ್ಕಿದ್ದ ಹಾಗೆ ಇದು ತಾನೇ ತಾನಾಗಿ ಕುಸಿಯಲು ತೊಡಗಿಬಿಟ್ಟಿದೆ. ಸಣ್ಣ ಗುಂಡಿ ಇದ್ದಿದ್ದು ಬಾವಿಯಾಗಿ ಈಗ ಹೊಲ ಮನೆಗಳನ್ನು ನುಂಗಿಕೊಳ್ಳುತ್ತಾ ಅನ್ನೋ ಆತಂಕ ಸೃಷ್ಟಿಸಿದೆ. ಕೆಲವೇ ಕೆಲವು ದಿನಗಳಲ್ಲಿ ಸಣ್ಣ ಗುಂಡಿಯಾಗಿದ್ದ ಹೀಗೆ ದೊಡ್ಡ ಬಾವಿಯಾಗಿ ಬದಲಾಗಿರೋದು. ಇನ್ನು ಮುಂದೆ ಬೆಳೆದು ಇಡೀ ಊರನ್ನೆ ತನ್ನ ಪಾಲಾಗಿಸಿಕೊಳ್ಳುವ ಆತಂಕ ಹುಟ್ಟಿಸಿದೆ ಈ ಬಾವಿ. ಇದರ ಹೆಸರು ಸಿಂಕ್ ಹೋಲ್. ಮೆಕ್ಸಿಕೋದಲ್ಲಿ ಈ ವಿಸ್ಮಯ ಸೃಷ್ಟಿಯಾಗಿದೆ.

ವೈಜ್ಞಾನಿಕವಾಗಿ ಈ ರೀತಿ ಆಗೋಕೆ ಕಾರಣಗಳು ಇದೆ. ಆದರೆ ಹೀಗೆ ದಿನದಿಂದ ದಿನಕ್ಕೆ ತನ್ನ ಆಕಾರವನ್ನು ಹೆಚ್ಚಿಸಿಕೊಳ್ಳುತ್ತಿರುವುದು, ಇಲ್ಲ ಸಲ್ಲದ ಊಹಾಪೋಹಗಳಿಗೆ ಮನೆ ಮಾಡಿ ಕೊಟ್ಟಿದೆ. ಅದೇ ಕೃಷಿ ಜಮೀನಿನ ಸಮೀಪದಲ್ಲೇ, ಆ ಜಮೀನಿನ ಮಾಲೀಕನ ಮನೆಯಿದೆ. ವಾರಗಳ ಹಿಂದೆ ರಾತ್ರಿ ಹೊತ್ತಲ್ಲಿ ಹೊರಗಡೆ ಬಲವಾದ ಸಿಡಿಲು ಗುಡುಗಿನ ಭೀ’ಕರವಾದ ಸದ್ದು ಕೇಳಿಸಿದೆ. ಪ್ರಾಕೃತಿಕ ಬದಲಾವಣೆ ಎಂದು ಅದನ್ನು ಗಮನಿಸರಲಿಲ್ಲ. ಅದಾದ ಸ್ವಲ್ಪ ದಿನದಲ್ಲೇ, ಸಣ್ಣದೊಂದು ಗುಂಡಿ ಜಾಗ ಮಾಡಿಕೊಂಡಿದೆ. ಅದೇ ವಾರ ಕಳೆದಂತೆ ಅದು ಬೆಳೆದು ಬೆಳೆದು ದೊಡ್ಡ ರಾಕ್ಷಸ ಬಾವಿಯಾಗೆ ಬದಲಾಗಿ ಬಿಟ್ಟಿದೆ. ಇನ್ನ, ಈ ವಿಸ್ಮಯ ನೋಡಲು ಜನ ಎದ್ನೋ ಬಿದ್ನೋ ಅಂತ ಬರ್ತಿದ್ದಾರಂತೆ. ಇದು ಎಲ್ಲಿಯವರೆಗೂ ತನ್ನ ಬಾಯನ್ನು ವಿಸ್ತಾರ ಮಾಡುತ್ತೋ ಇನ್ನು ಗೊತ್ತಿಲ್ಲ. ಆದರೆ ಹತ್ತಿರ ಇರುವ ಮನೆ ಇನ್ನೇನು ಕೆಲವೇ ದಿನಗಳಲ್ಲಿ ಈ ರಾಕ್ಷಸ ಬಾವಿ ಪಾಲಾಗುವುದರಲ್ಲಿ ಸಂಶಯವಿಲ್ಲ. ಅಷ್ಟರ ಮಟ್ಟಿಗೆ ಈ ಬಾವಿ ತನ್ನ ಹೆಬ್ಬಾಯಿಯನ್ನು ವಿಸ್ತಾರ ಮಾಡಿಕೊಂಡಿದೆ. ಬರಿ ಅಲ್ಲಿರುವ ಮನೆಯನ್ನು ನುಂಗಿ ಸುಮ್ಮನಾಗುತ್ತದೆ ಎಂದು ನಂಬಲಾಗುವುದಿಲ್ಲ. ಈ ಬಾವಿಯ ಹಸಿವು ಇನ್ನು ಎಷ್ಟಿದೆ ಎನ್ನುವುದನ್ನು ತಜ್ಞರ ಊಹೆಗೂ ಸಿಗುತ್ತಿಲ್ಲ. ಇನ್ನು ಇದರ ನಿಯಂತ್ರಣದ ಅರಿವೂ ಸಹ ಯಾರ ಬಳಿಯೂ ಇನ್ನು ಸಿದ್ಧವಾಗಿಲ್ಲ ಎನ್ನುವುದು ವಿಪರ್ಯಾಸವೇ ಸರಿ.

ಮೆಕ್ಸಿಕೋದಲ್ಲಿರೋ ಈ ಒಂದು ಸಿಂಕ್ ಹೋಲ್ ಸುತ್ತಳತೆ ತಿಳಿದರೆ ಶಾಕ್ ಆಗ್ತೀರ. ಸದ್ಯಾ ಈ ಹೊಂಡ 300 ಫೀಟ್ ಸುತ್ತಳತೆಯನ್ನು ವಿಸ್ತರಿಕೊಂಡಿದೆ. ಅಂದ್ರೆ ಹೆಚ್ಚು ಕಮ್ಮಿ ಒಂದು ದೊಡ್ಡ ಕ್ರಿಕೇಟ್ ಗ್ರೌಂಡ್‍ನಷ್ಟು ಇರಬಹುದು. ಇನ್ನು ಇದು 60 ಅಡಿ ಆಳದವರೆಗೂ ತನ್ನನ್ನು ತಾನೆ ನುಂಗಿ ಬಿಟ್ಟಿದೆ. ಆದರೆ ದಿನದಿಂದ ದಿನಕ್ಕೆ ಇದರ ಅಳತೆ ಹೆಚ್ಚುತ್ತಿರುವುದು, ಇದರ ಅಳತೆ ಮತ್ತಷ್ಟು ಹೆಚ್ಚಿದರು ಅನುಮಾನ ಪಡುವಂತಿಲ್ಲ. ಹತ್ತಿರದಲ್ಲಿರುವ ಮನೆಯ ಮಾಲೀಕ, ಹೊಂಡ ವಿಸ್ತಾರವಾಗುತ್ತಿರುವ ಬಗ್ಗೆ ಚಿಂತೆಗೀಡಾಗಿದ್ದಾರೆ. ಹೊಂಡ ಯಾವ ಸಮಯದಲ್ಲಿ ಬೇಕಾದರು ನಮ್ಮ ಮನೆಯನ್ನು ನುಂಗಬಹುದು, ಈ ಮನೆಯನ್ನು ಬಹಳ ಕಷ್ಟಪಟ್ಟು, ಹಲವು ತ್ಯಾಗಗಳನ್ನು ಮಾಡಿ ನಿರ್ಮಾಣ ಮಾಡಿದ್ದೆವು, ಆದರೆ ಇನ್ನೆಂದು ಇದು ತಮ್ಮ ಪಾಲಾಗಿ ಉಳಿಯುವುದಿಲ್ಲ ಎಂದು ಆ ಮನೆಯ ಮಾಲೀಕ ದಂಪತಿ ಅಳಲು ತೋಡಿಕೊಂಡಿದ್ದಾರೆ. ಇನ್ನು ಹೋಲ್ ಬಗ್ಗೆ ವಿಜ್ಞಾನಿಗಳು ಹೇಳುವುದೇನೆಂದರೆ..ದೇಶದಲ್ಲಿ ನಡೆಯುತ್ತಿರುವ ಮೈನಿಂಗ್‍ನಿಂದ ಭೂಮಿ ಒಳಗೆ ಹಾಗೂ ಮೆಲ್ಮಣ್ಣಿನ ಗುಣಮಟ್ಟ ಹಾಳಾಗಿದೆ. ನೆಲೆ ಮೃದುವಾಗಿದೆ, ಅದಕ್ಕೆ ಈ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಈಗ ಹೊಂಡವಾಗುತ್ತಿರುವ ಈ ಫಾರ್ಮರ್ ಲ್ಯಾಂಡ್ ನೂರಾರು ವರ್ಷದ ಮುಂಚೆ ನೀರಿನ ಕ್ವಾರಿಯಾಗಿತ್ತಂತೆ. ಅದನ್ನು ಮೈನ್ ಮಾಡಿ ಸಮತಟ್ಟಾದ ನೆಲೆವನ್ನಾಗಿ ಮಾಡಿದ್ದಾರೆ. ಅದೀಗ ದೊಡ್ಡ ವ್ಯವಸಾಯ ಭೂಮಿಯಾಗಿ ವಿಸ್ತಾರವಾಗಿತ್ತು. ಆದರೆ ಎಷ್ಟೋ ವರ್ಷಗಳಾದ ಮೇಲೆ ಇದೀಗ ತನ್ನ ನಿಜ ಸ್ವರೂಪವನ್ನು ತೋರುತ್ತಿದೆ. ಈ ಹೊಂಡದ ಒಳಗೆ ಇಷ್ಟರ ಮಟ್ಟಿಗೆ ಇರುವ ನೀರು ಅದೇ ಕ್ವಾರಿಯಲ್ಲಿ ಇದ್ದ ನೀರು ಎನ್ನಲಾಗ್ತಾ ಇದೆ.

ಈ ಘಟನೆಗೆ ಇನ್ನೊಂದು ರೂಪ ಕಟ್ಟುವಂತೆ, ಆ ಜಾಗದ ಸುತ್ತ ಮುತ್ತ ಎಲ್ಲರು ಇದು ದೆವ್ವ ಪಿಶಾಚಿಯ ಆಟ ಎನ್ನುವ ಮಾತುಗಳನ್ನು ಮುಂದಿಡುತ್ತಿದ್ದಾರೆ. ಇದರಿಂದ ಆ ಊರಿನ ಜನತೆ ಇನ್ನಷ್ಟು ಭಯ ಹಾಗೂ ಚಿಂತೆಗೆ ಒಳಗಾಗಿದ್ದಾರೆ. ಈ ಪ್ರಾಕೃತಿಕ ಘಟನೆಗಳಿಗೆ ಇಲ್ಲದ ಕಥೆ ಕಟ್ಟ ಬೇಡಿ ಎಂದು ಅಲ್ಲಿನ ಅಧಿಕಾರಿಗಳು ಕೇಳಿಕೊಳ್ಳುತ್ತಿದ್ದಾರೆ. ಇನ್ನು ಅಲ್ಲಿನ ಸುತ್ತಮುತ್ತಲಿನ ಜನರನ್ನು ಆ ಜಾಗದಿಂದ ತೆರವುಗೊಳಿಸುತ್ತಿರುವ ಅಧಿಕಾರಿಗಳು, ಹತ್ತಿರದ ಮನೆಯಲ್ಲಿ ಇರುವವರಿಗೆ ಬೇರೆ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಇದರಿಂದ ಆಗುತ್ತಿರುವ ನಷ್ಟದ ಬಗ್ಗೆ ಯಾರು ಮಾತನಾಡುತ್ತಿಲ್ಲ ಎನ್ನುವುದು, ಮೆಕ್ಸಿಕೋದ ಪ್ಯೂಬ್ಲೂ ಪ್ರದೇಶದ ಚಿಂತೆ ಇದಾಗಿದೆ. ಸದ್ಯಕ್ಕೆ ಹೀಗೆ ಭೂಮಿ ತನ್ನ ರಾಕ್ಷಸಾಕಾರದ ಬಾಯನ್ನು ತೆಗೆದು ಸುತ್ತ ಮುತ್ತಲಿನ ನೆಲವನ್ನು ನುಂಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪ್ರಾಕೃತಿಕ ವಿಸ್ಮಯಕ್ಕೆ ಜನ ಬೆರಗಾಗಿರೋದಂತು ಸುಳ್ಳಲ್ಲ. ಮಾಡಿದುಣ್ಣೋ ಮಾರಾಯ ಅನ್ನೋ ಹಾಗೆ, ಹಿಂದೆ ಪ್ರಕೃತಿಗೆ ನಾವು ಮಾಡಿರುವ ತೊಂದರೆಗಳೇ ಇಂದು ನಾವು ಅನುಭವಿಸಬೇಕಾಗಿದೆ. ಈ ಹೊಂಡ ಇನ್ನು ಹೆಚ್ಚಾಗಿ ಬೆಳಯಬಹುದು, ಇನ್ನು ಅವಾಂತರಗಳನ್ನು ಸೃಷ್ಟಿಸಿದರೂ ಅಚ್ಚರಿ ಪಡಬೇಕಾಗಿಲ್ಲ.